ಕೋಲಾರ: ಗಣೇಶ ಚತುರ್ಥಿ ಹಿನ್ನೆಲೆ ಕೋಲಾರದ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಬ್ಇನ್ಸ್ಪೆಕ್ಟರ್ ಕೇಶವ ಮೂರ್ತಿ, ಗ್ರಾಮಗಳ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಿದ್ರು.
ಕೊರೊನಾ ಮಹಾಮಾರಿಯಿಂದಾಗಿ ಗಣೇಶ ಹಬ್ಬ ಆಚರಿಸಲು ಸರ್ಕಾರ ಹಲವಾರು ನಿರ್ಬಂಧಗಳನ್ನ ಹೇರಿದ್ದು, ಅದರ ಪ್ರಕಾರವೇ ಗಣೇಶ ಹಬ್ಬವನ್ನ ಆಚರಣೆ ಮಾಡಬೇಕು ಎಂದು ತಿಳಿಸಿದ್ರು. ಸರ್ಕಾರದ ಆದೇಶಗಳನ್ನ ಉಲ್ಲಂಘಿಸಿದ್ದೇ ಆದಲ್ಲಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ರು.
![eace meeting in Kolar Vemagal police station](https://etvbharatimages.akamaized.net/etvbharat/prod-images/kn-klr-1-ganesha-rules-av-7205620_20082020134658_2008f_1597911418_486.jpg)
ಗ್ರಾಮ ಅಥವಾ ವಾರ್ಡ್ಗೆ ಒಂದರಂತೆ ಗಣೇಶ ಮೂರ್ತಿಗಳನ್ನ ಪ್ರತಿಷ್ಠಾಪನೆ ಮಾಡುವುದರೊಂದಿಗೆ, ಡಿಜೆ, ಧ್ವನಿವರ್ಧಕ ಬಳಕೆ ಮಾಡಬಾರದು ಎಂದು ಸೂಚನೆ ನೀಡಿದರು. ಅಲ್ಲದೇ ಕಡ್ಡಾಯವಾಗಿ ಆಯಾ ಗ್ರಾಮದವರು ಆಯಾ ಪಂಚಾಯಿತಿ ಅನುಮತಿ ಪಡೆಯಬೇಕು ಎಂದರು. ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಸ್ಥಳದಲ್ಲಿ ಯಾವುದೇ ಗಲಾಟೆ ನಡೆದರೆ ಅಂತಹವರ ವಿರುದ್ಧ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದರು.