ETV Bharat / state

ತಾವರಗೇರಾದಲ್ಲಿ 116 ಮಿ.ಮೀ. ದಾಖಲೆಯ ಮಳೆ... ರೈತರ ಮೊಗದಲ್ಲಿ ಮಂದಹಾಸ - ತಾವರಗೇರಾ ಸುದ್ದಿ,

ಕೊಪ್ಪಳ ಜಿಲ್ಲೆಯ ತಾವರಗೇರಾದಲ್ಲಿ 116 ಮಿ.ಮೀ. ದಾಖಲೆಯ ಮಳೆಯಾಗಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ.

116 mm rain, 116 mm rain in Koppal, 116 mm rain in Tavaragera, Tavaragera news, Tavaragera rain news, 116 ಮೀಮೀ ಮಳೆ, ತಾವರಗೇರಾದಲ್ಲಿ 116 ಮೀಮೀ ದಾಖಲಾರ್ಹ ಮಳೆ, ಕೊಪ್ಪಳದಲ್ಲಿ 116 ಮೀಮೀ ನಷ್ಟು ದಾಖಲಾರ್ಹ ಮಳೆ, ತಾವರಗೇರಾ ಸುದ್ದಿ, ತಾವರಗೇರಾ ಮಳೆ ಸುದ್ದಿ,
ತಾವರಗೇರಾದಲ್ಲಿ 116 ಮೀಮೀ ದಾಖಲಾರ್ಹ ಮಳೆ
author img

By

Published : Jun 4, 2021, 7:23 AM IST

ಕುಷ್ಟಗಿ (ಕೊಪ್ಪಳ): ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕುಷ್ಟಗಿ ತಾಲೂಕಿನ ತಾವರಗೇರಾದಲ್ಲಿ 116 ಮಿ.ಮೀ. ಮಳೆಯಾಗಿದೆ.

ತಾವರಗೇರಾದಲ್ಲಿ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಯಿಂದಾಗಿ ಬತ್ತಿ ಹೋಗಿದ್ದ ರಾಯನಕೆರೆ‌ ಮುಕ್ಕಾಲು ಭಾಗ ಭರ್ತಿಯಾಗಿದ್ದು, ಕೆಲವು ವಾರ್ಡ್​ಗಳ ಮನೆಯೊಳಗೆ ನೀರು ನುಗ್ಗಿದೆ.

ತಾವರಗೇರಾದಲ್ಲಿ ಭಾರೀ ಮಳೆ

ಕಳೆದ ರಾತ್ರಿ ತಾಲೂಕಿನಲ್ಲಿ ಕಿಲ್ಲಾರಹಟ್ಟಿ ಹಾಗೂ ಹನುಮನಾಳದಲ್ಲಿ ಕಡಿಮೆ ಮಳೆ ಹೊರತುಪಡಿಸಿದರೆ ತಾವರಗೇರಾ, ದೋಟಿಹಾಳ, ಹನುಮಸಾಗರ ಕುಷ್ಟಗಿಯಲ್ಲಿ ಉತ್ತಮ ಮಳೆಯಾಗಿದೆ. ಈ ಮಳೆಯಿಂದಾಗಿ ರೈತರಿಗೆ ಬಿತ್ತನೆ ಕಾರ್ಯ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗಿದೆ.

ಕೊರೊನಾ ಆತಂಕದಲ್ಲಿದ್ದ ರೈತರಿಗೆ ಈ ಮಳೆ ಸಂಭ್ರಮ ಹೆಚ್ಚಿಸಿದ್ದು, ಈಗಾಗಲೇ ಹೆಸರು ಬೆಳೆ ಬಿತ್ತನೆ ಕೈಗೊಂಡ ರೈತರಿಗೆ ಸಾಕಷ್ಟು ಅನಕೂಲವಾಗಿದೆ. ತಾಲೂಕಿನಾದ್ಯಂತ ಕೃಷಿ ಹೊಂಡ, ಚೆಕ್ ಡ್ಯಾಂ, ಹಳ್ಳಗಳು ತುಂಬಿ ಹರಿದಿವೆ. ವರುಣನ ಕೃಪೆಯಿಂದಾಗಿ ಬಿಸಿಲಿನ ವಾತವರಣ ತಗ್ಗಿದಂತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.