ETV Bharat / state

ಹೆಣ್ಣಿನ ವಿಚಾರ ತೆಗೆದು ಹೆಣವಾದ... ಕೊಂದವರು ಪ್ರಾಣ ಸ್ನೇಹಿತರೇ! - ಗೆಳೆಯನ ಕೊಲೆ

ಪ್ರಾಣ ಸ್ನೇಹಿತನ ಮೇಲೆ ಲಾರಿ ಹರಿಸಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಮಾಲೂರು ತಾಲೂಕಿನ ಮಾಸ್ತಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳಾದ ನಾಗರಾಜ್​ ಮತ್ತು ರಾಜಪ್ಪ
author img

By

Published : Mar 13, 2019, 5:28 PM IST

Updated : Mar 13, 2019, 6:01 PM IST

ಕೋಲಾರ: ಒಂದೇ ವೃತ್ತಿ ಮಾಡುತ್ತಿದ್ದ ಗೆಳೆಯರೆಲ್ಲ ಸೇರಿಕೊಂಡು ಕುಡಿದ ಮತ್ತಿನಲ್ಲಿ ಸ್ವಲ್ಪ ಖಾರದ ಮಾತುಗಳನ್ನಾಡಿದ್ದ ತಮ್ಮ ಪ್ರಾಣ ಸ್ನೇಹಿತನ ಮೇಲೆ ಲಾರಿ ಹರಿಸಿ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಧಿಸಿದ ಘಟನೆ ಮಾಲೂರು ತಾಲೂಕು ಮಾಸ್ತಿ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೋಲಾರ ಎಸ್​ಪಿ ರೋಹಿಣಿ ಕಠೋಚ್

ಮಾ.​ 5 ರಂದು ತಾಲೂಕಿನ ನಾರಾಯಣಪುರ ಗೇಟ್​​ ಬಳಿ ಹಿಟ್​ ಅಂಡ್​ ರನ್​ ರೀತಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಮಾಸ್ತಿ ಪೊಲೀಸರು, ತನಿಖೆ ನಡೆಸಿದಾಗ ಹುಲಿಮಂಗಲ ಗ್ರಾಮದ ಗೋಪಾಲ್​ ಅಲಿಯಾಸ್​ ಚಿನ್ನಿ ಎಂಬುವನ ಶವ ಎಂದು ತಿಳಿದು ಬಂದಿತ್ತು. ಘಟನೆ ಬಗ್ಗೆ ಅನುಮಾನ ವ್ಯಕ್ತವಾಗಿದ್ದರಿಂದ ಪೊಲೀಸರು ಪರಿಶೀಲನೆ ನಡೆಸಿದಾಗ ಪ್ರಕರಣ ಬಯಲಿಗೆ ಬಂದಿದೆ.

ಕೊಲೆಗೀಡಾದ ಗೋಪಾಲನ ಸಂಬಂಧಿಯ ಪ್ರತಿಕ್ರಿಯೆ

ಅಂದು ಗೋಪಾಲ್​ ಹಾಗೂ ಸ್ನೇಹಿತರಾದ ನಾಗರಾಜ್​ ಮತ್ತು ರಾಜಪ್ಪ ಬಾರ್​​ವೊಂದರಲ್ಲಿ ಕುಳಿತು ಕಂಠಪೂರ್ತಿ ಕುಡಿದಿದ್ದರು. ಕುಡಿದ ಮತ್ತಿನಲ್ಲಿ ಯುವತಿಯೋರ್ವಳ ವಿಚಾರದಲ್ಲಿ ನಾಗರಾಜ್​​ ಹಾಗೂ ಗೋಪಾಲ್​​ ನಡುವೆ ಮಾತಿಗೆ ಮಾತು ಬೆಳೆದಿತ್ತು. ಮಧ್ಯ ಪ್ರವೇಶಿಸಿದ ರಾಜಪ್ಪ, ಇಬ್ಬರನ್ನು ಸಮಾಧಾನ ಮಾಡುವ ನಾಟಕವಾಡಿ ಕ್ಯಾಂಟರ್​ ವಾಹನದಲ್ಲಿ ಹತ್ತಿಸಿಕೊಂಡು ಬಂದಿದ್ದ. ಇದೆಲ್ಲವನ್ನು ತಲೆಯಲ್ಲಿ ತುಂಬಿಕೊಂಡಿದ್ದ ರಾಜಪ್ಪ, ನಾರಾಯಣಪುರ ಗೇಟ್​​ ಬರುತ್ತಿದ್ದಂತೆ ಗೋಪಾಲನನ್ನು ವಾಹನದಿಂದ ಹೊರಗೆ ದಬ್ಬಿದ್ದಾನೆ.

