ಕೋಲಾರ: ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಆರಂಭವಾದ ಜಗಳ ಬಾಲಕನ ಕೊಲೆಯಲ್ಲಿ ಅಂತ್ಯವಾಗಿರುವ ದಾರುಣ ಘಟನೆ ಜಿಲ್ಲೆಯ ಮುಳಬಾಗಿಲು ತಾಲೂಕಿನ ಎಚ್.ಬೈಯಪ್ಪನಹಳ್ಳಿಯಲ್ಲಿ ನಡೆದಿದೆ.
ಗೋವರ್ಧನ್ (5) ಮೃತ ಬಾಲಕ. ಈ ಬಾಲಕ ಪಕ್ಕದ ರೆಡ್ಡೆಮ್ಮ ಎಂಬುವರ ಮನೆಯಲ್ಲಿದ್ದ ಬೈಕ್ನ್ನು ಪಂಚರ್ ಮಾಡಿದ್ದಾನೆ. ಇದೇ ವಿಷಯಕ್ಕೆ ಮೃತ ಗೋವರ್ಧನ್ ತಾಯಿ ಲಕ್ಷ್ಮೀ ದೇವಮ್ಮಳೊಂದಿಗೆ ರೆಡ್ಡೆಮ್ಮ ಜಗಳ ತೆಗೆದಿದ್ದಾರೆ. ಈ ವೇಳೆ ಜಗಳ ತಾರಕಕ್ಕೇರಿದ್ದು, ಇಬ್ಬರ ನಡುವೆ ಮಾರಾಮಾರಿ ನಡೆದಿದೆ. ಅಲ್ಲದೆ ಇದೇ ವೇಳೆ ರೆಡ್ಡೆಮ್ಮ ಬಾಲಕನ ತಲೆಗೆ ಕಲ್ಲಿನಿಂದ ಹೊಡೆದಿದ್ದು, ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಈ ಕುರಿತಂತೆ ಮುಳಬಾಗಿಲು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.