ETV Bharat / state

ಟೊಮೇಟೊ ಬೆಲೆ ದಿಢೀರ್​​ ಏರಿಕೆ: ಲಾಕ್​ಡೌನ್​ ಸಡಿಲಿಕೆ ನಂತರ ರೈತರಿಗೆ ಜಾಕ್​ಪಾಟ್​​ - tomato price latest news

ಕಳೆದೆರಡು ದಿನಗಳಿಂದ ಟೊಮೇಟೊ ಬೆಲೆ ದಿಢೀರ್​ ಏರಿಕೆ ಕಂಡಿದ್ದು, ಕೋಲಾರ ಭಾಗದ ಟೊಮೇಟೊ ಬೆಳೆಗಾರರು ಕೊಂಚ ಚೇತರಿಕೆ ಕಾಣುತ್ತಿದ್ದಾರೆ.

tomato price increase
ಟೊಮ್ಯಾಟೋ ಬೆಲೆ ಏರಿಕೆ
author img

By

Published : Jun 5, 2020, 3:59 PM IST

ಕೋಲಾರ: ಕೊರೊನಾ ಲಾಕ್‌ಡೌನ್‌ನಿಂದಾಗಿ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಟೊಮೇಟೊವನ್ನ ಬೀದಿಗೆ ಸುರಿದಿದ್ದ ರೈತರಿಗೆ ಇದೀಗ ಲಾಕ್‌ಡೌನ್ ಸಡಿಲಿಕೆ ಅದೃಷ್ಟ ತಂದಿದೆ.

ಕೊರೊನಾದಿಂದ ಕಂಗಾಲಾಗಿದ್ದ ಕೋಲಾರದ ರೈತರು ಇದೀಗ ಚೇತರಿಕೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಒಂದು ಬಾಕ್ಸ್ ಟೊಮೇಟೊ ಬೆಲೆ 250 ರಿಂದ 300 ರೂಗೆ ಏರಿಕೆ ಕಂಡಿದ್ದು, ಇದೀಗ ಟೊಮೇಟೊ ಬೆಳೆ ಇರುವಂತ ಬೆಳೆಗಾರರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

ಟೊಮೇಟೊ ಬೆಲೆ ಏರಿಕೆ

ಕೊರೊನಾ ಲಾಕ್​ಡೌನ್​​ ಟೊಮೇಟೊ ಬೆಳೆದ ರೈತರನ್ನ ಸಂಕಷ್ಟಕ್ಕೆ ದೂಡುವ ಮೂಲಕ, ಟೊಮೇಟೊವನ್ನು ರಸ್ತೆಗಳಿಗೆ ಸುರಿಯುವಂತೆ ಮಾಡಿತ್ತು. ಕೆಲವೆಡೆ ತೋಟದಲ್ಲಿಯೇ ಬೆಳೆ ಕೊಳೆಯುವಂತೆ ಮಾಡಿತ್ತು. ಆದರೆ, ಲಾಕ್‌ಡೌನ್ ಸಡಿಲಿಕೆಯಾದ ನಂತರ ಕಳೆದೆರಡು ದಿನಗಳಿಂದ ಟೊಮೇಟೊ ಬೆಲೆ ದಿಢೀರ್ ಏರಿಕೆ ಕಂಡಿದೆ.

ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಟೊಮೇಟೋಗೆ ಬೇಡಿಕೆ ಹೆಚ್ಚಾಗಿರುವ ಪರಿಣಾಮ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೇಟೊಗೆ ಒಳ್ಳೆಯ ಬೆಲೆ ಬಂದಿದೆ. ಇನ್ನು ಮಹಾರಾಷ್ಟ್ರ, ನಾಸಿಕ್ ಮತ್ತಿತರ ಕಡೆ ಚಂಡಮಾರುತದಿಂದ ಬೆಳೆ ನಾಶವಾಗಿರುವ ಹಿನ್ನೆಲೆ ಇಲ್ಲಿನ ಟೊಮೇಟೊಗೆ ಬೇಡಿಕೆ ಹೆಚ್ಚಾಗಿದೆ. ಜೊತೆಗೆ ಮುಂದೆ ಬಾಂಗ್ಲಾದೇಶ, ಶ್ರೀಲಂಕಾ ಮತ್ತಿತರ ನೆರೆ ರಾಷ್ಟ್ರಗಳಿಗೆ ಟೊಮೇಟೊ ರಫ್ತಾಗುವುದರಿಂದ, ಟೊಮೇಟೊ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದರಿಂದಾಗಿ ಕೋಲಾರ ಜಿಲ್ಲೆಯ ರೈತರು ವ್ಯಾಪಾರಸ್ಥರು ಹಾಗೂ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುವ ಕಾರ್ಮಿಕರೂ ಕೂಡ ಕೊಂಚ ಚೇತರಿಕೆ ಕಂಡುಕೊಳ್ಳಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.