ETV Bharat / state

ಸಹಜ ಹೆರಿಗೆಗೆ ಫೇಮಸ್​ ಕೋಲಾರದ ಈ ಸರ್ಕಾರಿ ಆಸ್ಪತ್ರೆ: ತಿಂಗಳಿಗೆ 60ಕ್ಕೂ ಹೆಚ್ಚು ಡೆಲಿವರಿ - ಕೋಲಾರದ ಸರ್ಕಾರಿ ಆಸ್ಪತ್ರೆಯಲ್ಲಿ ತಿಂಗಳಿಗೆ 60ಕ್ಕೂ ಹೆಚ್ಚು ನಾರ್ಮಲ್​ ಡೆಲಿವರಿ

ಇತ್ತೀಚೆಗೆ ಹೆರಿಗೆ ಮಾಡಿಸೋದು ಹಣ ಮಾಡೋದಕ್ಕೆ ದೊಡ್ಡ ವ್ಯಾಪಾರ ಆಗಿ ಹೋಗಿದೆ. ಪರಿಣಾಮ ನಾರ್ಮಲ್​ ಡೆಲಿವರಿ ಅನ್ನೋದು ಕನಸಾಗೋಗಿದೆ. ಅದು ಖಾಸಗಿ ಆಸ್ಪತ್ರೆ ಆಗಿರಲಿ, ಸರ್ಕಾರಿ ಆಸ್ಪತ್ರೆ ಆಗಿರಲಿ. ಆಸ್ಪತ್ರೆಗಳು ಮಾನವೀಯತೆಯನ್ನು ಮರೆತು ಹಣ ಮಾಡಲು ಮುಂದಾಗಿವೆ. ಇಂಥ ಆಸ್ಪತ್ರೆಗಳ ನಡುವೆ ಇಲ್ಲೊಂದು ನಾರ್ಮಲ್​ ಡೆಲಿವರಿ ಸೆಂಟರ್​ ಇದೆ.

ದರ್ಗಾ ಮೊಹಲ್ಲಾದ ಸರ್ಕಾರಿ ಹೆರಿಗೆ ಆಸ್ಪತ್ರೆ
ದರ್ಗಾ ಮೊಹಲ್ಲಾದ ಸರ್ಕಾರಿ ದರ್ಗಾ ಮೊಹಲ್ಲಾದ ಸರ್ಕಾರಿ ಹೆರಿಗೆ ಆಸ್ಪತ್ರೆಹೆರಿಗೆ ಆಸ್ಪತ್ರೆ
author img

By

Published : Jul 12, 2022, 5:38 PM IST

ಕೋಲಾರ: ಜಿಲ್ಲೆಯ ದರ್ಗಾ ಮೊಹಲ್ಲಾದ ಸರ್ಕಾರಿ ಹೆರಿಗೆ ಆಸ್ಪತ್ರೆಯ ಡಾಕ್ಟರ್​​ಗಳು ಹಳೆ ಕಾಲದ ಪದ್ಧತಿಯಂತೆ ಯಾವುದೇ ಖರ್ಚಿಲ್ಲದೇ ನಾರ್ಮಲ್​ ಡೆಲಿವರಿ ಮಾಡಿಸುತ್ತಿದ್ದಾರೆ. ಇಲ್ಲಿರುವ ಇಬ್ಬರು ವೈದ್ಯರು ಹಾಗೂ ಸ್ಟಾಪ್ ನರ್ಸ್​ಗಳು ಬರೋ ಗರ್ಭಿಣಿಯರಿಗೆ ಆರೈಕೆ ಮಾಡಿ, ಆತ್ಮಸ್ಥೈರ್ಯ ತುಂಬಿ ಕೇವಲ ನಾರ್ಮಲ್​ ಡೆಲಿವರಿ ಮಾಡಿಸುತ್ತಿರುವ ವಿಧಾನ ಜಿಲ್ಲೆಯ ಯಾವ ಖಾಸಗಿ ಆಸ್ಪತ್ರೆಯಲ್ಲೂ ಮಾಡ್ತಿಲ್ಲ. ಪ್ರತಿ ತಿಂಗಳಿಗೆ 60 ಕ್ಕೂ ಹೆಚ್ಚು ನಾರ್ಮಲ್​ ಡೆಲಿವರಿ ಇಲ್ಲಿ ಮಾಡಿಸಲಾಗ್ತಿದೆ.