ಸಾಲದೆಂಬಂತೆ ಕೆಳಗೆ ಬಿದ್ದು ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಗೋಪಾಲನ ಮೇಲೆ ಲಾರಿ ಹರಿಸಿ ಕೊಲೆ ಮಾಡಿ ತಮಗೇನು ಗೊತ್ತಿಲ್ಲ ಎಂಬಂತೆ ಅಲ್ಲಿಂದ ಪರಾರಿಯಾಗಿದ್ದರು. ಪೊಲೀಸರು ಸಹ ದೂರು ದಾಖಲಿಸಿಕೊಂಡಿದ್ದರು. ಅಲ್ಲದೆ ಸುದ್ದಿ ತಿಳಿದ ಮೃತ ವ್ಯಕ್ತಿಯ ಪೋಷಕರು ಸಹ ಇದೊಂದು ಅಪಘಾತವೆಂದು ಸುಮ್ಮನಾಗಿದ್ದರು. ಆದರೆ, ಈ ಬಗ್ಗೆ ಅನುಮಾನ ವ್ಯಕ್ತವಾಗಿದ್ದರಿಂದ ತನಿಖೆ ನಡೆಸಿದ ಮಾಸ್ತಿ ಠಾಣಾ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುತ್ತಾರೆ ನಗರದ ಎಸ್​ಪಿ ರೋಹಿಣಿ ಕಠೋಚ್​.

ಆರೋಪಿಗಳನ್ನು ಕರೆತರುತ್ತಿರುವ ಪೊಲೀಸರು

Intro:Body:

ಕೋಲಾರ

ದಿನಾಂಕ : 13-03-2019

ಫಾರ್ಮೆಟ್​: ಪ್ಯಾಕೇಜ್​ 

ಸ್ಲಗ್​: ಮಿತ್ರ ದ್ರೋಹಿಗಳು..

ಆಂಕರ್: ಅವರೆಲ್ಲಾ ಒಂದೇ ವೃತ್ತಿ ಮಾಡುತ್ತಿದ್ದ ಪ್ರಾಣ ಸ್ನೇಹಿತರು, ಕುಡಿದ ಮತ್ತಿನಲ್ಲಿ ಆಡಿದ ಖಾರದ ಮಾತುಗಳು ತಾರಕಕ್ಕೇರಿ ಸ್ನೇಹಿತನನ್ನೇ ಲಾರಿ ಹತ್ತಿಸಿ ಕೊಂದಿದ್ರು, ಅಪಘಾತವೆಂದು ಬಿಂಬಿಸಿ ತಣ್ಣಗಾಗಿದ್ದ ಪ್ರಕರಣವೀಗ ಬಿಸಿ ರಕ್ತದ ಕಥೆ ಹೇಳ್ತಿದೆ.. ಅಷ್ಟಕ್ಕೂ ಏನು ಆ ರೋಚಕ ಸ್ಟೋರಿ.. ಇಲ್ಲಿದೆ ನೋಡಿ..

