ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಹೆಚ್ಚಾಗುತ್ತಿದ್ದು, ನಿನ್ನೆ 8 ಹೊಸ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 139ಕ್ಕೆ ಏರಿದೆ.
ಪ್ರಾಥಮಿಕ ಸಂಪರ್ಕಿತರು, ದ್ವಿತೀಯ ಸಂಪರ್ಕಿತರು, ತೀವ್ರ ಉಸಿರಾಟ ತೊಂದರೆಗೊಳಗಾದವರು ಹಾಗೂ ಐಎಲ್ಐ ಪ್ರಕಣರಗಳು ಹಾಗೂ ಇನ್ನಿತರರು ಸೇರಿ ಈವರೆಗೆ ಒಟ್ಟು 12,076 ಜನರ ಸ್ಯಾಂಪಲ್ಸ್ ಸಂಗ್ರಹಿಸಲಾಗಿದೆ. ಈಗಾಗಲೇ 10,671 ಜನರ ವರದಿ ಬಂದಿದೆ. ಇನ್ನು 1,405 ಜನರ ವರದಿ ಬರಬೇಕಾಗಿದೆ.
ಇತ್ತೀಚಿಗೆ ಜಿಲ್ಲೆಯಲ್ಲಿ ಪತ್ತೆಯಾಗುತ್ತಿರುವ ಬಹುತೇಕ ಪಾಸಿಟಿವ್ ಪ್ರಕರಣಗಳಿಗೆ ಟ್ರಾವೆಲ್ ಹಿಸ್ಟರಿ ಇಲ್ಲ. ಸೋಂಕಿನ ಲಕ್ಷಣಗಳೂ ಇಲ್ಲ. ಹೀಗಾಗಿ ಸೋಂಕು ಸಮುದಾಯಕ್ಕೆ ಹರಡಿದೆಯೇ? ಎಂಬ ಅನುಮಾನ ಮೂಡುತ್ತಿದೆ.