ಕೊಪ್ಪಳ: ಕೊಪ್ಪಳ ತಾಲೂಕಿನ ಮಂಗಳಾಪೂರ ಗ್ರಾಮದಲ್ಲಿನ ಖಬರಸ್ತಾನದಲ್ಲಿ ಮಂಗಳವಾರ ಸಂಜೆ ಆಂಜನೇಯ ದೇವಸ್ಥಾನದ ಕೊಂಡ ಪತ್ತೆಯಾಗಿದೆ. ಖಬರಸ್ತಾನದ ಭೂಮಿ ವಿವಾದದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸರ್ವೇ ಕೈಗೊಂಡಿದ್ದು, ಈ ವೇಳೆ ಆಂಜನೇಯನ ಕೊಂಡ ಬೆಳಕಿಗೆ ಬಂದಿದೆ.
ಈಗಿರುವ ಖಬರಸ್ತಾನದ ಜಾಗದಲ್ಲಿ ಈ ಮುಂಚೆ ಮಂಗಳಾಪೂರ ಗ್ರಾಮವಿತ್ತು. ಹಳ್ಳದ ಪ್ರವಾಹದ ವೇಳೆ ಗ್ರಾಮವನ್ನು ಪಕ್ಕದಲ್ಲಿ ಸ್ಥಳಾಂತರ ಮಾಡಲಾಗಿತ್ತು. ಬಳಿಕ ಗ್ರಾಮ ಇದ್ದ ಜಾಗದಲ್ಲಿ ಖಬರಸ್ತಾನ ನಿರ್ಮಾಣವಾಗಿತ್ತು. ಅಂದಿನಿಂದ ಗ್ರಾಮದ ಹಿಂದೂಗಳು ಖಬರಸ್ತಾನ ಜಾಗ ಎಲ್ಲರಿಗೂ ಸೇರಬೇಕೆಂದು ವಾದಿಸುತ್ತಾ ಬಂದಿದ್ದರು.
ಈ ಕುರಿತು ಹಿಂದೂ ಧರ್ಮಿಯರು ಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಈ ಹಿನ್ನೆಲೆಯಲ್ಲಿ ಖಬರಸ್ತಾನ ಜಾಗದ ವಸ್ತು ಸ್ಥಿತಿ ವರದಿ ನೀಡಲು ನ್ಯಾಯಾಲಯ ಜಿಲ್ಲಾಡಳಿತಕ್ಕೆ ಆದೇಶಿಸಿತ್ತು. ವಸ್ತು ಸ್ಥಿತಿ ಅಧ್ಯಯನದ ವೇಳೆ ಆಂಜನೇಯನ ಕೊಂಡ ಪತ್ತೆಯಾಗಿದೆ. ಖಬರಸ್ತಾನದ ಆಂಜನೇಯನ ಕೊಂಡ ಪತ್ತೆ ಬಳಿಕ ಗ್ರಾಮದಲ್ಲಿ ಎರಡೂ ಧರ್ಮೀಯರ ನಡುವೆ ಮಾತಿನ ಚಕಮಕಿಯೂ ನಡೆದಿದೆ.