ETV Bharat / state

ರಾಜ್ಯದಲ್ಲಿ ಯಡಿಯೂರಪ್ಪ ಸರ್ವ ಸಮ್ಮತ ನಾಯಕ; ನಳಿನ್ ಕುಮಾರ್ ಕಟೀಲ್

ಸಿಎಂ ಆಪ್ತ ಕಾರ್ಯದರ್ಶಿ ಸಂತೋಷ್ ಅತ್ನಹತ್ಯೆ ಯತ್ನ ಪ್ರಕರಣ ಕುರಿತು ಸರ್ಕಾರ ತನಿಖೆ ಆರಂಭಿಸಿದೆ. ಯಾವುದೇ ರಾಜಕೀಯ ಪಕ್ಷಗಳು ಮನುಷ್ಯನ ಜೀವನದಲ್ಲಿ ರಾಜಕಾರಣ ಮಾಡಬಾರದು. ಡಿಕೆಶಿ ಬಳಿ ಸಿ.ಡಿ ಇದ್ದರೆ ಬಿಡುಗಡೆ ಮಾಡಲಿ. ಧೈರ್ಯ ಇದ್ರೆ ಅದರನ್ನು ಈ ಪ್ರಕರಣವನ್ನು ಸಾಬೀತು ಮಾಡಲಿ ಎಂದು ಕಟೀಲ್ ಸವಾಲು ಹಾಕಿದ್ದಾರೆ.

Nalin Kumar Kateel Reactions
ನಳಿನ್ ಕುಮಾರ್ ಕಟೀಲ್
author img

By

Published : Nov 30, 2020, 3:19 PM IST

Updated : Nov 30, 2020, 4:09 PM IST

ಕೋಲಾರ: ರಾಜ್ಯದಲ್ಲಿ ಯಡಿಯೂರಪ್ಪ ಸರ್ವ ಸಮ್ಮತ ನಾಯಕ. ಸಂಪುಟ ವಿಸ್ತರಣೆ ಸೇರಿದಂತೆ ಸರ್ಕಾರದಲ್ಲಿ ಏನೇ ತೀರ್ಮಾನಗಳು ತೆಗೆದುಕೊಳ್ಳುವುದು ಸಿಎಂ ವಿವೇಚನೆಗೆ ಬಿಟ್ಟದ್ದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಇಂದು ಹಮ್ಮಿಕೊಳ್ಳಲಾಗಿದ್ದ ಗ್ರಾಮ ಸ್ವಾರಾಜ್ ಸಮಾವೇಶಕ್ಕೆ ಆಗಮಿಸಿದ ವೇಳೆ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ಪಕ್ಷ ತೊರೆದು ಬಂದ 17 ಜನರ ಬೆಂಬಲದೊಂದಿಗೆ ಸಿಎಂ ಆಗಿದ್ದಾರೆ. ಅವರ ಋಣ ಪಕ್ಷದ ಮೇಲಿದೆ. ಹಾಗಾಗಿ ರಾಷ್ಟ್ರೀಯ ನಾಯಕರ ಗಮನಕ್ಕೆ ತಂದು ಸಚಿವ ಸಂಪುಟ ವಿಸ್ತರಣೆ ಮಾಡುತ್ತಾರೆ ಎಂದು ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಪರೋಕ್ಷಚಾಗಿ ಭರವಸೆ ನೀಡಿದರು.

ಇದನ್ನೂ ಓದಿ: ನಳಿನ್ ಕುಮಾರ್ ಇನ್ನೂ ರಾಜಕೀಯವಾಗಿ ಬೆಳೆದಿಲ್ಲ, ಪ್ರಬುದ್ಧತೆಯೂ ಇಲ್ಲ: ಸಿದ್ದರಾಮಯ್ಯ

ಸಿಎಂ ಬದಲಾವಣೆ ಚರ್ಚೆ ಇದುವರೆಗೂ ಎಲ್ಲೂ ನಡೆದಿಲ್ಲ. ಇನ್ನು ಮೂರು ವರ್ಷ ಯಡಿಯೂರಪ್ಪನವರೇ ಸಿಎಂ ಆಗಿರುತ್ತಾರೆ ಎಂದು ಒತ್ತಿ ಹೇಳಿದ ಕಟೀಲ್, ಲಿಂಗಾಯತರಿಗೆ ಮೀಸಲಾತಿ ಕೊಡುವ ವಿಚಾರದಲ್ಲಿ ಸಿಎಂ ಈಗಾಗಲೇ ಹೇಳಿದ್ದಾರೆ. ಈ ವಿಚಾರದಲ್ಲಿ ನಾನು ಯಾವುದೇ ಹೇಳಿಕೆ ಕೊಡುವುದಿಲ್ಲ. ಇದರ ಬಗ್ಗೆ ಸಿಎಂ ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ರಾಜ್ಯದ ಪ್ರತಿವೊಂದು ವಿಚಾರ ಸಿಎಂ ವಿವೇಚನೆಗೆ ಬಿಟ್ಟದ್ದು. ಹೈಕಮಾಂಡ್​ ಏನೇ ತೀರ್ಮಾನ ತೆಗೆದುಕೊಳ್ಳಲೂ ಸಿಎಂಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದೆ ಎಂದು ಲಿಂಗಾಯತರನ್ನ ಓಬಿಸಿಗೆ ಸೇರಿಸುವ ವಿಚಾರಕ್ಕೆ ಸ್ಪಷ್ಟನೆ ನೀಡಿದರು.

