ಗಂಗಾವತಿ: ಉಪ ವಿಭಾಗ ಸರ್ಕಾರಿ ಆಸ್ಪತ್ರೆಯಲ್ಲಿ ವಿಚಿತ್ರ ಮಗುವೊಂದು ಜನಿಸಿದ್ದು, ಗದೆ ಆಕಾರದ ಒಂದೇ ಕಾಲು ಇದ್ದು ಜನಿಸುವಾಗಲೇ ಮಗು ಸಾವನ್ನಪ್ಪಿದೆ.
ಗರ್ಭಾವಸ್ಥೆಯಲ್ಲಿ ಸರಿಯಾಗಿ ಬೆಳವಣಿಗೆ ಹೊಂದಿರದ ಕಾರಣ, ಮಗುವಿನ ಆಕಾರ ವಿರೂಪವಾಗಿದ್ದು, ಇದೀಗ ಮಗುವನ್ನು ಪಾಲಕರಿಗೆ ಹಸ್ತಾಂತರಿಸಲಾಗಿದೆ.
ಸಿಂಗನಾಳ ಗ್ರಾಮದ ಮಹಿಳೆಗೆ ಈ ಮಗು ಜನಿಸಿದ್ದು, ಮೂರು ತಿಂಗಳಲ್ಲಿ ಸ್ಕ್ಯಾನಿಂಗ್ ಮಾಡಿದ್ದಾಗಲೆ ವೈದ್ಯರು ಮಗುವಿನ ಅಸಹಜ ಬೆಳವಣಿಗೆಯ ಬಗ್ಗೆ ತಿಳಿಸಿದ್ದರು ಎನ್ನಲಾಗಿದೆ. ಆದರೆ ಕಾಲಕ್ರಮೇಣ ಸರಿಯಾಗಬಹುದು ಎಂಬ ನಂಬಿಕೆಯಿಂದ ತಾಯಿ ಮಗುವನ್ನು ತೆಗೆಸಲು ಒಪ್ಪಿಗೆ ಸೂಚಿಸಿರಲಿಲ್ಲ.
ಇದೀಗ ಸಹಜ ಹೆರಿಗೆಯಾಗಿದ್ದು ಮಗು ಅಸಹಜ ಬೆಳವಣಿಗೆಯಿಂದ ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.