    ಪೊಲೀಸರೆದುರು ಬಂದಿಯಾಗಿರುವ ಆರೋಪಿಗಳು, ಆರೋಪಿಗಳಿಂದ ಸ್ಥಳ ಪರಿಶೀಲನೆ ನಡೆಸುತ್ತಿರುವ ಪೊಲೀಸರು, ಇದೆಲ್ಲಾ ಕಂಡು ಬಂದಿದ್ದು ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಮಾಸ್ತಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ

. ಹೌದು ಅದು ಅಪಘಾತ ಎಂದು ಬಿಂಬಿಸಲಾಗಿದ್ದ ಪ್ರಕರಣ ಆದ್ರೆ ಅದೇ ಪ್ರಕರಣ ಈಗ ಸ್ನೇಹಿತರಿಂದ ಕೊಲೆಯಾದ ಅಮಾಯಕನೊಬ್ಬನ ಕಥೆ ಹೇಳುತ್ತಿದೆ. ಅವತ್ತು ಮಾರ್ಚ್​-5 ನೇ ತಾರೀಖು ಬುಧವಾರ ಮಾಲೂರು ತಾಲ್ಲೂಕು ನಾರಾಯಣಪುರ ಗೇಟ್​ ಬಳಿ ಹಿಟ್​ ಅಂಡ್​ ರನ್​ ರೀತಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು, ಮಾಸ್ತಿ ಪೊಲೀಸರು ಮೃತಪಟ್ಟವನ ಪತ್ತೆಗಾಗಿ ಪ್ರಕಟಣೆ ಹಾಕಿಸಿದ್ರು ಇದಾದ ಕೆಲವೇ ದಿನಗಳಲ್ಲಿ ಅವನ ಗುರುತು ಪತ್ತೆಯಾಗಿತ್ತು,ಅದು ಮಾಲೂರು ತಾಲ್ಲೂಕು ಹುಲಿಮಂಗಲ ಗ್ರಾಮದ ಡ್ರೈವರ್​ ಕೆಲಸ ಮಾಡುತ್ತಿದ್ದ ಗೋಪಾಲ್​ ಆಲೀಯಸ್​ ಚಿನ್ನಿ, ಅನ್ನೋದು ಗೊತ್ತಾಗಿತ್ತು. ಗೋಪಾಲ್​ ಹೀಗೆ ಅಪಘಾತವಾಗಿ ಸತ್ತಿದ್ದಾನೆ ಎಂದು ಎಲ್ಲರೂ ಅಂದುಕೊಂಡಿದ್ರು. ಅವರ ಸಂಬಂದಿಕರು ಕೂಡಾ ಹೆಚ್ಚಾಗಿ ಕುಡಿಯುತ್ತಿದ್ದ ಯಾವುದೋ ವಾಹನಕ್ಕೆ ಸಿಕ್ಕಿ ಸತ್ತಿರಬಹುದು ಎಂದುಕೊಂಡು ಸುಮ್ಮನಾಗಿದ್ರು.ಆದ್ರೆ ಮಾಸ್ತಿ ಪೊಲೀಸರಿಗೆ ಈಬಗ್ಗೆ ಅನುಮಾನ ಶುರುವಾಗಿತ್ತು, ಕಾರಣ ಆ ಅಪಘಾತವಾಗಿದ್ದ ಸ್ಥಳ ಸಾಕಷ್ಟು ಅನುಮಾನ ಮೂಡುವಂತಿತ್ತು,ಹಾಗಾಗಿ ಪೊಲೀಸರು ಅದರ ತನಿಖೆ ಶುರುಮಾಡಿದ್ರು.

ಬೈಟ್​:1 ರೋಹಿಣಿ ಕಠೋಚ್​ (ಎಸ್ಪಿ, ಕೋಲಾರ)

