ಕೋಲಾರ: ತಾಲ್ಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವತಿಯಿಂದ ಗ್ರಾಮದಲ್ಲಿ ಜಾಗೃತಿ ಜಾಥಾ ಮಾಡಿದ್ದು, ರೋಟರಿ ಪಲ್ಸ್ ಪೊಲಿಯೋ ಸಂಚಾಲಕ ವಿ.ಪಿ.ಸೋಮಶೇಖರ್ ಜಾಥಾಗೆ ಚಾಲನೆ ನೀಡಿದರು.
ಇನ್ನು ಪೋಲಿಯೋ ನಿರ್ಮೂಲನೆಗೆ ಸರ್ಕಾರದ ಜೊತೆಗೆ ರೋಟರಿ ಸಂಸ್ಥೆಯು ಕೈ ಜೋಡಿಸಿದ್ದು, ಇದಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡುವಂತೆ ಮನವಿ ಸಲ್ಲಿಸಿದರು. ಇನ್ನು ಪೋಷಕರು ತಮ್ಮ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೇ 19 ನೇ ಜನವರಿಯಂದು ತಮ್ಮ ಸಮೀಪದ ಪೋಲಿಯೋ ಲಸಿಕಾ ಬೂತ್‍ಗಳಿಗೆ ಭೇಟಿ ನೀಡಿ, ಮಕ್ಕಳಿಗೆ ಪೋಲಿಯೋ ಲಸಿಕೆಯನ್ನು ಹಾಕಿಸಬೇಕೆಂದು ಜಾಗೃತಿ ಮೂಡಿಸಿದರು. ಇನ್ನು ಎರಡು ಹನಿ ಪೋಲಿಯೋ ಲಸಿಕೆ ಜೀವನ ಪೂರ್ತಿ ಆನಂದಮಯ ಸಮಾಜವನ್ನು ಸದೃಢ ವ್ಯಕ್ತಿತ್ವವನ್ನು ನಿರ್ಮಿಸುತ್ತಿದ್ದು, ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕೆಂದರು.
ಇನ್ನು ಈ ಸಂದರ್ಭದಲ್ಲಿ ಹರಟಿ ಶಾಲೆಯ ಮುಖ್ಯೋಪಾದ್ಯಾಯ ಜಿ. ಶ್ರೀನಿವಾಸ್, ಸಹ ಶಿಕ್ಷಕರಾದ ಸೊಣ್ಣೇಗೌಡ ಸೇರಿದಂತೆ ಶಾಲಾ ಮಕ್ಕಳು ಭಾಗವಹಿಸಿದ್ದರು.