ETV Bharat / state

ಕೋಲಾರ ಲಾಠಿ ಚಾರ್ಜ್ ಪ್ರಕರಣ​: ಮೂರು ಎಫ್​ಐಆರ್​ ದಾಖಲು - CAA supporting rally in kolar

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಕೋಲಾರದಲ್ಲಿ ಶನಿವಾರ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಬೃಹತ್​​ ಜನ ಜಾಗೃತಿ ರ‍್ಯಾಲಿ ಹಾಗೂ ಬಹಿರಂಗ ಸಭೆ ವೇಳೆ ನಡೆದ ಲಾಠಿ ಚಾರ್ಜ್​ಗೆ ಸಂಬಂಧಿಸಿದಂತೆ ಮೂರು ಎಫ್​​ಐಆರ್​ ದಾಖಲಾಗಿವೆ.

ಕೋಲಾರ ಲಾಠಿ ಚಾರ್ಜ್​ ಪ್ರಕರಣ , Kolar lathi charge case
ಕೋಲಾರ ಲಾಠಿ ಚಾರ್ಜ್​
author img

By

Published : Jan 5, 2020, 7:46 PM IST

ಕೋಲಾರ: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ವಿವಿಧ ಸಂಘಟನೆಗಳು ಶನಿವಾರ ಹಮ್ಮಿಕೊಂಡಿದ್ದ ಬೃಹತ್​​ ಜನ ಜಾಗೃತಿ ರ‍್ಯಾಲಿ ಹಾಗೂ ಬಹಿರಂಗ ಸಭೆ ವೇಳೆ ನಡೆದ ಲಾಠಿ ಚಾರ್ಜ್​ ವಿಚಾರಕ್ಕೆ ಸಂಬಂಧಿಸಿದಂತೆ ಮೂರು ಎಫ್​​ಐಆರ್​ ದಾಖಲಾಗಿವೆ.

ಜನ ಜಾಗೃತಿ ರ‍್ಯಾಲಿ ಹಾಗೂ ಬಹಿರಂಗ ಸಭೆ ವೇಳೆ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದ ನಿಷೇಧಿತ ಪ್ರದೇಶವಾದ ಟವರ್ ರಸ್ತೆ ಮೂಲಕ ಮೆರವಣಿಗೆಗೆ ಅನುಮತಿ ನೀಡುವಂತೆ ಒತ್ತಾಯಿಸಿದರು. ಮೆರವಣಿಗೆಗೆ ಅನುಮತಿ ಇಲ್ಲದ ಕಾರಣ ಪೊಲೀಸರು ನಿರಾಕರಿಸಿದ್ದು, ಪ್ರತಿಭಟ‌ನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ‌ ನಡೆದು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಪ್ರಹಾರ ಮಾಡಲಾಗಿತ್ತು.

ಜೊತೆಗೆ ಮೆರವಣಿಗೆ ಬರುವುದನ್ನ ಮನಗಂಡ ಟವರ್​​ ರಸ್ತೆ ಭಾಗದಲ್ಲಿನ ನಿವಾಸಿಗಳು ಗುಂಪು ಸೇರಿದ್ದರು. ಅಲ್ಲದೆ ಮೆರವಣಿಗೆಗೆ ಅಡ್ಡಿಪಡಿಸುವ ಸಲುವಾಗಿ ಕಾರ್ಯಕ್ರಮದ ಹಿಂದಿನ ರಾತ್ರಿ ರೈಲ್ವೆ ಹಳಿಯಲ್ಲಿ ಕಲ್ಲುಗಳನ್ನ ಸಂಗ್ರಹಿಸಿಟ್ಟಿದ್ದರು ಎನ್ನಲಾಗ್ತಿದೆ.

ಇನ್ನು, ಜಾಥಾಗೆ ಅನುಮತಿ‌ ನೀಡದಿದ್ದರೂ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಕೋಲಾರ ನಗರ ಠಾಣೆಯಲ್ಲಿ ಭಾರತೀಯ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ತಿಮ್ಮರಾಯಪ್ಪ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಇನ್ನು ಕ್ಲಾಕ್ ಟವರ್​ನಲ್ಲಿ ಅಪ್ರಚೋದಿತವಾಗಿ ಗುಂಪು ಸೇರಿ ಘೋಷಣೆ ಕೂಗಿದ ಹಿನ್ನೆಲೆ ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ. ಜೊತೆಗೆ ಕಾರ್ಯಕ್ರಮದ ಹಿಂದಿನ ರಾತ್ರಿ ರೈಲ್ವೆ ಹಳಿಯಲ್ಲಿ ಜಲ್ಲಿಕಲ್ಲು ಸಂಗ್ರಹಿಸಿದ್ದ ಓರ್ವನ ವಿರುದ್ಧ ಪ್ರಕರಣ ದಾಖಲಾಗಿದ್ದು, ಒಟ್ಟು ಮೂರು ಎಫ್​ಐಆರ್ ದಾಖಲಾಗಿವೆ‌.

