ETV Bharat / state

ಚೆನ್ನೈ - ಬೆಂಗಳೂರು ಮಾರ್ಗದ ರೈಲು ಸೇವೆ ಸ್ಥಗಿತ..! ರೈಲ್ವೆ ಇಲಾಖೆಯಿಂದ ಅಧಿಕೃತ ಪ್ರಕಟಣೆ - ರೈಲ್ವೆ ಇಲಾಖೆಯಿಂದ ಅಧಿಕೃತ ಪ್ರಕಟಣೆ

ವಿದ್ಯುತ್ ತಂತಿ ಕಡಿತಗೊಂಡ ಪರಿಣಾಮ ಚೆನ್ನೈ ಮತ್ತು ಬೆಂಗಳೂರು ನಡುವಿನ ರೈಲು ಸಂಚಾರವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.

Train service suspended between Chennai and Bangalore

author img

By

Published : Feb 22, 2023, 7:16 PM IST

Updated : Feb 22, 2023, 8:00 PM IST

ಕೋಲಾರ/ಚೆನ್ನೈ: ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವ ಹಿನ್ನೆಲೆಯಲ್ಲಿ ಚೆನ್ನೈ ಮತ್ತು ಬೆಂಗಳೂರು ಮಾರ್ಗದಲ್ಲಿ ಓಡಾಡುವ ರೈಲುಗಳ ಸಂಚಾರವನ್ನು ತತಕ್ಷಣ ಸ್ಥಗಿತಗೊಳಿಸಲಾಗಿದೆ. ರೈಲ್ವೆ ಇಲಾಖೆ ಬುಧವಾರ ಪ್ರಕಟಣೆ ಈ ಬಗ್ಗೆ ಹೊರಡಿಸಿದೆ. ಜಿಲ್ಲೆಯ ಮಾಲೂರು ತಾಲೂಕಿನ ಬ್ಯಾಟರಾಯನಹಳ್ಳಿ ಬ್ಯಾಟರಾಯನಹಳ್ಳಿ ಬಳಿ ವಿದ್ಯುತ್ ತಂತಿ​ ತುಂಡಾಗಿ ಬಿದ್ದಿದೆ.​ ಸದ್ಯ ದುರಸ್ತಿ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸುಮಾರು 8ಕ್ಕೂ ಹೆಚ್ಚು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಈ ಕುರಿತು ರೈಲ್ವೆ ಇಲಾಖೆ ಪ್ರಕಟಣೆ ಮೂಲಕ ಅಧಿಕೃತ ಮಾಹಿತಿ ನೀಡಿದೆ.

Train service suspended between Chennai and Bangalore
ರೈಲ್ವೆ ಇಲಾಖೆಯ ಪ್ರಕಟಣೆ

ಈ ರೈಲುಗಳಲ್ಲಿ ಓಡಾಡುವ ಪ್ರಯಾಣಿಕರ ಗಮನಕ್ಕೆ: 01778 ಸಂಖ್ಯೆಯ ಮಾರಿಕುಪ್ಪಂ - ಬೈಯ್ಯಪ್ಪನಹಳ್ಳಿ (MKM-BYPL) ರೈಲು, 01779 ಸಂಖ್ಯೆಯ ಬೈಯ್ಯಪ್ಪನಹಳ್ಳಿ - ಮಾರಿಕುಪ್ಪಂ (BYPL-MKM), 01780 ಸಂಖ್ಯೆಯ ಮಾರಿಕುಪ್ಪಂ - ಬಂಗಾರಪೇಟೆ (MKM-BWT), 06527 ಸಂಖ್ಯೆಯ ಬಂಗಾರಪೇಟೆ - ಸರ್ ಎಂ.ವಿಶ್ವೇಶ್ವರಯ್ಯ ನಿಲ್ದಾಣ (BWT-SMVB), 06291 ಸಂಖ್ಯೆಯ ಕೃಷ್ಣರಾಜಪುರ - ಕುಪ್ಪಂ (KJM-KPN), 06290 ಸಂಖ್ಯೆಯ ಕುಪ್ಪಂ - ಬಂಗಾರಪೇಟೆ (KPN-BWT), 06390 ಸಂಖ್ಯೆಯ ಬಂಗಾರಪೇಟೆ - ಬೆಂಗಳೂರು ನಗರ ಜಂಕ್ಷನ್ (BWT-SBC), 16522 ಸಂಖ್ಯೆಯ ಬೆಂಗಳೂರು ನಗರ ಜಂಕ್ಷನ್ - ಬಂಗಾರಪೇಟೆ (SBC-BWT)ಗೆ ತೆರಳುವ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಪ್ರಯಾಣಿಕರಿಗೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಮಾಹಿತಿ ನೀಡುವಂತೆ ಸೂಚನೆ: ಸಾರ್ವಜನಿಕರು ಈ ಮಾರ್ಗದಲ್ಲಿ ಪ್ರಯಾಣ ಮಾಡುವ ಮುನ್ನ ಈ ಪ್ರಕಟಣೆಯನ್ನು ಗಮನಿಸಬೇಕೆಂದು ಮನವಿ ಮಾಡಿಕೊಂಡಿರುವ ರೈಲ್ವೆ ಇಲಾಖೆಯು, ಸಂಬಂಧಪಟ್ಟ ಅಧಿಕಾರಿಗಳು ಈ ಮಾರ್ಗದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಸಮರ್ಪಕ ಮಾಹಿತಿ ನೀಡುವಂತೆ ಸೂಚಿಸಿದೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಸಿಂಧಿಗಳ ಅಪಹರಣ, ಹತ್ಯೆ ತಡೆಗೆ ಮುಂದಾಗುವಂತೆ ಬ್ರಿಟನ್ ಪ್ರಧಾನಿ ಸುನಕ್​ಗೆ ಒತ್ತಾಯ

Last Updated : Feb 22, 2023, 8:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.