ETV Bharat / state

ಮೊಬೈಲ್​ಗಾಗಿ ಕೂಲಿ ಕೆಲಸ ಮಾಡಿದ ಬಾಲಕ: ವಿದ್ಯೆಗಾಗಿ ಭೂಮಿ ನಂಬಿದ ವಿದ್ಯಾರ್ಥಿ - koppal News

ಕುಕನೂರು ತಾಲೂಕಿನ ಭಾನಾಪುರ ಗ್ರಾಮದ ವೀರೇಶ ಚರಂತಿಮಠ ಎಂಬ ವಿದ್ಯಾರ್ಥಿ ತನ್ನ ಆನ್​ಲೈನ್ ಶಿಕ್ಷಣಕ್ಕೆ ಬೇಕಾದ ಮೊಬೈಲ್ ತೆಗೆದುಕೊಳ್ಳಲು ಕೂಲಿ ಕೆಲಸ ಮಾಡಿದ್ದಾನೆ.

koppal
ಮೊಬೈಲ್​ಗಾಗಿ ಕೂಲಿ ಕೆಲಸ ಮಾಡಿದ ಬಾಲಕ ವೀರೇಶ ಚರಂತಿಮಠ
author img

By

Published : Aug 26, 2021, 8:53 AM IST

Updated : Aug 26, 2021, 1:12 PM IST

ಕೊಪ್ಪಳ: ಆನ್​ಲೈನ್ ಶಿಕ್ಷಣಕ್ಕೆ ಬೇಕಾದ ಮೊಬೈಲ್ ಕೊಡಿಸಲಾಗದೆ ಅನೇಕ ಪಾಲಕರು ಕೈಚೆಲ್ಲಿ ಕುಳಿತಿದ್ದಾರೆ. ಹೆತ್ತವರ ಕಷ್ಟ ನೋಡಿಕೊಂಡು ಮಕ್ಕಳು ಸಹ ಮೊಬೈಲ್ ಇಲ್ಲದಿದ್ದರೂ ಪರವಾಗಿಲ್ಲ ಎಂದು ಸುಮ್ಮನೆ ಇರುವಂತಾಗಿದೆ. ಆದರೆ ಇಂತಹ ಸನ್ನಿವೇಶಗಳಲ್ಲಿ ಕೆಲ ವಿದ್ಯಾರ್ಥಿಗಳು ತಾವೇ ಕೆಲಸ ಮಾಡಿ ಮೊಬೈಲ್ ತೆಗೆದುಕೊಂಡು ತರಗತಿಗೆ ಹಾಜರಾಗಿರುವ ನಿದರ್ಶನಗಳಿವೆ.

ಅದರಂತೆ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಗ್ರಾಮದ ವೀರೇಶ ಚರಂತಿಮಠ ಎಂಬ ವಿದ್ಯಾರ್ಥಿ ತನ್ನ ಆನ್​ಲೈನ್ ಶಿಕ್ಷಣಕ್ಕೆ ಬೇಕಾದ ಮೊಬೈಲ್ ತೆಗೆದುಕೊಳ್ಳಲು ಕೂಲಿ ಕೆಲಸ ಮಾಡಿದ್ದಾನೆ.

ಬಾಲಕನಿಗೆ ಆನ್​ಲೈನ್ ಮೂಲಕ ತರಗತಿಗೆ ಹಾಜರಾಗಬೇಕಾದರೆ ಮೊಬೈಲ್ ಅಗತ್ಯವಾಗಿತ್ತು. ಆದರೆ ಕುಟುಂಬ ಆರ್ಥಿಕವಾಗಿ ಸದೃಢವಾಗಿಲ್ಲ. ಹೀಗಾಗಿ ತಾನೇ ದುಡಿದು ಮೊಬೈಲ್ ತೆಗೆದುಕೊಳ್ಳಲು ಲಾಕ್​ಡೌನ್ ಅವಧಿಯಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಈ ಮೂಲಕ ಸುಮಾರು 20 ಸಾವಿರ ರೂ. ಸಂಪಾದಿಸಿ ಅದರಲ್ಲಿ 10 ಸಾವಿರ ರೂಪಾಯಿ ಕೊಟ್ಟು ಮೊಬೈಲ್​ ಖರೀದಿಸಿದ್ದಾನೆ.

ಮೊಬೈಲ್​ಗಾಗಿ ಕೂಲಿ ಕೆಲಸ ಮಾಡಿದ ಬಾಲಕ ವೀರೇಶ ಚರಂತಿಮಠ

"ತಂದೆ-ತಾಯಿ ಬಡವರಾಗಿರುವುದರಿಂದ ಮೊಬೈಲ್ ಕೊಡಿಸಲು ಆಗದ ಸ್ಥಿತಿ ನೋಡಿ ನಾನೂ ಹೊಲದ ಕೆಲಸಗಳಲ್ಲಿ ಕೂಲಿ ಮಾಡಿ ಹಣ ಸಂಪಾದಿಸಿ ಮೊಬೈಲ್ ತೆಗೆದುಕೊಂಡಿದ್ದೇನೆ. ಸಂಪಾದಿಸಿದ ಹಣದಲ್ಲಿ ಮೊಬೈಲ್ ತೆಗೆದುಕೊಂಡು, ಉಳಿದ ಹಣವನ್ನು ಕುಟುಂಬ ನಿರ್ವಹಣೆಗೆ ನೀಡಿದ್ದೇನೆ" ಎಂದು ಬಾಲಕ ವೀರೇಶ್​ ಚರಂತಿಮಠ ಹೇಳುತ್ತಾನೆ.

ಇನ್ನು ಇಂತಹ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬೇಕಾದ ಅಗತ್ಯ ಸಹಾಯವನ್ನು ಸರ್ಕಾರ ಮಾಡಬೇಕು ಎಂದು ಸ್ಥಳೀಯ ಯುವಕ ಪ್ರಭುಸ್ವಾಮಿ ಗೊಂಡಬಾಳ ಆಗ್ರಹಿಸಿದ್ದಾರೆ.

Last Updated : Aug 26, 2021, 1:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.