ಕೋಲಾರ: ನಗರದಲ್ಲಿ ಸತತ ನಾಲ್ಕನೇ ದಿನವೂ ಬಾರ್ಗೆ ಕನ್ನ ಹಾಕಿರುವ ಕಳ್ಳರು, ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯವನ್ನ ಕದ್ದು ಪರಾರಿಯಾಗಿದ್ದಾರೆ.
ಕೋಲಾರ ಜಿಲ್ಲೆ ಕೆಜಿಎಫ್ ನಗರದ ಅಂಡರ್ಸನ್ ಪೇಟೆಯಲ್ಲಿ ಈ ಘಟನೆ ಜರುಗಿದ್ದು, ಬೀರ್ ಶಾಪ್ ಏರಿಯಾದಲ್ಲಿರುವ ನ್ಯೂ ಲಕ್ಕಿ ವೈನ್ ಶಾಪ್ನಲ್ಲಿ ಕಳ್ಳತನವಾಗಿದೆ. ಕಳೆದ ರಾತ್ರಿ ವೈನ್ಶಾಪ್ನ ಹಿಂಬದಿ ಗೋಡೆಗೆ ಕನ್ನ ಹಾಕಿರುವ ಕಳ್ಳರು ಲಕ್ಷಾಂತರ ಮೌಲ್ಯದ ಮದ್ಯವನ್ನ ಕದ್ದು ಪರಾರಿಯಾಗಿದ್ದಾರೆ.
ಇನ್ನು ನಾಲ್ಕು ದಿನದಿಂದ ಜಿಲ್ಲೆಯಲ್ಲಿ ಪ್ರತಿನಿತ್ಯ ಒಂದೊಂದು ಬಾರ್ ಕಳ್ಳತನವಾಗುತ್ತಿದ್ದು, ಕಳ್ಳರ ಕೈಚಳಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನು ಸ್ಥಳಕ್ಕೆ ಆಂಡರ್ಸನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲಾಕ್ಡೌನ್ನಿಂದ ಮದ್ಯ ದೊರೆಯದ ಕಾರಣ ಕೋಲಾರದಲ್ಲಿ ಕುಡುಕ ಕಳ್ಳರ ಕೈಚಳಕ ಮುಂದುವರೆದಿದ್ದು, ಮದ್ಯಪ್ರಿಯರು ಮದ್ಯಕ್ಕಾಗಿ ಪರಿತಪಿಸುತ್ತಿರುವ ಹಿನ್ನೆಲೆ ಇತ್ತೀಚೆಗೆ ಬಾರ್ ಕಳ್ಳತನಗಳು ಹೆಚ್ಚಾಗಿವೆ.