ETV Bharat / state

ಡಿಸಿ ಆದೇಶ ಉಲ್ಲಂಘನೆ: ಕೋಲಾರ ಜಿಲ್ಲೆ ಪ್ರವೇಶಕ್ಕೆ ಯತ್ನಿಸಿದ ಪ್ರಮೋದ್​ ಮುತಾಲಿಕ್​ ಹೇಳಿದ್ದೇನು? - pramod muthalik

ಬಾಬಾಬುಡನ್​ ಗಿರಿಯ ದತ್ತಪೀಠಕ್ಕೆ ಹೊರಟಿದ್ದ ಬಸ್‌ ಮೇಲೆ ಕಿಡಿಗೇಡಿಗೆಳು ಕಲ್ಲು ತೂರಾಟ (Miscreants pelt stones on Datta Peeta bus) ನಡೆಸಿದ ಘಟನೆಯನ್ನ ಖಂಡಿಸಿ ಇಂದು ಕೋಲಾರ ಬಂದ್​ಗೆ ಕರೆ ನೀಡಲಾಗಿದೆ. ಡಿಸಿ ಆದೇಶ ಉಲ್ಲಂಘಿಸಿ ಜಿಲ್ಲೆ ಪ್ರವೇಶಕ್ಕೆ ಯತ್ನಿಸಿ ಬಂದ್​ನಲ್ಲಿ ಭಾಗವಹಿಸಲು ಮುಂದಾದ ಪ್ರಮೋದ್​ ಮುತಾಲಿಕ್​ ಅವರನ್ನು ಪೊಲೀಸರು ವಶಕ್ಕೆ (Pramod Muthalik detained by Kolar police) ಪಡೆದಿದ್ದಾರೆ. ಈ ವೇಳೆ ಪ್ರಮೋದ್​ ಮುತಾಲಿಕ್​ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Sri Ram Sene national president Pramod Muthalik, Pramod Muthalik detained by Kolar police, Bababudangiri dattapeeta, Shri Rama Sena activists protest, Miscreants pelt stones on Datta Peeta bus, Kolar crime news, Pramod Muthalik reaction, ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಕೋಲಾರ ಪೊಲೀಸರ ವಶಕ್ಕೆ ಪ್ರಮೋದ್ ಮುತಾಲಿಕ್, ​ಬಾಬಾಬುಡನ್​ಗಿರಿ ದತ್ತಪೀಠ, ಶ್ರೀರಾಮ ಸೇನೆಯ ಕಾರ್ಯಕರ್ತರಿಂದ ಪ್ರತಿಭಟನೆ, ಪ್ರಮೋದ್ ಮುತಾಲಿಕ್ ಹೇಳಿಕೆ, ಬಸ್​ ಮೇಲೆ ಕಲ್ಲು ತೂರಿದ ಕಿಡಿಗೇಡಿಗಳು, ಕೋಲಾರ ಅಪರಾಧ ಸುದ್ದಿ,
ಕೋಲಾರ ಜಿಲ್ಲೆ ಪ್ರವೇಶಕ್ಕೆ ಯತ್ನಿಸಿದ ಮುತಾಲಿಕ್​ ಪೊಲೀಸ್​ ವಶಕ್ಕೆ
author img

By

Published : Nov 18, 2021, 1:44 PM IST

ಕೋಲಾರ: ಜಿಲ್ಲಾಧಿಕಾರಿಗಳ ಆದೇಶ ಮೀರಿ ಬಂದ್​​ಗೆ ಬೆಂಬಲ ಸೂಚಿಸಲು ನಗರಕ್ಕೆ ಬರುತ್ತಿದ್ದ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್​ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ (Pramod Muthalik detained by Kolar police).

ದತ್ತಮಾಲಾಧಾರಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಬಸ್​ ಮೇಲೆ ಕಿಡಿಗೇಡಿಗಳ ಕಲ್ಲು ತೂರಾಟ (Miscreants pelt stones on Dutta Peeta bus) ನಡೆಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಇಂದು ಕೋಲಾರ ಬಂದ್​ಗೆ ಕರೆ ನೀಡಲಾಗಿದೆ. ಬಂದ್​​ನಲ್ಲಿ ಪ್ರಮೋದ್ ಮುತಾಲಿಕ್ ಭಾಗವಹಿಸುವ ಸಾಧ್ಯತೆ ಇತ್ತು. ಹೀಗಾಗಿ ಪ್ರಮೋದ್​ ಮುತಾಲಿಕ್ ಜಿಲ್ಲಾ ಪ್ರವೇಶಕ್ಕೆ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ನಿಷೇಧ ಹೇರಿ ಆದೇಶ ಹೊರಡಿಸಿದ್ದರು.

