ETV Bharat / state

ಅಬ್ಬಬ್ಬಾ ಇದೇನು ಪ್ರಕೃತಿ ಸೊಬಗು: ಭತ್ತದ ಖಣಜ ಗಂಗಾವತಿಯ ಮನೋಹರ ದೃಶ್ಯ - Beautiful view Of Gangavati

ಅರ್ಜುನ್​ ಜಿ.ಆರ್ ಎಂಬ ಯುವ ಹವ್ಯಾಸಿ ಛಾಯಾಗ್ರಾಹಕನೊಬ್ಬ ಗಂಗಾವತಿಯ ಸೊಬಗನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

Beautiful view that Gangavati
Beautiful view that Gangavati
author img

By

Published : Jun 21, 2023, 1:30 PM IST

ಭತ್ತದ ಖಣಜ ಗಂಗಾವತಿಯ ಮನೋಹರ ದೃಶ್ಯ

ಗಂಗಾವತಿ: ಯುವ ಹವ್ಯಾಸಿ ಛಾಯಾಗ್ರಾಹಕರೊಬ್ಬರು ಭತ್ತದ ಖಣಜ ಗಂಗಾವತಿ ಸುತ್ತಲಿನ ವೈಭವವನ್ನು ಜನರ ಕಣ್ಣಿಗೆ ಕಟ್ಟಿಕೊಡುವಲ್ಲಿ ಯಶ ಕಂಡಿದ್ದಾರೆ. ಬರೋಬ್ಬರಿ ಒಂದು ವರ್ಷಗಳ ಕಾಲ ಚಿತ್ರೀಕರಣ ಮಾಡಿರುವ ಅರ್ಜುನ್​ ಜಿ.ಆರ್ ಎಂಬ ಯುವ ಹವ್ಯಾಸಿ ಛಾಯಾಗ್ರಾಹಕ, ಈ ದೃಶ್ಯ ಕಾವ್ಯದಲ್ಲಿ ಗಂಗಾವತಿಯ ಸೊಬಗನ್ನು ವರ್ಣಿಸಿದ್ದಾರೆ.

ಅತಿ ವಿರಳವಾಗಿರುವ ದೃಶ್ಯ, ಜನ ಸಹಜವಾಗಿ ನೋಡಲು ಸಾಧ್ಯವಾಗದೇ ಇರುವ ತಾಣಗಳನ್ನು, ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕು ಅನ್ನಿಸುವ ಗಂಗಾವತಿ ಸುತ್ತಲಿನ ಪರಿಸರವನ್ನು ಸೆರೆ ಹಿಡಿಯುಗ ಮೂಲಕ ಗಮನ ಸೆಳೆಸಿದ್ದಾರೆ. ಗಂಗಾವತಿ ಸುತ್ತಲಿನ ಕೇವಲ ನೈಸರ್ಗಿಕ ದೃಶ್ಯ ಮಾತ್ರವಲ್ಲದೇ, ಕೃಷಿ, ಬೆಟ್ಟಗುಡ್ಡಗಳ ಸಾಲು, ಅಂಜನಾದ್ರಿ, ನವವೃಂದಾವನದಲ್ಲಿ ಐಕ್ಯರಾಗಿರುವ ನವ ಯತಿಗಳ ತಾಣ, ಆನೆಗೊಂದಿ ರಮ್ಯನೋಟ, ಬೃಹತ್ ಬೆಟ್ಟದ ಸಾಲುಗಳನ್ನು ತಮ್ಮ ಕ್ಯಾಮರಾದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

ಭತ್ತದ ಖಣಜ ಗಂಗಾವತಿಯ ಮನೋಹರ ದೃಶ್ಯ
ಭತ್ತದ ಖಣಜ ಗಂಗಾವತಿಯ ಮನೋಹರ ದೃಶ್ಯ

ಇದನ್ನೂ ಓದಿ: 2ನೇ ದಿನವೂ ಮುಂದುವರಿದ ತೆರವು ಕಾರ್ಯ: ಆನೆಗೊಂದಿ ಹೋಬಳಿ ಗ್ರಾಮಗಳಲ್ಲಿ 24 ಅನಧಿಕೃತ ರೆಸಾರ್ಟ್​ ನೆಲಸಮ

