ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ನಡೆಯಬೇಕಿದ್ದ ಕುಷ್ಟಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರದ್ದು ಪಡಿಸಲಾಗಿಲ್ಲ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರದ ಮುಂದಿನ ಆದೇಶದವರೆಗೂ ಸಮ್ಮೇಳನ ಮುಂದೂಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜಶೇಖರ ಅಂಗಡಿ ಹೇಳಿದ್ದಾರೆ.
ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಹನುಮಸಾಗರದಲ್ಲಿ ನಿಗದಿಯಾಗಿದ್ದ ಸಮ್ಮೇಳನ ಹಾಗೂ ಸಮ್ಮೇಳನಾದ್ಯಕ್ಷರ ಆಯ್ಕೆ ಕಾರ್ಯಕಾರಿ ಸಮಿತಿ ನಿರ್ಣಯಿಸಲಾಗಿದ್ದರಿಂದ ರದ್ದು ಪಡಿಸಲಾಗದು. ಸರ್ಕಾರದ ಆದೇಶದ ಬಳಿಕ ಸಮ್ಮೇಳನವನ್ನು ಮುಂದಿನ ಜಿಲ್ಲಾಧ್ಯಕ್ಷರು ಮುನ್ನೆಡೆಸಲಿದ್ದು, ಸಮ್ಮೇಳನ ಸ್ಥಳ, ಸರ್ವಾಧ್ಯಕ್ಷರು ಬದಲಾಗದು ಎಂದಿದ್ದಾರೆ.
ರಾಜ್ಯಾದ್ಯಂತ ಈಗಾಗಲೇ ಉಪ ಚುನಾವಣೆಗಳ ಪ್ರಚಾರ ನಡೆಯುತ್ತಿವೆ. ಚುನಾವಣೆ ತಡೆಯೊಡ್ಡದೇ ಸಾಹಿತ್ಯದ ಕಾರ್ಯಕ್ರಮಕ್ಕೆ ತಡೆಯೊಡ್ಡಿದ್ದಾರೆ. ರಾಜ್ಯದಲ್ಲಿ ಸಾಹಿತಿಗಳಿಗೆ ಒಂದು ಕಾನೂನು, ರಾಜಕಾರಣಿಗಳಿಗೆ ಇನ್ನೊಂದು ಕಾನೂನು ಆಗಿದೆ. ಕೋವಿಡ್ ಮಾರ್ಗಸೂಚಿ ಅನ್ವಯ ಸಮ್ಮೇಳನ ನಡೆಸಲು ಸಿದ್ಧರಿದ್ದೆವು. ಆದರೆ, ತಹಶೀಲ್ದಾರ್ ಸರ್ಕಾರದ ಆದೇಶದ ನೆಪವೊಡ್ಡಿ ಏ.1 ಹಾಗೂ ಏ.2 ನಿಗದಿಯಾಗಿದ್ದ ಸಮ್ಮೇಳನದ ಅನುಮತಿ ಹಿಂಪಡೆಯುವಿಕೆ ನಿರ್ಧಾರ ಕನ್ನಡ ಮನಸ್ಸುಗಳಿಗೆ ನೋವುಂಟು ಮಾಡಿದೆ ಎಂದಿದ್ದಾರೆ.
ಸ್ವಚ್ಛತೆ ಸಮಸ್ಯೆ: ಸ್ಥಳೀಯ ಆಡಳಿತದ ವಿರುದ್ಧ ಜನರ ಆಕ್ರೋಶ
ಕುಷ್ಟಗಿ: ಲೋಕೋಪಯೋಗಿ ಇಲಾಖೆಯ ಸುಸಜ್ಜಿತ ಹೈಟೆಕ್ ಕಟ್ಟಡಗಳಿದ್ದರೂ ಇಲ್ಲಿನ ನಿವಾಸಿಗರು ಕೊಳಚೆ ಪ್ರದೇಶದಲ್ಲಿರುವಂತೆ ಇದ್ದಾರೆ. ಆವರಣದಲ್ಲಿರುವ ಚರಂಡಿ ನೀರು ದಾಟಿಕೊಂಡು ಹೋಗುತ್ತಿರುವುದು ದಿನಚರಿಯಾಗಿದೆ
ಹಲವು ತಿಂಗಳುಗಳಿಂದ ಹಳೆ ಪ್ರವಾಸಿ ಮಂದಿರದ ಹಿಂಭಾಗದಲ್ಲಿರುವ ಲೋಕೋಪಯೋಗಿ ಇಲಾಖೆಯ ವಸತಿ ಗೃಹಗಳ ಸೇಪ್ಟಿ ಟ್ಯಾಂಕ್ ಭರ್ತಿಯಾಗಿ ಹೊರಗೆ ಹರಿಯುತ್ತಿದ್ದರೂ ಸಂಬಂಧಿಸಿದ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಸೇಫ್ಟಿ ಟ್ಯಾಂಕ್ನಿಂದ ಚರಂಡಿ ನೀರಿನ ಸಮೇತ ರಸ್ತೆಗೆ ಹರಿಯುತ್ತಿದ್ದ ಬಗ್ಗೆ ಪುರಸಭೆ ನೋಟಿಸ್ ನೀಡಿದ್ರೂ ಕ್ರಮವಹಿಸಿರಲಿಲ್ಲ. ಈ ಸಮಸ್ಯ ಬಗ್ಗೆ ಭೇಟಿ ನೀಡಿದ ಅಧ್ಯಕ್ಷ ಗಂಗಾಧರಸ್ವಾಮಿ ಹಿರೇಮಠ ಅವರು, ವಾಸ್ತವ ಪರಿಸ್ಥಿತಿ ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿ ಸಂಪರ್ಕಿಸಲು ಯತ್ನಿಸಿದರು. ಆದ್ರೆ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಆಗಿದ್ದರಿಂದ ಅಲ್ಲಿದ್ದ ವಸತಿ ಗೃಹದಲ್ಲಿದ್ದ ಸಿಬ್ಬಂದಿ ಸರಿಪಡಿಸಿಕೊಳ್ಳಲು ಸೂಚನೆ ನೀಡಿದರು.