ETV Bharat / state

ಎಸ್ಪಿ ಕಚೇರಿ ಸ್ಥಳಾಂತರಕ್ಕೆ ವಿರೋಧ : ಅ.25ಕ್ಕೆ ಕೆಜಿಎಫ್​ ಬಂದ್​ಗೆ ಕರೆ - ಅ.25ಕ್ಕೆ ಕೆಜಿಎಫ್​ ಬಂದ್​​

ಚಿನ್ನದ ನೆಲವನ್ನು ಕಾಯುವ ಜೊತೆಗೆ ರೌಡಿಗಳ ಸಾಮ್ರಾಜ್ಯ ಮಟ್ಟಹಾಕಿ ಹೆಸರು ಮಾಡಿದ್ದ ಕೆಜಿಎಫ್​ ಪೊಲೀಸ್ ಜಿಲ್ಲೆಯನ್ನು ವಿಜಯನಗರಕ್ಕೆ ಸ್ಥಳಾಂತರಗೊಳ್ಳಲು ಆದೇಶ ಬಂದಿದೆ. ಇದನ್ನು ವಿರೋಧಿಸಿ ಅ.25ಕ್ಕೆ ವಿವಿಧ ಸಂಘಟನೆಗಳು ಕೆಜಿಎಫ್​​​ ಬಂದ್​​ಗೆ ಕರೆ ನೀಡಿವೆ.

KGF bandh on october 25th
ಕೆಜಿಎಫ್​ ಬಂದ್​ಗೆ ಕರೆ
author img

By

Published : Oct 21, 2021, 4:05 PM IST

ಕೋಲಾರ: ಕೆಜಿಎಫ್​ನಲ್ಲಿರುವ ಎಸ್ಪಿ ಕಚೇರಿ ಸ್ಥಳಾಂತರವನ್ನು ವಿರೋಧಿಸಿ ಪ್ರಗತಿಪರ, ದಲಿತಪರ ಸಂಘಟನೆಗಳ ಕಾರ್ಯಕರ್ತರು ಅ.25 ರಂದು ಕೆಜಿಎಫ್ ಬಂದ್​ಗೆ ಕರೆ ನೀಡಿದ್ದಾರೆ.

ಬ್ರಿಟಿಷರ ಕಾಲದಲ್ಲಿ ಪ್ರಾರಂಭವಾಗಿದ್ದ ಎಸ್ಪಿ ಕಚೇರಿಯನ್ನು ಸ್ಥಳಾಂತರ ಮಾಡುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಬಂದ್​ಗೆ ಕಾಂಗ್ರೆಸ್,​ ಜೆಡಿಎಸ್ ಪಕ್ಷಗಳು ಸೇರಿದಂತೆ ಸಾರ್ವಜನಿಕರು, ಅಂಗಡಿ ಮಾಲೀಕರು ಸಹ ಬಂದ್​ಗೆ ಬೆಂಬಲ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ಕಳೆದ 130 ವರ್ಷಗಳ ಹಿಂದೆ ಕೆಜಿಎಫ್​​ನಲ್ಲಿ ಗಣಿಗಾರಿಕೆ ಆರಂಭವಾದ ಸಮಯದಲ್ಲಿ ಆಳ್ವಿಕೆ ನಡೆಸುತ್ತಿದ್ದ ಬ್ರಿಟಿಷರು, ತಮ್ಮ ಸುರಕ್ಷತೆಗಾಗಿ ಹಾಗೂ ಗಣಿಗಳಲ್ಲಿನ ಕಳ್ಳತನ ತಡೆಯಲು ರಾಜ್ಯದಲ್ಲೇ ಮೊದಲ ಬಾರಿಗೆ ಇಲ್ಲಿ ವಿಶೇಷ ಪೊಲೀಸ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರು. ಈ ಮೂಲಕ ದೀರ್ಘಕಾಲದ ಇತಿಹಾಸವನ್ನು ಕೆಜಿಎಫ್​ ಹೊಂದಿದೆ.

ರಾಜ್ಯದಲ್ಲಿ 31 ನೇ ಜಿಲ್ಲೆಯಾಗಿ ವಿಜಯನಗರ ಜಾರಿಗೆ ಬಂದಿದ್ದು, ಹೊಸದಾಗಿ ಹುದ್ದೆಗಳನ್ನು ಸೃಷ್ಟಿಸುವ ಬದಲು ಕೆಜಿಎಫ್ ಎಸ್ಪಿ ಕಚೇರಿ ಸಿಬ್ಬಂದಿಯನ್ನು ಸ್ಥಳಾಂತರ ಮಾಡಲು ಆರ್ಥಿಕ ಇಲಾಖೆ ಕಳೆದ ಆಗಸ್ಟ್ 19 ರಂದು ಆದೇಶ ಹೊರಡಿಸಿದೆ. ಇದರಿಂದ ಕೆಜಿಎಫ್​ನಲ್ಲೂ ಕೈಗಾರಿಕಾ ವಲಯ ಸೇರಿದಂತೆ ಗಡಿ ಭಾಗದ ರಕ್ಷಣೆ ದೃಷ್ಟಿಯಿಂದ ಎಸ್ಪಿ ಕಚೇರಿಯ ಸ್ಥಳಾಂತರ ವಿಚಾರ ಕೈ ಬಿಡಬೇಕೆಂದು ಒತ್ತಾಯಿಸಿ ಅ.25 ರಂದು ಕೆಜಿಎಫ್ ಬಂದ್​ಗೆ ಕರೆ ನೀಡಿದ್ದಾರೆ.

ಇದನ್ನೂ ಓದಿ: ರಾಜ್ಯದ ಮೊದಲ ಪೊಲೀಸ್ ಜಿಲ್ಲೆಯ ಸ್ಥಳಾಂತರಕ್ಕೆ ಸಿದ್ಧತೆ: ಕೆಜಿಎಫ್ ಭಾಗದಲ್ಲಿ ವಿರೋಧ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.