ಮಳೆಗಾಲ, ಚಳಿಗಾಲ ಮತ್ತು ಬೇಸಿಗೆಯಂತ ಮೂರು ಕಾಲದಲ್ಲಿ ಪ್ರಾಕೃತಿಕ ವಿಸ್ಮಯ ಹೇಗಿರುತ್ತದೆ ಎಂಬ ದೃಶ್ಯಗಳನ್ನು ಸೆರೆ ಹಿಡಿಯಲು ಅರ್ಜಿನ್​ ಪಟ್ಟಪಾಡು ಅಷ್ಟಿಷ್ಟಲ್ಲ. ಒಮ್ಮೊಮ್ಮೆ ಬೆಳಗ್ಗೆ ನಾಲ್ಕು ಗಂಟೆಗೆ ದ್ರೋಣ್ ಕ್ಯಾಮರಾ ಹಿಡಿದು ಹೊರಟರೆ, ಮತ್ತೊಮ್ಮ ರಾತ್ರಿ 10 ಗಂಟೆಗೆ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.

ಭತ್ತದ ಖಣಜ ಗಂಗಾವತಿಯ ಮನೋಹರ ದೃಶ್ಯ
ಭತ್ತದ ಖಣಜ ಗಂಗಾವತಿಯ ಮನೋಹರ ದೃಶ್ಯ

ಚಳಿಗಾಲದ ಮಬ್ಬುಗತ್ತಲಿನಲ್ಲಿ ಇಬ್ಬನಿಯನ್ನು ಛೇದಿಸಿಕೊಂಡು, ಸುತ್ತಲಿನ ಹಚ್ಚ ಹರಿಸಿರಿ ಪೈರಿನ ಮಧ್ಯೆ ಗಂಗಾವತಿಯತ್ತ ಬರುವ ರೈಲಿನ ನೋಟ, ಒಂದು ದೊಡ್ಡ ಟಾರ್ಚ್​ನಂತೆ ಈ ವಿಡಿಯೋದಲ್ಲಿ ಮನೋಜ್ಞವಾಗಿ ಸೆರೆಯಾಗಿದೆ. ಸೂರ್ಯೋದಯದಿಂದ ಹಿಡಿದು ಸೂರ್ಯಾಸ್ತವಾಗುವ ಸಮಯ, ತುಂಗಭದ್ರಾ ನದಿ ತುಂಬಿ ಹರಿಯುವಾಗ, ಬರಿದಾದ ಒಡಲು, ಕಂಪ್ಲಿ-ಗಂಗಾವತಿ ಸೇತುವೆ, ಕಡೆಬಾಗಿಲು ಸೇತುವೆ, ತುಂಗಭದ್ರಾ ನದಿ ತುಂಬಿ ಹರಿದಾಗ ಉಂಟಾಗುವ ಭೀಭತ್ಸ ದೃಶ್ಯಗಳು ದ್ರೋಣ್ ಕಣ್ಣಲ್ಲಿ ಸೆರೆಯಾಗಿವೆ.

