ETV Bharat / state

ಮರಾಠ ಪ್ರಾಧಿಕಾರದ ವಿರುದ್ಧ ರಾಜ್ಯ ರೈತ ಸಂಘದಿಂದ ಪ್ರತಿಭಟನೆ.. ಯತ್ನಾಳ್‌ ಭಾವಚಿತ್ರಕ್ಕೆ ಸೆಗಣಿ, ಕೋಳಿ ಮೊಟ್ಟೆ

ಮರಾಠ ಪ್ರಾಧಿಕಾರ ಸ್ಥಾಪನೆ ವಿರೋಧಿಸಿ ಕೋಲಾರ ನಗರದ ಮೆಕ್ಕೆ ಸರ್ಕಲ್​ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ವಿನೂತನ ಪ್ರತಿಭಟನೆ ಮಾಡಿದರು..

kolar
ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ
author img

By

Published : Dec 5, 2020, 1:13 PM IST

ಕೋಲಾರ : ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪ್ರತಿಕೃತಿಗೆ ಸಗಣಿ ಬಗಡ ಎರಚುವ ಮೂಲಕ ಕೋಲಾರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಪ್ರತಿಭಟಿಸಿದರು..

ಮರಾಠ ಪ್ರಾಧಿಕಾರ ಸ್ಥಾಪನೆ ವಿರೋಧಿಸಿ ಕೋಲಾರ ನಗರದ ಮೆಕ್ಕೆ ಸರ್ಕಲ್​ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ವಿನೂತನ ಪ್ರತಿಭಟನೆ ಮಾಡಿದರು.

ಅಲ್ಲದೇ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು, ಯತ್ನಾಳ್ ಭಾವಚಿತ್ರಕ್ಕೆ ಸಗಣಿ ಬಗಡ ಎರಚುವುದರೊಂದಿಗೆ ಕೋಳಿ ಮೊಟ್ಟೆ ಹೊಡೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಇಡೀ ದೇಶದಲ್ಲಿ ಏಕರೂಪ ಪ್ರಾಧಿಕಾರ ರಚನೆಯಾಗಬೇಕೆಂದು ಒತ್ತಾಯಿಸಿದರು.

ಬೆಳಗಾವಿಯಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಣಿ ಸಭೆಗೆ ಅರುಣ್ ಸಿಂಗ್ ಚಾಲನೆ

ಇನ್ನು ಇದೇ ರೀತಿ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಸಹ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಅಲ್ಲದೇ ಕೋಲಾರದ ಗಾಂಧಿ ವನದಲ್ಲಿ ಪ್ರವೀಣ್ ಶೆಟ್ಟಿ ಬಣದವರು ಪ್ರತಿಭಟನೆ ನಡೆಸಿ ಮರಾಠ ಪ್ರಾಧಿಕಾರ ಸ್ಥಾಪನೆಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.