ಕೋಲಾರ: ದೇಶದ ರಕ್ಷಣೆಯಲ್ಲಿ ಸುಮಾರು 22 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಹೊಂದಿ ತವರಿಗೆ ಮರಳಿದ ಇಬ್ಬರು ಯೋಧರಿಗೆ ಕೋಲಾರದ ಜನತೆ ಅದ್ದೂರಿ ಸ್ವಾಗತ ಕೋರಿದರು.
ಸೇನೆಯಲ್ಲಿ ಸೇವೆ ಸಲ್ಲಿಸಿ ಬಂದ ಯೋಧರಾದ ಕೋಲಾರ ತಾಲೂಕಿನ ತೊಂಡಾಲ ಮತ್ತು ಮಿಟ್ಟೂರು ಗ್ರಾಮದ ಕೃಷ್ಣೇಗೌಡ ಹಾಗೂ ಆಂಜಿನಪ್ಪ ಅವರಿಗೆ ನಗರದ ಸರ್ವಜ್ಞ ಪಾರ್ಕ್ ಬಳಿ ಸಾರ್ವಜನಿಕರು ಹೂಮಾಲೆ ಹಾಕಿ ಸನ್ಮಾನಿಸಿ, ಮೆರವಣಿಗೆ ಮಾಡಿದರು.
ನಿವೃತ್ತ ಯೋಧರು ಜಮ್ಮು ಕಾಶ್ಮೀರ, ಕಾಂಗೋ, ವಿಶ್ವ ಶಾಂತಿ ಸೇನಾ ಪಡೆ, ಛತ್ತೀಸ್‌ಗಡ್ ನಕ್ಸಲ್ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಿದ್ದು, ಭಾರತ ಸೇನೆಗೆ ಅವಶ್ಯಕತೆ ಬಿದ್ದಲ್ಲಿ, ದೇಶ ಸೇವೆಗಾಗಿ ಕರೆ ಬಂದಲ್ಲಿ ನಾವು ಯಾವಾಗಲೂ ಸಿದ್ದರಿದ್ದೇವೆ ಎಂದರು. ಅಲ್ಲದೇ ಸೇವೆ ನಂತರ ತವರಿಗೆ ಮರಳಿದ ಯೋಧರನ್ನು ಸನ್ಮಾನಿಸಿದ ಸಾರ್ವಜನಿಕರಿಗೆ ಧನ್ಯವಾದಗಳನ್ನು ತಿಳಿಸಿದರು.