ಕೊಪ್ಪಳ: ಪುಲ್ವಾಮಾ ದಾಳಿಯ ಪ್ರತೀಕಾರವಾಗಿ ವಾಯುಸೇನೆ ನಡೆಸಿದ ಏರ್ ಸ್ಟ್ರೈಕ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸಂಭ್ರಮಾಚರಣೆ ಮುಂದುವರೆದಿವೆ.
ಜಿಲ್ಲೆಯ ವಿವಿಧೆಡೆ ಒಂದಿಲ್ಲೊಂದು ರೀತಿಯಲ್ಲಿ ಜನರು ವಿಜಯೋತ್ಸವ ಆಚರಿಸುತ್ತಿದ್ದು, ತಡರಾತ್ರಿಯವರೆಗೂ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆದಿವೆ. ಜಿಲ್ಲೆಯ ಗಂಗಾವತಿ ನಗರದಲ್ಲಿ ವಿಶಿಷ್ಠವಾಗಿ ಸಂಭ್ರಮಾಚರಣೆ ಮಾಡಿದ್ದು, ಅಲ್ಲಿನ ಆರಾಧನ ನೃತ್ಯ ತಂಡದವರು ನೃತ್ಯ ಮಾಡುವ ಮೂಲಕ ಸಂಭ್ರಮಿಸಿದರು.
ದೇಶಭಕ್ತಿ ಸಾರುವ ಗೀತೆಗೆ ನೃತ್ಯ ಮಾಡಿ ವಾಯುಸೇನೆ ನಡೆಸಿದ ಏರ್ ಸ್ಟ್ರೈಕ್ನ್ನು ಸಂಭ್ರಮಿಸಿದ್ದು, ಇದಕ್ಕೆ ಸಾರ್ವಜನಿಕರು ಸಾಥ್ ನೀಡಿದರು.