ದರ್ಗಾ ಮೊಹಲ್ಲಾದ ಸರ್ಕಾರಿ ಹೆರಿಗೆ ಆಸ್ಪತ್ರೆ

ಹಾಗಾಗಿನೇ ಈ ಆಸ್ಪತ್ರೆಗೆ ಕೇವಲ ಕೋಲಾರ ಮಾತ್ರವಲ್ಲದೇ ಅಕ್ಕ ಪಕ್ಕದ ತಾಲೂಕು ಸೇರಿದಂತೆ ಬೇರೆ ಬೇರೆ ಜಿಲ್ಲೆಯವ್ರೂ ಸಹ ಇಲ್ಲಿಗೆ ಬಂದು ಹೆರಿಗೆ ಮಾಡಿಸಿಕೊಳ್ತಿದ್ದಾರೆ. ಆಸ್ಪತ್ರೆಯಲ್ಲಿ ಕೇವಲ ಹೆರಿಗೆ ಮಾತ್ರವಲ್ಲ ಇಲ್ಲಿನ ಸ್ವಚ್ಚತೆ ಬಗ್ಗೆ ಯಾರು ಬೆರಳು ತೋರಿಸಿ ಮಾತನಾಡುವಂತ್ತಿಲ್ಲ. ಪ್ರತಿ ಗಂಟೆಗೊಮ್ಮೆ ನೆಲ ಸ್ವಚ್ಚಮಾಡೋದನ್ನ ಇಲ್ಲಿನ ಆಯಾಗಳು ಚಾಚು ತಪ್ಪದೆ ಪಾಲಿಸ್ತಿದ್ದಾರೆ. ಇದರಿಂದ ಹಣವಂತರು ಕೂಡ ಖಾಸಗಿ ಆಸ್ಪತ್ರೆಗೆ ದಾಖಲಾಗದೆ ಇಲ್ಲೇ ಪ್ರಾರಂಭದಿಂದ ಚಿಕಿತ್ಸೆ ಪಡೆದುಕೊಂಡು ಹೆರಿಗೆ ಮಾಡಿಸಿಕೊಳ್ತಿದ್ದಾರೆ.

ಇನ್ನು ಡೆಲಿವರಿ ಆದ ಮೇಲೆ ತಾಯಿ ಹಾಗೂ ಮಗುವಿನ ಲೇಬರ್ ವಾರ್ಡ್​ನಿಂದ, ನಾರ್ಮಲ್​ ವಾರ್ಡ್​ಗೆ ಶಿಫ್ಟ್ ಮಾಡೋವರೆಗೂ ಇಲ್ಲಿ ಕೆಲಸ ಮಾಡೋ ವೈದ್ಯರು ಹಾಗೂ ನರ್ಸ್​ಗಳು ಅಷ್ಟೇ ಸುರಕ್ಷಿತವಾಗಿ ಕೇರಿಂಗ್ ಮಾಡ್ತಾರೆ. ಅಷ್ಟೇ ಅಲ್ಲದೆ ಒಂದೂ ವೇಳೆ ನಾರ್ಮಲ್​ ಡೆಲವರಿ ಆಗೋದೆ ಇಲ್ಲ ಎನ್ನುವ ಗರ್ಭಿಣಿಯರನ್ನು ಮುಂಚಿತವಾಗಿ ವೈದ್ಯರು ತಿಳಿಸಿ ನೀವು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಅಂತ ಸಲಹೆ ಕೊಡ್ತಿರೋದ್ರಿಂದ ಗರ್ಭಿಣಿಯರು ಮುಂಜಾಗ್ರತೆ ತೆಗೆದುಕೊಳ್ಳೋದಕ್ಕೆ ಅನುಕೂಲವಾಗ್ತಿದೆ. ಮಗು ಕಳ್ಳತನ ಆಗಬಾರದು ಎಂದು ಆಸ್ಪತ್ರೆಯ ಮೂಲೆ ಮೂಲೆಗೂ ಸಿಸಿ ಟಿವಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ.

ಇದನ್ನೂ ಓದಿ: ಗೋಕಾಕ್-ಶಿಂಗಳಾಪೂರ ಸೇತುವೆ ಮುಳುಗಡೆ; ಬ್ರಿಡ್ಜ್​ ಮೇಲೆಯೇ ವಾಹನಗಳ ವಾಶಿಂಗ್​, ಸಂಚಾರ!

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.