ಕುಷ್ಟಗಿ: ಕುಷ್ಟಗಿ ಪಟ್ಟಣದ 5ನೇ ವಾರ್ಡ್ನಲ್ಲಿ 24x7 ನೀರು ಸೋರಿಕೆಯಾಗುತ್ತಿದ್ದರೂ ಪುರಸಭೆ ಇತ್ತ ಗಮನಹರಿಸದೇ ಇರುವುದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕುಷ್ಟಗಿ ಪಟ್ಟಣದ ಮಹಾತ್ವಾಕಾಂಕ್ಷಿ ಯೋಜನೆಯಾದ 24x7 ನೀರು ಪೂರೈಕೆ ಯೋಜನೆಯ ಪೈಪ್ಲೈನ್ ವಾಲ್ನಲ್ಲಿ ಕಳೆದ ವಾರದಿಂದ ನೀರು ಸೋರಿಕೆಯಾಗಿ ನೀರು ರಸ್ತೆವರೆಗೂ ಹರಿಯುತ್ತಿದೆ. ಆದರೆ ಸಂಬಂಧಿಸಿದ ಪುರಸಭೆ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳದೇ ಮೌನವಾಗಿರುವುದು ಸ್ಥಳೀಯರ ಬೇಸರಕ್ಕೆ ಕಾರಣವಾಗಿದೆ.
ಕೋಟ್ಯಂತರ ರೂ. ಖರ್ಚು ಮಾಡಿ ಆಲಮಟ್ಟಿ ಜಲಾಶಯದಿಂದ ಕೃಷ್ಣ ನದಿ ನೀರನ್ನು ಕುಷ್ಟಗಿ ಪಟ್ಟಣಕ್ಕೆ ಪೂರೈಕೆ ಎಷ್ಟರ ಮಟ್ಟಿಗೆ ಸಾರ್ಥಕವಾಗಿದೆ ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ.