ETV Bharat / state

ಬಂಗಾರಪೇಟೆಯಲ್ಲಿ ವೃದ್ಧೆಯ ಕೊಲೆ: ಚಿನ್ನಾಭರಣಕ್ಕಾಗಿ ಪಕ್ಕದ ಮನೆಯ ಸ್ನೇಹಿತೆಯಿಂದಲೇ ಕೃತ್ಯ - Etv Bharat Kannada

ಅ.13ರಂದು ನಡೆದ ವೃದ್ಧೆಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

KN_KLR_MU
ಬಂಧಿತ ಆರೋಪಿಗಳು
author img

By

Published : Oct 17, 2022, 11:29 AM IST

ಕೋಲಾರ: ವೃದ್ಧೆಯೊಬ್ಬರನ್ನು ಕೊಂದು ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ.

ಕಿರಣ್ ಶಿಂಧೆ, ಶಾಂತಾಬಾಯಿ ಬಂಧಿತ ಆರೋಪಿಗಳು. ಅ.13 ರಂದು ಬಂಗಾರಪೇಟೆ ಪಟ್ಟಣದ ಶಾಂತಿ ನಗರದಲ್ಲಿ ಗೀತಾ(60) ಎಂಬ ವೃದ್ಧೆಯ ಕೊಲೆ ಮಾಡಿ ಅವರ ಮೈಮೇಲಿದ್ದ ಚಿನ್ನಾಭರಣವನ್ನ ದೋಚಿ ಪರಾರಿಯಾಗಿದ್ದ ಕುರಿತು ಪ್ರಕರಣ ದಾಖಲಾಗಿತ್ತು. ಪ್ರಕರಣ ಕುರಿತು ತನಿಖೆ ಆರಂಭಿಸಿದ ಪೊಲೀಸರು, ಕಿರಣ್​ ಮತ್ತು ಶಾಂತಾಬಾಯಿ ಎನ್ನುವವರನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಗಳು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ಇನ್ನು ಬಂಧಿತ ಮಹಿಳಾ ಆರೋಪಿ ಶಾಂತಾಬಾಯಿ ಹಾಗೂ ಕೊಲೆಯಾದ ವೃದ್ಧೆ ಗೀತಾ ಇಬ್ಬರು ಅಕ್ಕಪಕ್ಕದ ಮನೆಯವರಾಗಿದ್ದು, ಸ್ನೇಹಿತರಾಗಿದ್ದರು. ಹಣಕ್ಕಾಗಿಯೇ ವೃದ್ಧೆ ಶಾಂತಾಬಾಯಿ ಮತ್ತು ಕಿರಣ್​ ಶಿಂಧೆ ಸೇರಿ ಗೀತಾ ಅವರನ್ನು ಕೊಲೆ ಮಾಡಿ, ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಹೊಸಕೋಟೆ: ಪ್ರೀತಿಸಿ ಮದುವೆ... ರಸ್ತೆಯಲ್ಲೇ ಪತ್ನಿಗೆ 15 ಬಾರಿ ಇರಿದು ಕತ್ತು ಕೊಯ್ದುಕೊಂಡ ಪತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.