ETV Bharat / state

ಯರಗೋಳ್ ಅಣೆಕಟ್ಟು ಯೋಜನೆ ಪೂರ್ಣ: ನಾಳೆ ಸಿದ್ದರಾಮಯ್ಯರಿಂದ ಲೋಕಾರ್ಪಣೆ - ಯರಗೋಳ್​ ಡ್ಯಾಂ

ಅರ್ಧ ಟಿಎಂಸಿಯಷ್ಟು ನೀರು ಶೇಖರಣೆ ಸಾಮರ್ಥ್ಯ ಹೊಂದಿರುವ ಯರಗೋಳ್​ ಡ್ಯಾಂ ಸತತ 17 ವರ್ಷಗಳ ನಂತರ ಪೂರ್ಣಗೊಂಡಿದೆ. ಈ ಯೋಜನೆಯನ್ನು ನಾಳೆ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ.

ಯರಗೋಳ್ ಅಣೆಕಟ್ಟು
ಯರಗೋಳ್ ಅಣೆಕಟ್ಟು
author img

By ETV Bharat Karnataka Team

Published : Nov 10, 2023, 5:40 PM IST

ಶಾಸಕ ಎಸ್​ ಎನ್ ನಾರಾಯಣಸ್ವಾಮಿ

ಕೋಲಾರ : ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳು ಗ್ರಾಮದ ಬಳಿ ವ್ಯರ್ಥವಾಗಿ ತಮಿಳುನಾಡಿಗೆ ಹರಿದು ಹೋಗುತ್ತಿದ್ದ ನೀರಿಗೆ ಅಡ್ಡಲಾಗಿ ಡ್ಯಾಂ ನಿರ್ಮಾಣ ಮಾಡಿ ಕೋಲಾರ, ಬಂಗಾರಪೇಟೆ, ಮಾಲೂರು ಪಟ್ಟಣ ಹಾಗೂ 45 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ. ಯರಗೋಳ್ ಯೋಜನೆ ಆರಂಭವಾಗಿ 17 ವರ್ಷ ಕಳೆದರೂ ಇನ್ನೂ ಪೂರ್ಣವಾಗಿರಲಿಲ್ಲ. ಬಹುತೇಕ ಅರ್ಧ ಟಿಎಂಸಿಯಷ್ಟು ನೀರು ಶೇಖರಣೆ ಸಾಮರ್ಥ್ಯ ಹೊಂದಿರುವ ಯರಗೋಳ್​ ಡ್ಯಾಂ ಸತತ 17 ವರ್ಷಗಳ ನಂತರ ಯೋಜನೆ ಪೂರ್ಣವಾಗಿದೆ. ಈ ಯೋಜನೆಯನ್ನ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ.

ಇನ್ನು ಬಂಗಾರಪೇಟೆ ನೀರು ಶುದ್ಧೀಕರಣ ಘಟಕ ಉದ್ಘಾಟನೆಯನ್ನು ನಗರಾಭಿವೃದ್ಧಿ ಮತ್ತು ಪಟ್ಟಣ ಯೋಜನೆ ಸಚಿವ ಬಿ ಎಸ್ ಸುರೇಶ್ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ ಎಚ್ ಮುನಿಯಪ್ಪ, ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ, ಇಂಧನ ಸಚಿವ ಕೆ.ಜೆ ಜಾರ್ಜ್, ಸಮಾಜ ಕಲ್ಯಾಣ ಸಚಿವ ಡಾ. ಹೆಚ್. ಸಿ ಮಹದೇವಪ್ಪ, ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ, ಗ್ರಾಮೀಣ ಅಭಿವೃದ್ಧಿ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ ಸೇರಿದಂತೆ ಜಿಲ್ಲೆಯ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಎಸ್. ಮುನಿಸ್ವಾಮಿ, ಸೇರಿದಂತೆ ಎಲ್ಲಾ ಶಾಸಕರು ಭಾಗವಹಿಸಲಿದ್ದಾರೆ.

ನಾಳೆ‌ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯರಗೋಳ್ ಯೋಜನೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈಗಾಗಲೇ ಜಿಲ್ಲಾಡಳಿತದ ವತಿಯಿಂದ ಬೃಹತ್ ಕಾರ್ಯಕ್ರಮಕ್ಕೆ ಸಿದ್ದತೆಗಳು ಭರದಿಂದ ಸಾಗುತ್ತಿದೆ. ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಸುಮಾರು 25 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ.‌ ಇನ್ನು ಮುಖ್ಯಮಂತ್ರಿಗಳು ಬರುವ‌ ಹಿನ್ನಲೆಯಲ್ಲಿ ಬಲಮಂದೆ ವ್ಯಾಪ್ತಿಯಲ್ಲಿ‌ ಹಳ್ಳಕೊಳ್ಳಗಳಿಂದ ಕೂಡಿದ್ದ ರಸ್ತೆಗಳಿಗೆ ಡಾಂಬರೀಕರಣದ ಭಾಗ್ಯ ಲಭಿಸಿದೆ.

ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಂದರೆ 2006ರಲ್ಲಿ ಈ ಯೋಜನೆಯ ಶಂಕುಸ್ಥಾಪನೆ ಮಾಡಲಾಗಿತ್ತು. ಅಂದಿಗೆ 240 ಕೋಟಿ ವೆಚ್ಚಕ್ಕೆ ಡಿಪಿಆರ್ ಮಾಡಿ, ಅಣೆಕಟ್ಟು ಹಾಗೂ ನೀರು ನಿಲುಗಡೆಗಾಗಿ 300 ಎಕರೆ ಪ್ರದೇಶ ವಶಕ್ಕೆ ಪಡೆದು ಅದರಲ್ಲಿ 124 ಎಕರೆ ಅರಣ್ಯ ಭೂಮಿ, ಜೊತೆಗೆ 128 ಎಕರೆ ರೈತರಿಂದ ಸ್ವಾಧೀನ ಪಡಿಸಿಕೊಂಡು, ಯೋಜನೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

ಆದರೆ, ಯೋಜನೆಗೆ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ನಡೆಯದ ಹಿನ್ನೆಲೆ 2006 ರಿಂದ 2009ರವರೆಗೂ ಯೋಜನೆ ಸ್ಥಗಿತವಾಗಿತ್ತು. 2009 ರಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ನೀರು ಸರಬರಾಜು ಮಂಡಳಿ ಅಧ್ಯಕ್ಷರಾಗಿದ್ದಾಗ 80 ಕೋಟಿ ಹಣ ಪೈಪ್​ಲೈನ್ ಕಾಮಗಾರಿ ಮಾಡಿ ಯೋಜನೆ ಮತ್ತೆ ಸ್ಥಗಿತವಾಯಿತು. 2013ರಲ್ಲಿ ಜಿಲ್ಲೆಯ ಶಾಸಕರುಗಳ ಒತ್ತಾಯದ ನಂತರ ಸಿಎಂ ಸಿದ್ದರಾಮಯ್ಯ ಅವರು ಯೋಜನೆಗೆ ಮರು ಅನುಮೋದನೆ ಹಾಗೂ ಶುದ್ದೀಕರಣ ಘಟಕಕ್ಕೆ ಹಣ ಬಿಡುಗಡೆ ಮಾಡಿದ್ದರು.

ಸದ್ಯ 17 ವರ್ಷಗಳ ನಂತರ ಸದ್ಯ ಕೋಲಾರ ಜಿಲ್ಲೆಗೆ ಸ್ವಾತಂತ್ರ್ಯ ನಂತರ ಮಾಡಲಾಗಿರುವ ಮೊದಲ ಕುಡಿಯುವ ನೀರಿನ ಯೋಜನೆ ಇದಾಗಿದ್ದು, 240 ಕೋಟಿಯಿಂದ ಆರಂಭವಾದ ಯೋಜನೆ ಕೊನೆಗೆ 315 ಕೋಟಿ ರೂಪಾಯಿಯಲ್ಲಿ ಮುಕ್ತಾಯವಾಗಿ ನಾಳೆ ಲೋಕಾರ್ಪಣೆಗೊಳ್ಳಲಿದೆ. ಒಟ್ಟಾರೆ ಸ್ವಾತಂತ್ರ್ಯ ನಂತರ ಕೋಲಾರ ಜಿಲ್ಲೆಗೆ ಮಾಡಲಾದ ಮೊದಲ ಕುಡಿಯುವ ನೀರಿನ ಯೋಜನೆ ಇದಾಗಿದ್ದು, ಹತ್ತು ಹಲವು ಅಡೆತಡೆಗಳು ಪೂರ್ಣಗೊಂಡು ಈಗ ಯೋಜನೆಯಿಂದ ಶುದ್ದ ನೀರು ಜನರಿಗೆ ತಲುಪುತ್ತಿರುವುದು ಜಿಲ್ಲೆಯ ಜನರಲ್ಲಿ ಸಂತಸ ತಂದಿದೆ.

ಇದನ್ನೂ ಓದಿ : ಬರದ ನಾಡಿನ ಭಗೀರಥವಾಗಲಿರುವ ಯರಗೋಳ್ ಅಣೆಕಟ್ಟು ಜನವರಿ ತಿಂಗಳಲ್ಲಿ ಲೋಕಾರ್ಪಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.