ಮಂಗಳೂರಿನಲ್ಲಿ ವಾಲ್ ರೈಟಿಂಗ್ ಪ್ರಕರಣ ಸಂಬಂಧ ನಮ್ಮ ಸರ್ಕಾರ ಪೊಲೀಸರಿಗೆ ಪೂರ್ಣ ಸ್ವಾತಂತ್ರ್ಯ ಕೊಟ್ಟಿದೆ. ತನಿಖೆ ನಡೆಯುತ್ತಿದೆ. ಆರೋಪಿಗಳಿಗೆ ಶಿಕ್ಷೆ ಆಗಲಿದೆ. ಮಂಗಳೂರು ಮಾತ್ರವಲ್ಲ, ಎಲ್ಲಾ ಕಡೆಯಲ್ಲೂ ಆಗಿದೆ. ಎಸ್‌ಡಿಪಿಐ, ಪಿಎಫ್‌ಐ ಸೇರಿದಂತೆ ಕೆಲವು ಸಂಘಟನೆಗಳನ್ನು ಸಿದ್ದರಾಮಯ್ಯನವರು ಬಿಡುಗಡೆ ಮಾಡಿರುವ ಪರಿಣಾಮ ರಾಜ್ಯದಲ್ಲಿ ಇಷ್ಟೆಲ್ಲಾ ಆಗುತ್ತಿದೆ. ಸಿದ್ದರಾಮಣ್ಣ ಸರ್ಕಾರದಲ್ಲಿ ಇವರನ್ನು ಬಿಡುಗಡೆ ಮಾಡಿರುವ ಪರಿಣಾಮವಿದು. ಹಿಂದಿನ ಸರ್ಕಾರದಲ್ಲಿ 24 ಜನ ಹಿಂದೂ ಕಾರ್ಯಕರ್ತರ ಹತ್ಯೆ ಆಗಿತ್ತು. ಸಿದ್ದರಾಮಣ್ಣ ಸರ್ಕಾರ ಆಗೇಕೆ ಕ್ರಮ ಕೈಗೊಂಡಿರಲಿಲ್ಲ? ತುಷ್ಟೀಕರಣ ನೀತಿ ಅನುಸರಿಸಿದ್ದೆ ಇದಕ್ಕೆ ಕಾರಣ ಎಂದು ಹೇಳಿದರು.

ಇದನ್ನೂ ಓದಿ: ನಾಯಕತ್ವದ ಬದಲಾವಣೆ ಬಗ್ಗೆ ಯಾರ ಮಟ್ಟದಲ್ಲಿ ಚರ್ಚೆಯಾಗಿದೆ.. ಮಾಧ್ಯಮದವರನ್ನೇ ಪ್ರಶ್ನಿಸಿದ ಕಟೀಲ್

ಸಂತೋಷ್ ಅತ್ನಹತ್ಯೆ ಯತ್ನ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈ ಪ್ರಕರಣ ಕುರಿತು ಸರ್ಕಾರ ತನಿಖೆ ಆರಂಭಿಸಿದೆ. ಯಾವುದೇ ರಾಜಕೀಯ ಪಕ್ಷ ಮನುಷ್ಯನ ಜೀವನದಲ್ಲಿ ರಾಜಕಾರಣ ಮಾಡಬಾರದು. ಡಿಕೆಶಿ ಬಳಿ ಸಿ.ಡಿ ಇದ್ದರೆ ಬಿಡುಗಡೆ ಮಾಡಲಿ. ಧೈರ್ಯ ಇದ್ರೆ ಅದರನ್ನು ಸಾಬೀತು ಮಾಡಲಿ ಎಂದು ಸವಾಲು ಹಾಕಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಕಟೀಲ್ ಜೊತೆ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ನಾಗೇಶ್ ಹಾಗೂ ಸಂಸದ ಎಸ್ ಮುನಿಸ್ವಾಮಿ ಉಪಸ್ಥಿತರಿದ್ದರು.

Last Updated : Nov 30, 2020, 4:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.