ಕೋಲಾರ : ಜಿಲ್ಲೆಯ ಮುಳಬಾಗಿಲು ಪಟ್ಟಣದಲ್ಲಿ ಹೊರ ರಾಜ್ಯದಿಂದ ಉರುಸ್‌ಗೆ ಬಂದಿದ್ದವರನ್ನ ಮುಳಬಾಗಿಲು ತಾಲೂಕು ಆರೋಗ್ಯ ಇಲಾಖೆ ಹಾಗೂ ನಗರ ಠಾಣಾ ಪೊಲೀಸರ ಸಮ್ಮುಖದಲ್ಲಿ ತಪಾಸಣೆ ಮಾಡಲಾಗುತ್ತಿದೆ.
ಮುಳಬಾಗಿಲು ಪಟ್ಟಣದಲ್ಲಿ ಮಾರ್ಚ್ 6-7-8ನೇ ತಾರೀಖಿನಂದು ನಡೆದಿದ್ದ ಉರುಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇವರು, ಬಿಹಾರ್, ಉತ್ತರಪ್ರದೇಶ, ಕೋಲ್ಕತಾ, ರಾಜಸ್ಥಾನ ಸೇರಿದಂತೆ ಅಸ್ಸೋಂ ರಾಜ್ಯಗಳಿಂದ ಬಂದವರಾಗಿದ್ದಾರೆ. ಇವರೆಲ್ಲಾ ಉರುಸ್ ಹಿನ್ನೆಲೆ ಫೆ.28ರಂದು ವ್ಯಾಪಾರ ಹಾಗೂ ಕೂಲಿ ಕೆಲಸಕ್ಕೆಂದು ಬಂದಿದ್ದರು ಎನ್ನಲಾಗಿದೆ. ಇವರು ತಾಲೂಕಿನ ವಿವಿಧೆಡೆಯಲ್ಲಿ ವಾಸ್ತವ್ಯ ಹೂಡಿದ್ದರು.