ಕೋಲಾರ: ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಸುಮಾರು 20ಕ್ಕೂ ಹೆಚ್ಚು ಗೋವುಗಳನ್ನು ರಕ್ಷಣೆ ಮಾಡಿರುವಂತಹ ಘಟನೆ ಕೋಲಾರದಲ್ಲಿ ಜರುಗಿದೆ. ಕೋಲಾರ ನಗರದ ರಹಮತ್ ನಗರದಲ್ಲಿ ಈ ಘಟನೆ ಜರುಗಿದ್ದು, ಗಲ್ ಪೇಟೆ ಪೊಲೀಸರು ದಾಳಿ ನಡೆಸಿದ್ದಾರೆ.
ಕೋಲಾರದ ರಹಮತ್ ನಗರದ ನಿವಾಸಿ, ಆರೀಫ್ ಎಂಬುವರಿಗೆ ಸೇರಿದ ಕಸಾಯಿಖಾನೆ ಇದಾಗಿದ್ದು, ಹಲವಾರು ದಿನಗಳಿಂದ ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿದ್ದರು ಎನ್ನಲಾಗಿದೆ. ಪೊಲೀಸರು ದಾಳಿ ಮಾಡಿದ ವೇಳೆ ಕಸಾಯಿಖಾನೆಯಲ್ಲಿ ಹಸುಗಳಿಗೆ, ನೀರು ಮೇವಿಲ್ಲದೇ ನರಳಿ ನರಳಿ ಸಾಯುತ್ತಿರುವ ದೃಶ್ಯಗಳು ಕಂಡು ಬಂದಿದೆ. ಅಲ್ಲದೇ ನೀರು ಆಹಾರ ಇಲ್ಲದೆ ಕಸಾಯಿ ಖಾನೆಯಲ್ಲಿ ಎರಡು ಹಸುಗಳು ಸತ್ತುಬಿದ್ದಿದ್ದವು.
ಆರೋಪಿ ಆರೀಫ್ ಕೋಲಾರ ಸೇರಿದಂತೆ ಬೇರೆ ಕಡೆಯಿಂದ ಅಕ್ರಮವಾಗಿ ಗೋವುಗಳನ್ನು ತಂದು, ಅವುಗಳಿಗೆ ಸರಿಯಾದ ನೀರು ಮೇವು ನೀಡದೆ, ನರಳಾಡಿ ಸತ್ತ ನಂತರ ಕಸಾಯಿಖಾನೆಗೆ ಸಾಗಿಸುತ್ತಿದ್ದ ಎನ್ನಲಾಗಿದೆ. ಕಸಾಯಿಖಾನೆ ಮಾಲೀಕ ಆರೀಫ್ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಗಲ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಅಕ್ರಮ ಕಸಾಯಿಖಾನೆ ಧ್ವಂಸ ಮಾಡಿದ ನಗರಸಭೆ ಅಧಿಕಾರಿಗಳು