    ಹೀಗೆ ಅಪಘಾತ ಪ್ರಕರಣವೊಂದರ ಹಿಂದೆ ಬಿದ್ದಿದ್ದ ಪೊಲೀಸರಿಗೆ ಇದೊಂದು ಕೊಲೆ ಅನ್ನೋದು ಖಚಿತವಾಗಿತ್ತು ಆ ಕೊಲೆಯ ಜಾಡು ಹಿಡಿದ ಪೊಲೀಸರಿಗೆ ಅಂದು 5 ನೇ ತಾರೀಕು ಎಲ್ಲರೂ ಮೃತ ಗೋಪಾಲ್​ ಹಾಗೂ ಆತನ ಇಬ್ಬರು ಸ್ನೇಹಿತರಾದ ನಾಗರಾಜ್​ ಮತ್ತು ರಾಜಪ್ಪ ಮೂರು ಬಾರ್​ ವೊಂದರಲ್ಲಿ ಕುಳಿತು ಕಂಠಪೂರ್ತಿ ಕುಡಿದಿದ್ರು,ಅಲ್ಲೇ ಗೋಪಾಲ್ ಎರಡನೇ ಹೆಂಡತಿ ಅಮರಾವತಿ ವಿಚಾರದಲ್ಲಿ ನಾಗರಾಜ್​ ಹಾಗೂ ಗೋಪಾಲ್​ ನಡುವೆ ಜಗಳ ಶುರುವಾಗಿತ್ತು, ನಾಗರಾಜ್​ ಅವಳ ಮೇಲೆ ಕಣ್ಣಾಕಿದ್ದಾನೆ ಎಂದು ಗೋಪಾಲ್​ ಜಗಳ ಮಾಡಿದ್ದ ನಂತರ, ಇಬ್ಬರನ್ನು ಸಮಾದಾನ ಪಡಿಸಿ ಕರೆದುಕೊಂಡು ರಾಜಪ್ಪ ಕ್ಯಾಂಟರ್ ವಾಹನದಲ್ಲಿ ಹತ್ತಿಸಿಕೊಂಡು ಬರುತ್ತಿದ್ದ ಈ ವೇಳೆ ನಾಗರಾಜ್, ನಾರಾಯಣಪುರ ಗೇಟ್​ ಬಳಿ ಗೋಪಾಲ್​ ನನ್ನು ಕ್ಯಾಂಟರ್​​ ವಾಹನದಿಂದ ಹೊರಗೆ ಕಾಲಿನಿಂದ ಒದ್ದಿದ್ದ, ಹೊರಗೆಬಿದ್ದು ಗಾಯಗೊಂಡಿದ್ದ ಗೋಪಾಲ್​ ತಲೆಯ ಮೇಲೆ ಗಾಡಿ ಹತ್ತಿಸಿ ಕೊಲೆಮಾಡಿದ್ದ, ತನಗೇನು ಗೊತ್ತಿಲ್ಲವೆಂದು ಅವರಿಬ್ಬರು ಅಲ್ಲಿಂದ ಹೊರಟು ಹೋಗಿದ್ರು. ಅವರಂದುಕೊಂಡಂತೆ ಅದು ಅಪರಿಚಿತ ವಾಹನ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ ಎಂದು ಎಲ್ಲರೂ ಮನೆಯವರು ಕೂಡಾ ನಂಬಿದ್ರು ಆದ್ರೆ ಈಗ ಅದೇ ಅಪಘಾತ ಪ್ರಕರಣ ಕೊಲೆ ಪ್ರಕರಣವಾಗಿ ಬೆಳಕಿಗೆ ಬಂದಿದೆ.

ಬೈಟ್​:2 ಅಮರಾವತಿ (ಗೋಪಾಲ್​ ಎರಡನೇ ಹೆಂಡತಿ)

    ಒಟ್ಟಾರೆ ಮೂವರು ಸ್ನೇಹಿತರ ನಡುವೆ ಹೆಣ್ಣಿನ ವಿಚಾರವಾಗಿ ಆರಂಭವಾದ ಗಲಾಟೆ, ಸ್ನೇಹಿತನೊಬ್ಬನ ಕೊಲೆಯಲ್ಲಿ ಅಂತ್ಯವಾಗಿದೆ, ಈ ಮೂಲಕ ಡ್ರೈವರ್​ ಕೆಲಸ ಮಾಡಿಕೊಂಡು ನೆಮ್ಮದಿಯಾಗಿ ಸಾಗುತ್ತಿದ್ದ ಮೂವರು ಸ್ನೇಹಿತರ ಸಂಸಾರಗಳು ಅಕ್ರಮ ಸಂಬಂದ ಹಿನ್ನೆಲೆ ಚಕ್ರ ಮುರಿದ ಗಾಡಿಯಾಗಿ ಹಳ್ಳಹಿಡಿದಿದೆ..

Conclusion:
Last Updated : Mar 13, 2019, 6:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.