ETV Bharat / state

ಅಭಿವೃದ್ಧಿ ಕಾಣದ ಈ ಇತಿಹಾಸ ಪುರುಷನ ಸ್ಥಳ... ಸರ್ಕಾರದ ನಿರ್ಲಕ್ಷ್ಯ ಯಾಕೆ? - undefined

ಅದು ಇತಿಹಾಸ ಸೃಷ್ಟಿಸಿದ ಮಹಾ ಪುರುಷರೊಬ್ಬರ ಹುಟ್ಟಿದ ಸ್ಥಳ. ಸಾಮಾನ್ಯ ಕುಟುಂಬದಲ್ಲಿ ಜನಿಸಿದವ ದೇಶ ಮೆಚ್ಚುವ ಶಕ್ತಿಯಾಗಿ ಬೆಳೆದು ನಿಂತು, ಎಲ್ಲರಿಗೂ ಪ್ರೇರಣೆ ನೀಡಬಲ್ಲ ವ್ಯಕ್ತಿಯಾದ್ರು. ಆದ್ರೆ ಅಂಥ ವ್ಯಕ್ತಿಯ ಇತಿಹಾಸ ಹೇಳುವ ಸ್ಮಾರಕ ಇಂದು ಮೂಕವಾಗಿದೆ. ಅಷ್ಟಕ್ಕೂ ಏನದು? ಈ ಸ್ಟೋರಿ ನೋಡಿ.

ಬೂದಿಕೋಟೆ ಹೈದರಾಲಿ ಕೋಟೆ
author img

By

Published : Jul 4, 2019, 11:57 PM IST

ಕೋಲಾರ: ಕೋಟೆ ಸುತ್ತಲೂ ಸುಂದರವಾದ ವಾತಾವರಣ, ಕೋಟೆಯ ಮೇಲೆ ನಿಂತು ನೋಡಿದಾಗ ಕಣ್ಮನ ತಣಿಸುವ ಪ್ರಕೃತಿ ಸೌಂದರ್ಯ. ಇಂಥಾದೊಂದು ದೃಶ್ಯ ನಮಗೆ ಕಾಣಸಿಗೋದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಹೈದರಾಲಿ ಕೋಟೆಯಲ್ಲಿ.

ಇದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಹೈದರಾಲಿ ಹುಟ್ಟಿದ ಬೂದಿಕೋಟೆ. ಇಂದಿಗೂ ತನ್ನದೇ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಈ ಬೂದಿಕೋಟೆಯಲ್ಲಿ ಬೃಹತ್ತಾದ ಕೋಟೆ, ಕಲ್ಯಾಣಿ, ವೇಣುಗೋಪಾಲಸ್ವಾಮಿ ದೇವಾಲಯ, ಆಂಜನೇಯ ಸ್ವಾಮಿ ದೇವಾಲಯಗಳು ಕಾಣಸಿಗುತ್ತವೆ. ಆದ್ರೆ ಪ್ರವಾಸೋದ್ಯಮ ಇಲಾಖೆ ಹಾಗೂ ಪುರಾತತ್ವ ಇಲಾಖೆ ಇದನ್ನು ಒಂದು ಪ್ರವಾಸಿ ಕೇಂದ್ರವಾಗಿ ಅಭಿವೃದ್ದಿ ಪಡಿಸುವಲ್ಲಿ ನಿರ್ಲಕ್ಷ್ಯ ತೋರಿದೆ.

ಬೂದಿಕೋಟೆಯ ಹೈದರಾಲಿ ಕೋಟೆ

ಹೈದರಾಲಿ ಸರ್ವಧರ್ಮ ಸಮನ್ವಯಿಯಾಗಿ ಭಾಷೆ, ಸಂಸ್ಕೃತಿ ಹಾಗೂ ರಾಜ್ಯದ ದೇವಾಲಯಗಳಿಗೆ ಸಾಕಷ್ಟು ಕೊಡುಗೆಗಳನ್ನು ಕೊಟ್ಟಿರುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಕೇವಲ ಪಠ್ಯ, ಪುಸ್ತಕಗಳಲ್ಲಿ ಇತಿಹಾಸ ಹೇಳುವುದಕ್ಕಿಂತ ಇಂಥ ಸ್ಮಾರಕಗಳನ್ನು ಜೀವಂತವಾಗಿ ಉಳಿಸಿ ಬೆಳೆಸುವ ಕೆಲಸ ಮಾಡಬೇಕಾಗಿದೆ. ಈ ಸ್ಥಳವೇ ಒಂದು ಇತಿಹಾಸ ಹೇಳುವ ಗ್ರಂಥಾಲಯವಾಗಿ, ಹಿಂದಿನ ಘಟನೆಗಳನ್ನು ಜೀವಂತವಾಗಿ ತೋರಿಸಬಲ್ಲ ಚಿತ್ರವಾಗಿ ನಮ್ಮ ಕಣ್ಣಮುಂದೆ ಉಳಿಯುತ್ತದೆ ಅಂತಾರೆ ಕೆಲವರು.

