ಕೋಲಾರ: ಕುರಿಗಳ ದೊಡ್ಡಿಯ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ನಾಲ್ಕು ಕುರಿಗಳನ್ನು ಕೊಂದಿರುವ ಘಟನೆ ಬಂಗಾರಪೇಟೆ ತಾಲೂಕಿನ ಬೀರಂಡಹಳ್ಳಿ ಗ್ರಾಮದಲ್ಲಿ ನಡೆದಿದೆ. ಇವುಗಳ ಮೌಲ್ಯ ಸುಮಾರು 50 ಸಾವಿರ ರೂ. ಆಗಿದ್ದು, ರೈತ ಆಂಜಿನಪ್ಪ ಎಂಬುವರಿಗೆ ಸೇರಿದವಾಗಿವೆ.
ಇತ್ತೀಚೆಗೆ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಿನ್ನೆ ರಾತ್ರಿ ಬೀದಿ ನಾಯಿಗಳ ಹಿಂಡು ಕುರಿ ದೊಡ್ಡಿ ಮೇಲೆ ದಾಳಿ ಮಾಡಿ ನಾಲ್ಕು ಕುರಿಗಳನ್ನು ಕಚ್ಚಿ ರಕ್ತ ಹೀರಿವೆ. ಬೀದಿ ನಾಯಿಗಳ ಹಾವಳಿಯಿಂದ ರಕ್ಷಣೆ ಮಾಡುವಂತೆ ಗ್ರಾಮಸ್ಥರು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.