ಭತ್ತದ ಖಣಜ ಗಂಗಾವತಿಯ ಮನೋಹರ ದೃಶ್ಯ
ಭತ್ತದ ಖಣಜ ಗಂಗಾವತಿಯ ಮನೋಹರ ದೃಶ್ಯ

ಅಷ್ಟೇ ಅಲ್ಲ, ಮೂರು ಸಾವಿರ ವರ್ಷದ ಹಿಂದೆ ಜೀವಿಸಿದ್ದ ಶಿಲಾಯುಗದ ಮಾನವರ ಬೆಣಕಲ್​​ ಶಿಲಾಸಮಾಧಿಗಳು, ಸಣಾಪುರದ ಜಲಾಶಯ, ಗಂಗಾವತಿ ನಗರ, ಬೆಟ್ಟದಲ್ಲಿರುವ ವಾಣಿ ವೀರಭದ್ರೇಶ್ವರ ದೇಗುಲ, ತುಂಗಭದ್ರಾ ನದಿಯ ವಿಹಂಗಮ ದೃಶ್ಯಗಳನ್ನು ಅಧ್ಬುತವಾಗಿ ಸೆರೆ ಹಿಡಿಯಲಾಗಿದೆ. ಈ ದೃಶ್ಯ ಕಾವ್ಯಕ್ಕೆ ಮತ್ತಷ್ಟು ಇಂಪು ನೀಡುವಂತೆ ಸುಮಧರ ಹಿನ್ನೆಲೆ ಸಂಗೀತ ಜೋಡಿಸಿ ಜನರ ಮನತಣಿಸಲು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಯುವಕನ ಪರಿಶ್ರಮಕ್ಕೆ ಜನ ಶ್ಲಾಘಿಸುತ್ತಿದ್ದಾರೆ.

ಭತ್ತದ ಖಣಜ ಗಂಗಾವತಿಯ ಮನೋಹರ ದೃಶ್ಯ
ಭತ್ತದ ಖಣಜ ಗಂಗಾವತಿಯ ಮನೋಹರ ದೃಶ್ಯ
ಭತ್ತದ ಖಣಜ ಗಂಗಾವತಿಯ ಮನೋಹರ ದೃಶ್ಯ
ಭತ್ತದ ಖಣಜ ಗಂಗಾವತಿಯ ಮನೋಹರ ದೃಶ್ಯ

ಒಟ್ಟಾರೆ, ಈ ವಿಡಿಯೋ ಗಂಗಾವತಿ ಸುತ್ತಲಿನ ಪ್ರಾಕೃತಿಕ, ಧಾರ್ಮಿಕ ಮಹತ್ವದ ತಾಣಗಳ ಸಮಗ್ರ ಚಿತ್ರಣ ತೆರೆದಿಡುತ್ತಿದೆ. ಚಿತ್ರೀಕರಣಕ್ಕೆ ಯುವಕ ಒಂದು ವರ್ಷ ಅವಧಿ ತೆಗೆದುಕೊಂಡು ಅಷ್ಟೇ ಸಮಾಧಾನದಿಂದ ಚಿತ್ರೀಕರಣ ಮಾಡಿದ್ದು ಅಭಿನಂದನಾರ್ಹ ಎಂದು ಸ್ಥಳೀಯರು ಕೊಂಡಾಡುತ್ತಿದ್ದಾರೆ.

ಭತ್ತದ ಖಣಜ ಗಂಗಾವತಿಯ ಮನೋಹರ ದೃಶ್ಯ
ಭತ್ತದ ಖಣಜ ಗಂಗಾವತಿಯ ಮನೋಹರ ದೃಶ್ಯ
ಭತ್ತದ ಖಣಜ ಗಂಗಾವತಿಯ ಮನೋಹರ ದೃಶ್ಯ
ಭತ್ತದ ಖಣಜ ಗಂಗಾವತಿಯ ಮನೋಹರ ದೃಶ್ಯ

ಇದನ್ನೂ ಓದಿ: ವಿಶ್ವದರ್ಜೆಯ ತಾಣಕ್ಕಾಗಿ ಬಜೆಟ್​ನಲ್ಲಿ ಅಂಜನಾದ್ರಿಗೆ ಮತ್ತೆ ನೂರು ಕೋಟಿ ಘೋಷಣೆ.. ಆ ಭಾಗದಲ್ಲಿ ಸಂತಸದ ಹೊನಲು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.