ಗಂಗಾವತಿ : ಓರ್ವ ಮಹಿಳೆ ಸೇರಿದಂತೆ ಕೊಪ್ಪಳ ಜಿಲ್ಲೆಯ ಎರಡು ಉಪ ವಿಭಾಗ ಸೇರಿದಂತೆ ನಾನಾ ಠಾಣೆಗಳಲ್ಲಿ ಒಟ್ಟು 1,400 ಜನ ರೌಡಿಶೀಟರ್ ಪಟ್ಟಿಯಲ್ಲಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೌಡಿಶೀಟರ್ ಪಟ್ಟಿಯಲ್ಲಿರುವ ವ್ಯಕ್ತಿಗಳ ಸನ್ನಡತೆ ಆಧರಿಸಿ ಅವರಿಗೆ ರೌಡಿಶೀಟ್‌ನಿಂದ ಮುಕ್ತಿ ಕಲ್ಪಿಸುವ ಯತ್ನ ನಡೆಸಲಾಗುತ್ತಿದೆ. ಇದಕ್ಕಾಗಿ ಇಲಾಖೆ ಕೆಲ ಮಾನದಂಡಗಳನ್ನು ಅನುಸರಿಸುತ್ತಿದೆ ಎಂದರು.
ಆಕಸ್ಮಿಕವಾಗಿ ಕೆಲವು ಬಾರಿ ವ್ಯಕ್ತಿಗಳ ಮೇಲೆ ರೌಡಿಶೀಟರ್ ದಾಖಲಾಗಿರುತ್ತದೆ. ಯಾವುದೇ ಅಪರಾಧ ಪ್ರಕರಣ ಇಲ್ಲದವರನ್ನು ರೌಡಿ ಪಟ್ಟಿಯಿಂದ ಖುಲಾಸೆ ಮಾಡಲಾಗುವುದು. ಅಪರಾಧದ ಹಿನ್ನೆಲೆ ಇದ್ದವರನ್ನು ಮುಂದುವರೆಸಲಾಗುವುದು.
ಈಗಾಗಲೇ ಮೊದಲ ಹಂತದಲ್ಲಿ ಜಿಲ್ಲೆಯಲ್ಲಿ 350ಕ್ಕೂ ಹೆಚ್ಚು ಜನರನ್ನು ರೌಡಿ ಪಟ್ಟಿಯಿಂದ ಕೈಬಿಡಲಾಗಿದೆ. ಇದೀಗ 2ನೇ ಹಂತದಲ್ಲಿ ಉಳಿದ 1,150 ಜನರಲ್ಲಿ ಮತ್ತಷ್ಟು ಜನರನ್ನು ಕೈಬಿಡಲಾಗುವುದು. ಠಾಣೆಗಳಲ್ಲಿ ಪರೇೆಡ್ ನಡೆಸಿದವರನ್ನು ಮಾತ್ರ ಪರಿಗಣಿಸಲಾಗುವುದು ಎಂದರು.
ನೂರಾರು ರೌಡಿಶೀಟರ್ಗಳ ಪರೇಡ್
ಹಲವು ವರ್ಷದಿಂದ ಸನ್ನಡತೆಯಿಂದ ಇರುವ ವ್ಯಕ್ತಿಗಳನ್ನು ರೌಡಿ ಪಟ್ಟಿಯಿಂದ ವಿಮುಕ್ತಿಗೊಳಿಸಲು ಕೊಪ್ಪಳ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಇದರ ಮೊದಲ ಭಾಗವಾಗಿ ಠಾಣಾವಾರು ಮಾಹಿತಿ ಸಂಗ್ರಹಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್, ನಗರ ಠಾಣೆಯಲ್ಲಿ ರೌಡಿಶೀಟರ್ ಪಟ್ಟಿಯಲ್ಲಿರುವ ವ್ಯಕ್ತಿಗಳ ಪರೇೆಡ್ ನಡೆಸಿದರು.
ಪಟ್ಟಿಯಲ್ಲಿರುವ ವ್ಯಕ್ತಿಗಳಿಂದ ಎಸ್ಪಿ ಖುದ್ದು ಮಾಹಿತಿ ಸಂಗ್ರಹಿಸಿದರು. ಗಂಗಾವತಿ ನಗರ ಠಾಣೆಯಲ್ಲಿ 252 ಜನ ರೌಡಿಶೀಟರ್ಗಳ ಪಟ್ಟಿಯಿದ್ದು, ಈ ಪೈಕಿ 75ಕ್ಕೂ ಹೆಚ್ಚು ಜನ ಪರೇಡ್ನಲ್ಲಿ ಭಾಗಹಿಸಿದ್ದರು. ಗಂಗಾವತಿ ಗ್ರಾಮೀಣ ಠಾಣೆಯಲ್ಲಿ 55 ಜನ ರೌಡಿಶೀಟರ್ ಮತ್ತು 40ಕ್ಕೂ ಹೆಚ್ಚು ಜನ ಎಂಒಬಿ (ಮೋಸ್ಟ್ ವಾಂಟೆಡ್) ಗಳಿದ್ದಾರೆ.
ಇದನ್ನೂ ಓದಿ: ಜೆಸಿಬಿ ಬಕೆಟ್ ಕದ್ದು ಬೈಕ್ನಲ್ಲಿ ಹೊತ್ತೊಯ್ದ ಕಳ್ಳರು : ಸಿಸಿಟಿವಿಯಲ್ಲಿ ಕೃತ್ಯ ಸೆರೆ