ಕೋಲಾರ: ಜನತಾ ಕರ್ಫ್ಯೂ ವೇಳೆ ಕೋಲಾರದಲ್ಲಿ ಬಾಣಂತಿಯೋರ್ವಳು ಪರದಾಟ ನಡೆಸಿದ ಘಟನೆ ಕಂಡು ಬಂದಿದೆ.
ಜನತಾ ಕರ್ಫ್ಯೂ ಇರುವ ಕಾರಣ ಕೋಲಾರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಬಿಕೋ ಎನ್ನುವಂತಿತ್ತು. ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದು, ಎಲ್ಲೂ ಕೂಡಾ ಜನಸಂದಣಿ ಕಾಣುತ್ತಿಲ್ಲ. ಈ ವೇಳೆ, ಆಟೋದಲ್ಲಿ ಆಗಮಿಸಿದ ಬಾಣಂತಿ ಹಾಗೂ ಅವರ ಕುಟುಂಬ, ಬಸ್ ಸಿಗದೆ ಪರದಾಟ ನಡೆಸಿದ್ದಾರೆ. ಕೆಲ ಸಮಯ ಕಾದಿರುವ ಅವರು ಬಳಿಕ ಬಂದ ಆಟೋದಲ್ಲಿ ಅವರು ಮನೆಯತ್ತ ಹಿಂತಿರುಗಿದರು.