ಗಂಗಾವತಿ (ಕೊಪ್ಪಳ): ಆತ್ಮಹತ್ಯೆ ಮಾಡಿಕೊಂಡ ಅರಣ್ಯ ಇಲಾಖೆಯ ನೌಕರನ ಕುಟುಂಬಕ್ಕೆ ಮುಂದಿನ ಎರಡು ವರ್ಷದವರೆಗೆ ಮಾಸಿಕ ತಲಾ 15 ಸಾವಿರ ರೂ. ನೀಡಲಾಗುವುದು ಎಂದು ಶಾಸಕ ಪರಣ್ಣ ಮುನವಳ್ಳಿ ತಿಳಿಸಿದ್ದಾರೆ.
![15,000 per month for the family of the died forest worker: MLA Paranna Munavalli](https://etvbharatimages.akamaized.net/etvbharat/prod-images/kn-gvt-01-21-mla-vist-who-commit-to-suicide-and-given-ashurence-pic-kac10005_21012021052953_2101f_1611187193_1087.jpg)
ಅರಣ್ಯ ಇಲಾಖೆಯ ಭದ್ರತಾ ಕಾವಲುಗಾರ ಹುದ್ದೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಲ್ಲಿಕಾರ್ಜುನ ಎಂಬುವವರು ಇತ್ತೀಚೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮೃತನ ಕುಟುಂಬಕ್ಕೆ ಭೇಟಿ ನೀಡಿದ ಶಾಸಕ ಪರಣ್ಣ ಮುನವಳ್ಳಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಮಲ್ಲಿಕಾರ್ಜುನ ಅವರಿಗೆ ಬರುತ್ತಿದ್ದ ವೇತನದಲ್ಲಿ ಕುಟುಂಬ ನಿರ್ವಹಣೆ ಕಷ್ಟಕರವಾಗಿತ್ತು. ಶೀಘ್ರ ಖಾಯಂ ಹುದ್ದೆಯಾಗಲಿದ್ದು, ವೇತನ ಹೆಚ್ಚಳವಾಗುವುದಾಗಿ ಆಗಾಗ ಹೇಳುತ್ತಿದ್ದರು ಎಂದು ಕುಟುಂಬಸ್ಥರು ಶಾಸಕರ ಬಳಿ ತಮ್ಮ ನೋವು ತೋಡಿಕೊಂಡರು.
ಓದಿ: 'ಆತ್ಮೀಯ ಅಭಿನಂದನೆಗಳು': ಬೈಡನ್, ಹ್ಯಾರಿಸ್ಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ ನಮೋ!
ಈ ವೇಳೆ ಶಾಸಕರು, ಅರಣ್ಯ ಇಲಾಖೆಯ ನೌಕರನ ಕುಟುಂಬಕ್ಕೆ ಮುಂದಿನ ಎರಡು ವರ್ಷದವರೆಗೆ ಮಾಸಿಕ ತಲಾ 15 ಸಾವಿರ ರೂ. ಹಣ ನೀಡಲಾಗುವುದು ಎಂದು ತಿಳಿಸಿದರು.