ETV Bharat / state

ಕೋಲಾರದಲ್ಲಿ ಶಾಲಾ ವಾಹನ ಪಲ್ಟಿ: 15 ಮಕ್ಕಳಿಗೆ ಗಾಯ - ಶಾಲಾ ವಾಹನ ಪಲ್ಟಿಯಾಗಿ 15 ಮಕ್ಕಳಿಗೆ ಗಾಯ

ಕೋಲಾರದಲ್ಲಿ ಶಾಲಾ ವಾಹನ ಪಲ್ಟಿ; 15 ಮಕ್ಕಳಿಗೆ ಗಾಯ

author img

By

Published : Jan 25, 2021, 10:57 AM IST

Updated : Jan 25, 2021, 11:45 AM IST

10:54 January 25

ಶಾಲಾ ವಾಹನ ಪಲ್ಟಿಯಾಗಿ 15 ಮಕ್ಕಳು ಗಾಯಗೊಂಡಿದ್ದಾರೆ.

school-van-over-turned-in-kolar
ಕೋಲಾರದಲ್ಲಿ ಶಾಲಾ ವಾಹನ ಪಲ್ಟಿ

ಕೋಲಾರ: ನಿಯಂತ್ರಣ ತಪ್ಪಿ ಶಾಲಾ ವಾಹನ ಪಲ್ಟಿಯಾಗಿದ್ದು, 15 ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ.

ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಸೀಗೇನಹಳ್ಳಿ ಗೇಟ್ ಬಳಿ ಮುಳಬಾಗಿಲು ಪಟ್ಟಣದಲ್ಲಿರುವ ಶ್ರೀಸಾಯಿ ಇಂಟರ್ ನ್ಯಾಷನಲ್ ಶಾಲೆಯ ವಾಹನ ಪಲ್ಟಿಯಾಗಿದೆ.  

ಹೆಬ್ಬಣಿ, ಬೈರಕೂರು ಹಾಗೂ ನಂಗಲಿಯಿಂದ ಶಾಲೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ವಾಹನದ ಸಾಮರ್ಥ್ಯಕ್ಕೂ ಮೀರಿ ವಿದ್ಯಾರ್ಥಿಗಳನ್ನ ತುಂಬಿಕೊಂಡು ಹೋಗುತ್ತಿರುವುದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯrಉ ಆರೋಪಿಸಿದ್ದಾರೆ.  

ಗಾಯಗೊಂಡ 15 ಮಕ್ಕಳಲ್ಲಿ ಮೂವರ ಸ್ಥಿತಿ ಗಂಭೀರವಾಗಿದ್ದು, ಕುಶಾಲ್ ಎಂಬ ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ. ಉಳಿದವರನ್ನ  ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

ಇದನ್ನೂ ಓದಿ: ತ್ರಿಶೂರ್‌ನಲ್ಲಿ 1.28 ಕೋಟಿ ರೂ. ಮೌಲ್ಯದ ವಿದೇಶಿ ಕರೆನ್ಸಿ ಜಪ್ತಿ

Last Updated : Jan 25, 2021, 11:45 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.