Intro:ಸ್ಲಗ್​: ಬೂದಿ ಮುಚ್ಚಿದ ಕೋಟೆ..

ಆಂಕರ್​: ಅದು ಇತಿಹಾಸ ಸೃಷ್ಟಿಸಿದ ಇತಿಹಾಸ ಪುರುಷನೊಬ್ಬ ಹುಟ್ಟಿದ ಸ್ಥಳ, ಸಾಮಾನ್ಯ ಕುಟುಂಬದಲ್ಲಿ ಜನಿಸಿದವನು ದೇಶ ಮೆಚ್ಚುವ ಶಕ್ತಿಯಾಗಿ ಬೆಳೆದು ನಿಂತು ಎಲ್ಲರಿಗೂ ಪ್ರೇರಣೆ ನೀಡಬಲ್ಲ ವ್ಯಕ್ತಿಯ ಕಥೆ, ಆದ್ರೆ ಅಂಥ ವ್ಯಕ್ತಿಯ ಇತಿಹಾಸ ಹೇಳುವ ಸ್ಮಾರಕ ಇಂದು ಮೂಕವಾಗಿದೆ.. ಅಷ್ಟಕ್ಕೂ ಏನದು ಈ ಸ್ಟೋರಿ ನೋಡಿ..
Body: ಸುತ್ತಲೂ ಇರುವ ಸುಂದರವಾದ ಕೋಟೆ, ಕೋಟೆಯ ಮೇಲೆನಿಂತು ನೋಡಿದಾಗ ಕಣ್ಮನ ತಣಿಸುವ ಪ್ರಕೃತಿ ಸೌಂದರ್ಯ ಇಂಥಾದೊಂದು ದೃಷ್ಯಗಳು ನಮಗೆ ಕಾಣಸಿಗೋದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಬೂದಿಕೋಟೆ ಹೈದರಾಲಿ ಕೋಟೆಯಲ್ಲಿ. ಹೌದು ಇದು ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಹೈದರಾಲಿ ಹುಟ್ಟಿದ ಸ್ಥಳ ಎಂದೇ ಪ್ರಸಿದ್ದಿ ಪಡೆದಿರುವ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಬೂದಿಕೋಟೆ, ಇಂದಿಗೂ ತನ್ನದೇ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಈ ಬೂದಿಕೋಟೆಯಲ್ಲಿ ಬೃಹತ್ತಾದ ಕೋಟೆ, ಕಲ್ಯಾಣಿ ಹಾಗೂ ಆಗಿನ ಕಾಲದಲ್ಲಿ ನಿರ್ಮಾಣವಾಗಿರುವ ವೇಣುಗೋಪಾಲಸ್ವಾಮಿ ದೇವಾಲಯ, ಆಂಜನೇಯ ಸ್ವಾಮಿ ದೇವಾಲಯಗಳು ಕಾಣಸಿಗುತ್ತವೆ. ಪ್ರವಾಸೋದ್ಯಮ ಇಲಾಖೆ ಹಾಗೂ ಪುರಾತತ್ವ ಇಲಾಖೆ ಇದನ್ನು ಒಂದು ಪ್ರವಾಸಿಕೇಂದ್ರವಾಗಿ ಅಭಿವೃದ್ದಿ ಪಡಿಸುವಲ್ಲಿ ನಿರ್ಲ್ಯಕ್ಷ ತೋರಿರುವ ಪರಿಣಾಮ, ತನ್ನ ಐತಿಹ್ಯವನ್ನು ಕೂಗಿ ಹೇಳುವಷ್ಟು ಇತಿಹಾಸ ಹೊಂದಿದ್ದರುವ ಹೈದರಾಲಿ ಕೋಟೆಯಲ್ಲಿ ಸದ್ದು ಮಾತ್ರ ಅಡಗಿಹೋಗಿದೆ. ಇದು ಇಂದಿಗೆ ಶಾಲಾ ಮಕ್ಕಳಿಗೆ, ಇತಿಹಾಸಕಾರರಿಗೆ ಇದು ಒಂದು ಅಧ್ಯಯನ ವಸ್ತುವಾಗಬೇಕಿದ್ದ ಬೂದಿಕೋಟೆ ಇಂದು ನಿರ್ಲ್ಯಕ್ಷ ಸ್ಥಳವಾಗಿ ನಿಂತಿದೆ.
