ಕುಷ್ಟಗಿ (ಕೊಪ್ಪಳ): ಮುಳ್ಳು-ಕಂಟಿಗಳಲ್ಲಿ ಮುಚ್ಚಿ ಹೋಗಿದ್ದ ಪ್ರಾಚೀನ ಕಾಲದ ಐತಿಹಾಸಿಕ ಸ್ಮಾರಕ ದೇಗುಲ ಕೋರಿಲಿಂಗೇಶ್ವರ ದೇವಸ್ಥಾನಕ್ಕೆ ಕಡೆಗೂ ಪುರಸಭೆಯಿಂದ ಕಾಯಕಲ್ಪ ಸಿಕ್ಕಿದ್ದು, ಸೋಮವಾರ ಸ್ವಚ್ಚತೆ ಕಾರ್ಯ ಭರದಿಂದ ನಡೆಯಿತು.
ಕುಷ್ಟಗಿ ಪಟ್ಟಣದ ಹೊರವಲಯದ ಟೆಂಗುಂಟಿ ಕ್ರಾಸ್ ನಲ್ಲಿರುವ, ಪ್ರಾಚೀನ ಕಾಲದ ಸ್ಮಾರಕ ದೇಗುಲ ನಿರ್ಲಕ್ಷೀಡಾಗಿತ್ತು. ಈ ಹಿನ್ನೆಲೆಯಲ್ಲಿ ಮುಳ್ಳುಕಂಟಿ ಬೆಳೆದು ಕಾಲಿಡದಂತಹ ಪರಿಸ್ಥಿತಿಗೆ ಕಾರಣವಾಗಿತ್ತು. ಕಡೆಗೂ ಸ್ಪಂಧಿಸಿದ ಪುರಸಭೆ, ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ನೇತೃತ್ವದಲ್ಲಿ ಸ್ವಚ್ಚತೆ ಹಾಗೂ ಜೆಸಿಬಿಯಿಂದ ಮುಳ್ಳುಕಂಟಿಗಳನ್ನು ತೆರವು ಕಾರ್ಯನಡೆಯಿತು.
ಜೆಸಿಬಿಯಿಂದ ಮುಳ್ಳುಕಂಟಿಗಳನ್ನುನತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದಂತೆ ಮುಳ್ಳುಕಂಟಿಯಲ್ಲಿ ಹುದುಗಿದ್ದ ಕೋರಿಲಿಂಗೇಶ್ವರ ದೇಗುಲ ಬೆಳಕಿಗೆ ಬಂತು. ಸರ್ವಿಸ್ ರಸ್ತೆಯಲ್ಲಿ ಸಂಚರಿಸುವವರು, ಇಲ್ಲೊಂದು ಇಂತಹ ದೇವಸ್ಥಾನ ಇರುವ ಕುರಿತು ಅಚ್ಚರಿವ್ಯಕ್ತಪಡಿಸಿರುವುದು ಕಂಡು ಬಂತು.
ಸ್ವಚ್ಚತೆ ಕಾರ್ಯದ ಸಂಧರ್ಭದಲ್ಲಿ ಪುರಸಭೆ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ, ನೈರ್ಮಲ್ಯ ಅಧಿಕಾರಿ ಮಹೇಶ ಅಂಗಡಿ, ಪಾಂಡುರಂಗ ಆಶ್ರೀತ, ಬಸವರಾಜ್ ಗಾಣಗೇರ, ಶೌಕತ್ ಕಾಯಿಗಡ್ಡಿ, ಬಾವುದ್ದೀನ್,ಅನ್ವರ್ ಅತ್ತಾರ, ಮಂಜುನಾಥ ಕಟ್ಟಿಮನಿ ಮತ್ತಿತರಿದ್ದರು.