ETV Bharat / state

ಪೋಕ್ಸೋ ಪ್ರಕರಣದ ಆರೋಪಿಗೂ ಕೊರೊನಾ ಪಾಸಿಟಿವ್ : 22 ಪೊಲೀಸರು ಕ್ವಾರಂಟೈನ್

author img

By

Published : Jul 13, 2020, 6:40 AM IST

ಫೋಕ್ಸೋ ಪ್ರಕರಣದಲ್ಲಿ ಬಂಧಿಯಾಗಿದ್ದ ಆರೋಪಿಗೆ ಈಗ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಆತನ ಪ್ರಾಥಮಿಕ ಸಂಪರ್ಕದಲ್ಲಿ 22 ಜನ ಪೊಲೀಸರನ್ನು ಕ್ವಾರಂಟೈನ್​ಗೆ ಒಳಪಡಿಸಿದ ಘಟನೆ ಕನಕಗಿರಿಯಲ್ಲಿ ನಡೆದಿದೆ.

Gangavati
22 ಪೊಲೀಸರಿಗೆ ಕ್ವಾರಂಟೈನ್

ಗಂಗಾವತಿ: ಫೋಕ್ಸೋ ಪ್ರಕರಣದಲ್ಲಿ ಬಂಧಿಯಾಗಿದ್ದ ಆರೋಪಿಗೆ ಈಗ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಆತನ ಪ್ರಾಥಮಿಕ ಸಂಪರ್ಕದಲ್ಲಿ 22 ಜನ ಪೊಲೀಸರನ್ನು ಕ್ವಾರಂಟೈನ್​ಗೆ ಒಳಪಡಿಸಿದ ಘಟನೆ ಕನಕಗಿರಿಯಲ್ಲಿ ನಡೆದಿದೆ.

ಠಾಣಾ ವ್ಯಾಪ್ತಿಯ ನಿರಲೂಟಿ ಗ್ರಾಮದಲ್ಲಿ ಇತ್ತೀಚೆಗೆ ಅಪ್ರಾಪ್ತ ಯುವತಿ ಅಪಹರಣ ಮಾಡಿ, ಸದ್ಯ ಕೊಪ್ಪಳದ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗೆ ಕೊರೊನಾ ಪಾಸಿಟಿವ್ ಖಚಿತವಾಗಿದೆ. ಆರೋಪಿಯನ್ನು ಬಂಧಿಸಿ ಕರೆತಂದ ವೇಳೆಯಲ್ಲಿದ್ದ ಪಿಎಸ್ಐ ಸೇರಿದಂತೆ ವಿಚಾರಣೆ ನಡೆಸಿದ ಹಾಗೂ ಅಂದು ಕರ್ತವ್ಯದಲ್ಲಿದ್ದ 22 ಪೊಲೀಸರು ಈಗ ಕ್ವಾರಂಟೈನ್ ಆಗಿದ್ದು, ಯಾರಿಗೆ ಪಾಸಿಟಿವ್ ಬರುತ್ತೋ ಎಂಬ ಆತಂಕದಲ್ಲಿದ್ದಾರೆ.

ಕನಕಗಿರಿ ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈ ಪೊಲೀಸ್ ಸಿಬ್ಬಂದಿಗಳನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.