ಕೊಪ್ಪಳ : ಭೂಮಾಪಕ ರುದ್ರೇಶ್ ಎಂಬಾತ ಅರ್ಜಿದಾರರ ಕೆಲಸ ಮಾಡಿಕೊಡಲು 5000 ರೂಪಾಯಿ ಲಂಚದ ಹಣ ಪಡೆಯುವಾಗ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾನೆ.
ತಾಲೂಕಿನ ಹನುಮನಹಟ್ಟಿ ಗ್ರಾಮದ ಹನುಮಪ್ಪ ಮ್ಯಾದನೇರಿ ಎಂಬುವರು ಜಮೀನಿನ ಪಾಲುವಾಟ್ನಿಗೆ ಅರ್ಜಿ ಹಾಕಿದ್ದಾರೆ. ಸರ್ವೇ ಕಚೇರಿಯ ಭೂಮಾಪಕ ರುದ್ರೇಶ್ ಎಂಬಾತ ಅರ್ಜಿದಾರರ ಕೆಲಸ ಮಾಡಿಕೊಡಲು 20 ರಿಂದ 25 ಸಾವಿರ ರೂಪಾಯಿವರೆಗೂ ಖರ್ಚಾಗುತ್ತದೆ ಎಂದು ಸುಳ್ಳು ಹೇಳಿ ಮುಂಗಡವಾಗಿ 16,000 ರೂ. ಪಡೆದಿದ್ದಾನೆ.
ಇನ್ನುಳಿದ 5000 ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಇದರಿಂದ ಬೇಸತ್ತ ಅರ್ಜಿದಾರರು ಕೊಪ್ಪಳದ ಎಸಿಬಿ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಎಸಿಬಿ ಪೊಲೀಸರು ಆರೋಪಿಗಾಗಿ ಬಲೆ ಬೀಸಿ ಇಂದು ಕೊಪ್ಪಳ ಎಸಿಬಿ ಠಾಣೆಯ ಡಿಎಸ್ಪಿ ಶಿವಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಓದಿ: 'ಬಿಬಿಎಂಪಿ ವಾರ್ಡ್ ವಿಂಗಡನೆ ಕಾರ್ಯ ಕೇಶವ ಕೃಪಾ, ಬಿಜೆಪಿ ಕಚೇರಿಯಲ್ಲಿ ನಡೆದಿದೆ'