ಕೋಲಾರ ಜಿಲ್ಲೆ ಪ್ರವೇಶಕ್ಕೆ ಯತ್ನಿಸಿದ ಮುತಾಲಿಕ್​ ಹೇಳಿದ್ದೇನು

ಡಿಸಿ ಆದೇಶ ಮೀರಿದ್ದಕ್ಕೆ ಪೊಲೀಸರ ವಶ

ಡಿಸಿ ಆದೇಶ ಮೀರಿ ಜಿಲ್ಲೆಯನ್ನು ಪ್ರವೇಶ ಮಾಡಲು ಪ್ರಮೋದ್​ ಮುತಾಲಿಕ್​ ಯತ್ನಿಸಿದ್ದರು. ಕೋಲಾರ ಗಡಿಭಾಗ ರಾಮಸಂದ್ರದ ಬಳಿ ಪ್ರಮೋದ್​ ಮುತಾಲಿಕ್​ ಪ್ರವೇಶಿಸುತ್ತಿದ್ದಂತೆ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ(Pramod Muthalik detained by Kolar police).

ಬಿಜೆಪಿ ವಿರುದ್ಧ ಹರಿಹಾಯ್ದ ಮುತಾಲಿಕ್​

ಈ ವೇಳೆ ಮಾತನಾಡಿದ ಪ್ರಮೋದ್​ ಮುತಾಲಿಕ್(Pramod Muthalik reaction)​, ನ.13 ರಂದು ನಡೆದ ಕೃತ್ಯ ಅತ್ಯಂತ‌ ಘೋರ ಮತ್ತು ಹೇಯ್ಯ ಘಟನೆಯಾಗಿದೆ. ಅಂದು ಪೊಲೀಸರು ಬರುವುದು ಸ್ವಲ್ಪ ತಡಮಾಡಿದರೆ ದತ್ತಮಾಲಾಧಾರಿಗಳು ಭಸ್ಮವಾಗುತ್ತಿದ್ದರು. ಅದನ್ನ ತಡೆದ ಪೊಲೀಸರಿಗೆ ಧನ್ಯವಾದ ಹೇಳುವೆ ಎಂದರು.

ಆದರೆ, ಇಂದು ಬಿಜೆಪಿ ಸರ್ಕಾರ ನಡೆದುಕೊಳ್ಳುತ್ತಿರುವ ಕ್ರಮ ಸರಿಯಿಲ್ಲ. ಹಿಂದೂ ಸಮಾಜದವರು ಮೇಲೆ ದೌರ್ಜನ್ಯ ಎಸಗಿದವರ ಮೇಲೆ ಪ್ರತಿಭಟನೆ ಮಾಡಲು ಸಹ ಸರ್ಕಾರ ಅವಕಾಶ ಮಾಡಿಕೊಡದ ಬಗ್ಗೆ ನೋವುಂಟಾಗುತ್ತಿದೆ ಎಂದು ಸರ್ಕಾರದ ವಿರುದ್ಧ ಪ್ರಮೋದ್​ ಮುತಾಲಿಕ್​ ಆಕ್ರೋಶ ವ್ಯಕ್ತಪಡಿಸಿದರು.

ಇದು ಕಾನೂನು ಬದ್ಧವಾದ ಹೋರಾಟ

ಸಂವಿಧಾನ ಮತ್ತು ಕಾನೂನು ಬದ್ಧವಾಗಿ ಹೋರಾಟ ಮಾಡಲಾಗುತ್ತಿದೆ. ಅದು ನಮ್ಮ ಹಕ್ಕು. ಆದರೆ, ಸರ್ಕಾರದ ಈ ಕ್ರಮ ಸರಿಯಲ್ಲ. ಹಿಂದೂಗಳಿಗೆ ಧೈರ್ಯ ತುಂಬಬೇಕಾಗಿದೆ. ಅದೇ ರೀತಿ ಮುಸ್ಲಿಂ ಕಿಡಿಗೇಡಿಗಳಿಗೆ ಎಚ್ಚರಿಕೆ ಕೊಡಬೇಕಾಗಿದೆ. ಹೀಗಾಗಿ ಇಡೀ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ತಿಳಿಸಿದರು‌.

ಕೋಲಾರ ತಾಲೂಕು ರಾಮಸಂದ್ರ ಬಳಿಯ ಹೊಸಕೋಟೆ ತಾಲೂಕು ನಂದಗುಡಿ ಪೊಲೀಸರು ವಶಕ್ಕೆ ಪಡೆದರು. ಈ ಕ್ರಮ ಖಂಡಿಸಿ ಶ್ರೀರಾಮ ಸೇನೆ ಕಾರ್ತಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ, ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.