ಘಟನೆ ಬಳಿಕ ಕೋಲಾರ ನಗರ ಬೂದಿ ಮುಚ್ಚಿದ ಕೆಂಡದಂತಾಗಿರುವ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.

Intro:ಆಂಕರ್: ಪೌರತ್ವ ಕಾಯ್ದೆ ಬೆಂಬಲಿಸಿ ನಿನ್ನೆ ಬಿಜೆಪಿ ರ್ಯಾಲಿ ವೇಳೆ ಲಾಠಿ ಚಾರ್ಜ್ ವಿಚಾರಕ್ಕೆ ಸಂಬಂಧಿಸಿದಂತೆ ಕೋಲಾರದಲ್ಲಿ ಮೂರು ಎಫ್,ಐ,ಆರ್ ದಾಖಲಾಗಿದೆ.

Body:ನಿನ್ನೆ ಪೌರತ್ವ ಕಾಯ್ದೆಯನ್ನ ಬೆಂಬಲಿಸಿ ವಿವಿಧ ಸಂಘಟನೆಗಳು ಬೃಹತ್ ಸಭೆಯನ್ನ ಹಮ್ಮಿಕೊಂಡಿದ್ರು. ಈ ವೇಳೆ ನಿಷೇಧಿತ ಪ್ರದೇಶವಾದ ಕೋಲಾರದ ನಗರದ ಟವರ್ ಮಾರ್ಗವಾಗಿ ಜಾಥಾ ಮಾಡಲು ಪ್ರತಿಭಟನಾಕಾರರು ಮುಂದಾಗಿದ್ದರು. ಜಾಥಾಗೆ ಅನುಮತಿ ಇಲ್ಲದ ಕಾರಣ ಪೊಲೀಸರು ನಿರಾಕರಿಸಿದ್ದು, ಪ್ರತಿಭಟ‌ನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ‌ ನಡೆದಿದ್ದು, ಲಾಠಿ ಪ್ರಹಾರ ಮಾಡಿದ್ದರು‌. ಜೊತೆಗೆ ಜಾಥಾ ಬರುವುದನ್ನ ಮನಗಂಡ ಟವರ್ ನಲ್ಲಿನ ನಿವಾಸಿಗಳಿ ಗುಂಪು ಸೇರಿದ್ದರು, ಅಲ್ಲದೆ ಜಾಥಾಗೆ ಅಡ್ಡಿಪಡಿಸುವ ಸಲುವಾಗಿ ಕಾರ್ಯಕ್ರಮದ ಹಿಂದಿನ ರಾತ್ರಿ ರೈಲ್ವೆ ಹಳಿಯಲ್ಲಿ ಕಲ್ಲುಗಳನ್ನ ಸಂಗ್ರಹಿಸುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆ ಕೋಲಾರ ನಗರ ಠಾಣೆಯಲ್ಲಿ, ಜಾಥಾಗೆ ಅನುಮತಿ‌ ನೀಡದಿದ್ದರು ನಿಯಮ ಉಲ್ಲಂಘನೆ ಮಾಡಿದ ಹಿನ್ನಲೆ, ಭಾರತೀಯ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ತಿಮ್ಮರಾಯಪ್ಪ ಹಾಗೂ ಇತರರ ಮೇಲೆ ಪ್ರಕರಣ ದಾಖಲಾಗಿದೆ. ಇನ್ನು ಕ್ಲಾಕ್ ಟವರ್ ನಲ್ಲಿ ಅಪ್ರಚೋದಿತವಾಗಿ ಗುಂಪು ಸೇರಿ ಘೋಷಣೆ ಕೂಗಿದ ಹಿನ್ನೆಲೆ ಮುಸ್ಲಿಂ ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ. ಜೊತೆಗೆ ಕಾರ್ಯಕ್ರಮದ ಹಿಂದಿನ ರಾತ್ರಿ ರೈಲ್ವೆ ಹಳಿಯಲ್ಲಿ ಜೆಲ್ಲಿ ಕಲ್ಲು ಸಂಗ್ರಹಿಸುತ್ತಿದ್ದ ಹಿನ್ನೆಲೆ ಓರ್ವನ ವಿರುದ್ದ ಪ್ರಕರಣ ದಾಖಲಾಗಿದ್ದು, ಒಟ್ಟು ಮೂರು ಎಫ್,ಐ,ಆರ್ ದಾಖಲಾಗಿವೆ‌. Conclusion:ಇನ್ನು ಕೋಲಾರ ನಗರ ಬೂದಿ ಮುಚ್ಚಿದ ಕೆಂಡದಂತೆ ಇರುವ ಹಿನ್ನಲೆ ಮುಂಜಾಗೃತ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.