ಕೊಪ್ಪಳ: ಕೆರೆಯಲ್ಲಿ ಈಜಲು ತೆರಳಿದ್ದ ವೇಳೆ ಆಯತಪ್ಪಿ ಬಿದ್ದು ವಿದೇಶಿ ಪ್ರಜೆಯೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರ ಕೆರೆಯಲ್ಲಿ ನಡೆದಿದೆ.
ಇಂಗ್ಲೆಂಡ್ ದೇಶದ ಪ್ರಜೆ ಫ್ರಾನ್ಸಿಸ್ ಅಯಾನ್ (68) ಮೃತ ವ್ಯಕ್ತಿ. ಹಂಪಿಯ ಪ್ರವಾಸಕ್ಕೆಂದು ಫ್ರಾನ್ಸಿಸ್ ಭಾರತಕ್ಕೆ ಬಂದಿದ್ದರು. ಫ್ರಾನ್ಸಿಸ್ ಗಂಗಾವತಿ ತಾಲೂಕಿನ ಹನುಮನಳ್ಳಿಯ ಬಾಬಾ ಕೆಫೆಯಲ್ಲಿ ಉಳಿದುಕೊಂಡಿದ್ದರು. ಸಾಣಾಪುರ ಕೆರೆಯಲ್ಲಿ ಈಜಲು ಹೋದ ವೇಳೆ ಆಯತಪ್ಪಿ ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ.ಈ ಸಂಬಂಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.