ಬೈಟ್​:1 ಚಂದ್ರಶೇಖರ್​(ಸ್ಥಳೀಯರು)
ಬೈಟ್​:2 ಶ್ರೀನಿವಾಸ್​ (ಗೈಡ್​)
         ಸದ್ಯ ಈಗಿನ ಕೋಮು ಗಲಬೆಗಳನ್ನು ನೋಡುತ್ತಾ ಹೋದ್ರೆ, ಹೈದರಾಲಿ ಸರ್ವಧರ್ಮ ಸಮಸ್ವಯಿಯಾಗಿ ಬಾಷೆ, ಸಂಸ್ಕೃತಿಗೆ, ರಾಜ್ಯದ ದೇವಾಲಯಗಳಿಗೆ ಸಾಕಷ್ಟು ಕೊಡುಗೆಗಳನ್ನು ಕೊಟ್ಟಿರುವ ಬಗ್ಗೆ ಇಲ್ಲೇ ಜೀವಂತ ನಿದರ್ಶನಗಳು ಸಿಗುತ್ತವೆ. ಇತಿಹಾಸವನ್ನು ಹೇಳಲು ಕೇವಲ ಪಠ್ಯ ಪುಸ್ತಕಗಳಲ್ಲಿ ಇತಿಹಾಸ ಹೇಳುವುದಕ್ಕಿಂತ ಇಂಥ ಸ್ಮಾರಕಗಳನ್ನು ಜೀವಂತವಾಗಿ ಉಳಿಸಿ ಬೆಳೆಸುವ ಕೆಲಸ ಮಾಡಿದ್ರೆ. ಈ ಸ್ಥಳವೇ ಒಂದು ಇತಿಹಾಸ ಹೇಳುವ ಗ್ರಂಥಾಲಯವಾಗಿ, ಹಿಂದಿನ ಘಟನೆಗಳನ್ನು ಜೀವಂತ ವಾಗಿ ತೋರಿಸಬಲ್ಲ ಚಿತ್ರವಾಗಿ ನಮ್ಮ ಕಣ್ಣಮುಂದೆ ಉಳಿಯುತ್ತವೆ. ಅದು ತಲೆ ತಲೆ ಮಾರುಗಳು ಉಳಿಯುತ್ತವೆ. ಹಾಗಾಗಿನೇ ಇತಿಹಾಸದ ವಸ್ತುವಾಗಿ ಪಠ್ಯ ಕ್ರಮದ ಪ್ರಾತ್ಯಕ್ಷಿಕೆಯಾಗಿ ಇಂಥಹ ಸ್ಮಾರಕಗಳನ್ನು ಬಳಸಿಕೊಂಡಾಗ ಮಾತ್ರವೇ ಇತಿಹಾಸದ ಆಳ ಅಗಲ ಮುಂದಿನ ಪೀಳಿಗಗೆ ಕೊಂಡಯ್ಯಲು ಸಾದ್ಯ ಅನ್ನೋ ಮಾತುಗಳು ಇತಿಹಾಸಕಾರರದ್ದು.
         Conclusion:ಒಟ್ಟಾರೆ ಇತಿಹಾಸ ಅಂದ್ರೆ ಕೇವಲ ಪುಸ್ತಕದ ಕಥೆಯಲ್ಲ ಬದಲಾಗಿ ವರ್ಷಾನುಗಟ್ಟೆಲೆ ನೆಲೆ ನಿಂತು ಇತಿಹಾಸಕ್ಕೆ ಸಾಕ್ಷೀಭೂತವಾಗಿ ನಿಲ್ಲುವ ಸ್ಮಾರಕಗಳನ್ನು ಉಳಿಸುವ, ಅದರ ಮಹತ್ವವನ್ನು ಮುಂದಿನ ಪೀಳಿಗೆಗೆ ಕೊಂಡೊಯ್ದಾಗ ಮಾತ್ರವೇ ಇತಿಹಾಸಕ್ಕೆ ಜೀವ. ಹಾಗಾಗಿ ಸರ್ಕಾರಗಳು ಐತಿಹಾಸಿಕ ಸ್ಮಾರಕಗಳನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಅನ್ನೋದು ಸಾರ್ವಜನಿಕರ ಆಗ್ರಹ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.