ETV Bharat / state

ಕೊಪ್ಪಳದಲ್ಲಿ ಕೊರೊನಾ ಕೋಲಾಹಲ: ಒಂದೇ ದಿನ 82 ಜನರಿಗೆ ಪಾಸಿಟಿವ್!​

ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ 8 ಜನರು ಬಲಿಯಾಗಿದ್ದು, 106 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು 218 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.

koppal
ಕೊಪ್ಪಳದಲ್ಲಿ ಕೊರೊನಾ ಕೋಲಾಹಲ
author img

By

Published : Jul 13, 2020, 9:54 PM IST

ಕೊಪ್ಪಳ: ಜಿಲ್ಲೆಯಲ್ಲಿಂದು ಕೊರೊನಾ ಸ್ಪೋಟಗೊಂಡಿದ್ದು, ಒಂದೇ ದಿನ ಬರೋಬ್ಬರಿ 82 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 332 ಕ್ಕೇರಿದೆ.

koppal
ಕೊಪ್ಪಳದಲ್ಲಿ ಕೊರೊನಾ ಕೋಲಾಹಲ

ದಿನೇ ದಿನೇ‌ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದ್ದು, ಕುಕನೂರು ಪೊಲೀಸ್‌ ಠಾಣೆಯ ಮೂರು ಜನ ಮುಖ್ಯ ಕಾನ್ಸ್​ಟೇಬಲ್​​​ ಸೇರಿದಂತೆ ಇಂದು ಒಟ್ಟು 82 ಜನರಿಗೆ ಪಾಸಿಟಿವ್ ದೃಢಪಟ್ಟಿದೆ. ಈ ಕುರಿತಂತೆ ಜಿಲ್ಲಾಡಳಿತ ಮಾಹಿತಿ ನೀಡಿದ್ದು ಐಎಲ್ಐ ಪ್ರಕರಣಗಳಲ್ಲಿ 32, ಪ್ರಾಥಮಿಕ ಸಂಪರ್ಕಿತರ ಪ್ರಕರಣಗಳಲ್ಲಿ 18 ಜನರಿಗೆ ಹಾಗೂ ವಿವಿಧ ಭಾಗಳಿಂದ ಪ್ರಯಾಣ ಮಾಡಿ ಬಂದಿರುವ (Domestic Travellers) ಪ್ರಕರಣಗಳ ಪೈಕಿ 32 ಸೇರಿ ಇಂದು ಒಟ್ಟು 82 ಜನರಿಗೆ ಪಾಸಿಟಿವ್ ದೃಢಪಟ್ಟಿದೆ‌ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

ಈವರೆಗೆ ಜಿಲ್ಲೆಯಲ್ಲಿ ಸೋಂಕಿಗೆ 8 ಜನರು ಬಲಿಯಾಗಿದ್ದು, 106 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು 218 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ. ದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರೋದು ಜಿಲ್ಲೆಯ ಜನರಲ್ಲಿ ಭೀತಿ ಹೆಚ್ಚಾಗುವಂತೆ ಮಾಡಿದೆ. ಇಂದು ಒಂದೇ ದಿನ 82 ಜನರಿಗೆ ಪಾಸಿಟಿವ್ ದೃಢವಾಗಿರೋದು ಜನರ ಭೀತಿಯನ್ನು ಇನ್ನಷ್ಟು ಹೆಚ್ಚು ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.