ಕೋಲಾರ: ಏಳು ವರ್ಷದ ಹಿಂದೆ ನಡೆದಿದ್ದ ಸುಪಾರಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಶವದ ಕುರುಹುಗಳಿಗಾಗಿ ಶೋಧ ನಡೆಸಲು ಪೊಲೀಸರು ಕೆರೆ ನೀರನ್ನು ಹೊರತೆಗೆಯುತ್ತಿರುವ ವಿಚಿತ್ರ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಮದಿದೆ.
ಮುಳಬಾಗಿಲು ಪಟ್ಟಣದ ಹೊರವಲಯದ ಕೆರೆಯಲ್ಲಿ ಹೂಳಲಾಗಿದ್ದ ಶವವನ್ನು ಹೊರ ತೆಗೆಯಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ನೂಗಲಬಂಡೆ ಕೆರೆಯಲ್ಲಿನ ನೀರನ್ನು ಖಾಲಿ ಮಾಡಿ ಶವದ ಕುರುಹುಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಓದಿ: ಕೋಲಾರ: ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಸುಫಾರಿ ಕಿಲ್ಲರ್ ಕಾಲಿಗೆ ಗುಂಡೇಟು
ಮುಳಬಾಗಿಲಿನ ಪೈಂಟರ್ ರಮೇಶ್ ಕಳೆದ ಏಳು ವರ್ಷದ ಹಿಂದೆ ಅಪರಿಚಿತ ಶವವಾಗಿ ಪತ್ತೆಯಾಗಿದ್ದರು. ಆ ವೇಳೆ ಮೃತದೇಹ ಕೊಳೆತ ಹಿನ್ನೆಲೆ ಪೊಲೀಸರು ತನಿಖೆ ಬಳಿಕ ಕೆರೆ ಬಳಿ ಹೂತಿದ್ದರು. ಇತ್ತೀಚೆಗೆ ಮುಳಬಾಗಿಲು ನಗರಸಭೆ ಸದಸ್ಯ ಜಗನ್ ಮೋಹನ್ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನ ತನಿಖೆಗೆ ಒಳಪಡಿಸಿದ್ದ ವೇಳೆ ಕೊಲೆ ಪ್ರಕರಣ ಬಯಲಾಗಿದೆ.
ಇತ್ತೀಚೆಗೆ ಕೊಲೆಯಾದ ಜಗನ್ ಮೋಹನ್ ರೆಡ್ಡಿಯೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದ ಬಗ್ಗೆ ಮಾಹಿತಿ ದೊರಕಿದ್ದು, ಪ್ರಕರಣದ ತನಿಖೆಗೆ ಪೊಲೀಸರು ಮುಂದಾಗಿದ್ದಾರೆ. ಮುಳಬಾಗಿಲು ಗ್ರಾಮಾಂತರ ಠಾಣಾ ಪೊಲೀಸರಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ.