ETV Bharat / state

ಒಂದು ತಿಂಗಳಲ್ಲಿ ರಾಜ್ಯ ಸರ್ಕಾರ ಏನ್ ಬೇಕಾದ್ರು ಆಗಬಹುದು: ಶಾಸಕ ಕೆ.ವೈ.ನಂಜೇಗೌಡ ಭವಿಷ್ಯ - dks latest news

ಬಿಜೆಪಿ ಪ್ರೇರಿತವಾಗಿ ನಡೆಸಿದ ಐಟಿ, ಇಡಿ ದಾಳಿಗಳ ವಿರುದ್ಧ ನ್ಯಾಯಾಲಯದಲ್ಲಿ ಜಯ ಸಿಕ್ಕಿದ್ದು, ಶಾಸಕ ಡಿಕೆಶಿಗೆ ಜಾಮೀನು ಮಂಜೂರಾಗಿದೆ. ರಾಜ್ಯದಲ್ಲಿ ಇನ್ನು ಒಂದು ತಿಂಗಳಲ್ಲಿ ಏನಾಗುತ್ತದೆ ಗೊತ್ತಿಲ್ಲ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಶಾಸಕ ಕೆ.ವೈ.ನಂಜೇಗೌಡ
author img

By

Published : Oct 24, 2019, 7:56 AM IST

ಕೋಲಾರ: ರಾಜ್ಯ ಬಿಜೆಪಿ ಸರ್ಕಾರ ಇನ್ನೂ ಒಂದು ತಿಂಗಳಲ್ಲಿ ಏನ್​ ಬೇಕಾದ್ರು ಆಗತ್ತೆ. ಕಾಂಗ್ರೆಸ್​ಗೆ ವಂಚಿಸಿ ಹೋದವರ ಸ್ಥಿತಿ ಅತಂತ್ರವಾಗಿದೆ ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಭವಿಷ್ಯ ನುಡಿದಿದ್ದಾರೆ.

ಶಾಸಕ ಕೆ.ವೈ.ನಂಜೇಗೌಡ

ಡಿಕೆಶಿಗೆ ಜಾಮೀನು ಸಿಕ್ಕ ಹಿನ್ನೆಲೆ, ಮಾಲೂರಿನಲ್ಲಿ ಸಿಹಿ ಹಂಚಿ ಸಂಭ್ರಮಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ ನಾಯಕರನ್ನು ಹಿಮ್ಮೆಟ್ಟಿಸಲು ಹೂಡಿದ ಐಟಿ, ಇಡಿ ದಾಳಿಗಳ ವಿರುದ್ಧ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ. ರಾಜ್ಯದಲ್ಲಿ ಕಾಂಗ್ರೆಸ್​ ಬಲಿಷ್ಠವಾಗಿರುವುದನ್ನು ಬಿಜೆಪಿ ಸಹಿಸುತ್ತಿಲ್ಲ ಎಂದು ಟೀಕಿಸಿದರು.

ರಾಜ್ಯದ ಸಮ್ಮಿಶ್ರ ಸರ್ಕಾರವನ್ನು ಬಿಜೆಪಿ ಕೆಡವಲು ಕೋಟ್ಯಂತರ ರೂಪಾಯಿ ಖರ್ಚು ಮಾಡಿದೆ. ಅದನ್ನು ಯಾವ ಅಧಿಕಾರಿಗಳು ಕೇಳುತ್ತಿಲ್ಲ. ಕ್ಯಾನ್ಸರ್​ ಕಾಯಿಲೆಯಂತೆ ಅನರ್ಹ ಶಾಸಕರು ನರಳುತ್ತಿದ್ದಾರೆ ಎಂದು ಹೇಳಿದರು.

Intro:ಆಂಕರ್​: ಬಿಜೆಪಿ ಸರ್ಕಾರ ಯಾವಗ ಏನ್​ ಬೇಕಾದ್ರು ಆಗಬಹುದು, ಇನ್ನೊಂದುವರೆ ತಿಂಗಳಲ್ಲಿ ಸರ್ಕಾರ ಏನಾಗುತ್ತೋ ಗೊತ್ತಿಲ್ಲ ಎಂದು ಕೋಲಾರ ಜಿಲ್ಲೆ ಮಾಲೂರು ಶಾಸಕ ಕೆವೈ ನಂಜೇಗೌಡ ಭವಿಷ್ಯ ನುಡಿದಿದ್ದಾರೆ.

Body:ಮಾಲೂರಿನಲ್ಲಿ ಡಿಕೆಶಿಗೆ ಜಾಮೀನು ಸಿಕ್ಕ ಹಿನ್ನೆಲೆ ಸಿಹಿ ಹಂಚಿ ಸಂಭ್ರಮಿಸಿ, ಮಾಲೂರು ಮಾರಮ್ಮನಿಗೆ ಈಡುಗಾಯಿ ಹೊಡೆದು ಮಾರಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದ ನಂಜೇಗೌಡ, ಜೆಡಿಎಸ್ ಮತ್ತು ಕಾಂಗ್ರೇಸ್​ನಿಂದ ಯಾವುದೇ ಶಾಸಕರು ಬಿಜೆಪಿ ಹೋಗಲ್ಲ,ಹೋದವರ ಕಷ್ಟ ದೇವರಿಗೆ ಮುಟ್ಟಿದೆ, ಕಾಂಗ್ರೇಸ್​ನ ಬಲಿಷ್ಠ ನಾಯಕರೇ ಬಿಜೆಪಿಗೆ ಹೋಗಿ ನೋವಲ್ಲಿ ಕುದಿಯುತ್ತಿದ್ದಾರೆ,ಅದೊಂದು ಕ್ಯಾನ್ಸರ್​ ಕಾಯಿಲೆಯಂತೆ ನರಳುತ್ತಿದ್ದಾರೆ, ಬುದ್ದಿ ಇರುವ ಯಾವುದೇ ಶಾಸಕರು ಹೋಗಲ್ಲ, ಎಂದು ಅಲ್ಲದೆ ಬಿಜೆಪಿ ನಾಯಕರಿಂದ ಕಾಂಗ್ರೇಸ್​ ನಾಯಕರನ್ನು ಜೈಲಿಗೆ ಕಳುಹಿಸುವ ಕೆಟ್ಟ ಪ್ರೌರುತ್ತಿ ಆರಂಭಿಸಿದ್ದಾರೆ,ಆದ್ರೆ ಇದಕ್ಕೆ ಡಿಕೆಶಿಗೆ ಬೇಲ್​ ಕೊಟ್ಟು ಕೋರ್ಟ್​ ತಕ್ಕ ಉತ್ತರ ಕೊಟ್ಟಿದೆ,ರಾಜ್ಯದಲ್ಲಿ ಕಾಂಗ್ರೇಸ್​ ಪ್ರಭಲವಾಗಿರೋದನ್ನ ಸಹಿಸದೆ ಬಿಜೆಪಿ ನಾಯಕರು ಕಾಂಗ್ರೇಸ್ ನಾಯಕರುಗಳ ಮೇಲೆ ಕೇಸ್​ ಹಾಕಿಸುತ್ತಿದ್ದಾರೆ ಎಂದ್ರು.

ಬೈಟ್​:1 ಕೆ.ವೈ.ನಂಜೇಗೌಡ (ಮಾಲೂರು ಶಾಸಕ)Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.