ಕೋಲಾರ: ಇಲ್ಲಿನ ಕೈಗಾರಿಕಾ ವಲಯದಲ್ಲಿರುವ ಬಹುರಾಷ್ಟ್ರೀಯ ವಿಸ್ಟ್ರಾನ್ ಕಂಪನಿಯಲ್ಲಿ ಕಾರ್ಮಿಕರಿಂದ ನಡೆದ ದಾಂದಲೆ ಪ್ರಕರಣ ಸಂಬಂಧ ಜಿಲ್ಲೆಯ ಪೊಲೀಸರು ಸುಮಾರು 119 ಮಂದಿ ಕಾರ್ಮಿಕರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ವಿವರ:
ನಿನ್ನೆ ನಡೆದಂತಹ ಕೃತ್ಯ ಸಂಬಂಧ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳ ಪತ್ತೆ ಕಾರ್ಯ ನಡೆಸಿದ್ದಾರೆ. ಇದಕ್ಕಾಗಿ ಪೊಲೀಸ್ ಇಲಾಖೆ ಹತ್ತು ಪೊಲೀಸರ ವಿಶೇಷ ತಂಡ ರಚನೆ ಮಾಡಿದ್ದು, ಜಿಲ್ಲೆಯಾದ್ಯಂತ ಹುಡುಕಾಟ ನಡೆಸಿದೆ. ಈ ವೇಳೆ ಸುಮಾರು 119 ಕಾರ್ಮಿಕರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಕೋಲಾರ, ಕೆಜಿಎಫ್, ಹಾಗೂ ಚಿಂತಾಮಣಿ ಕಾರಾಗೃಹಕ್ಕೆ ಮೂರು ಬಸ್ಗಳಲ್ಲಿ ಬಂದೋಬಸ್ತ್‌ನಲ್ಲಿ ಕಳುಹಿಸಿದ್ದಾರೆ. ಕಂಪನಿಯಲ್ಲಿ ಕಳುವಾಗಿರುವ ಫೋನ್ ಹಾಗೂ ಲ್ಯಾಪ್‌ಟಾಪ್‌ಗಳಿಗಾಗಿ ಹುಡುಕಾಟಕ್ಕೂ ಸಿದ್ಧವಾಗಿದ್ದಾರೆ.
ಓದಿ: ವಿಸ್ಟ್ರನ್ ಕಂಪನಿ ಮೇಲಿನ ದಾಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ: ಸಚಿವ ಜಗದೀಶ್ ಶೆಟ್ಟರ್
ಕಾರ್ಮಿಕರ ಪೋಷಕರ ಅಳಲೇನು?
ಕಾರ್ಮಿಕರ ಪರವಾಗಿ ತಮ್ಮನ್ನು ಬಂಧಿಸುವಂತೆ ಪೋಷಕರು ಪೊಲೀಸರ ಎದುರು ಅಂಗಲಾಚಿದ್ದು, ಕಂಪನಿಯಲ್ಲಿ ಕೆಲವು ಕಿಡಿಗೇಡಿಗಳು ಮಾಡಿರುವ ಕೃತ್ಯಕ್ಕೆ ಎಲ್ಲರನ್ನೂ ಹೊಣೆ ಮಾಡಬೇಡಿ. ತಮ್ಮ ಮಕ್ಕಳನ್ನು ಬಿಡುಗಡೆಗೊಳಿಸಿ ಎಂದು ಎಸ್ಪಿ ಕಚೇರಿ ಎದುರು ಮನವಿ ಮಾಡಿಕೊಂಡರು.
ಈ ಕೃತ್ಯದಲ್ಲಿ ನಿನ್ನೆ ಭಾಗಿಯಾದವರನ್ನು ಮತ್ತು ತಪ್ಪಿಸ್ಥರನ್ನು ಬಂಧಿಸಲಿ. ಆದ್ರೆ ಮನೆಯಲ್ಲಿದವರನ್ನು ಮತ್ತು ಅಮಾಯಕ ಕಾರ್ಮಿಕರನ್ನು ಬಂಧಿಸುವುದು ಸರಿಯಲ್ಲ ಎಂಬುದು ಪೋಷಕರ ಅಳಲಾಗಿದೆ.