ETV Bharat / state

Police Dog: ಕೋಲಾರ: 24 ಗಂಟೆಯೊಳಗೆ ಕೊಲೆ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸ್ ಶ್ವಾನ! - ಅಪರಾಧ ಪ್ರಕರಣಗಳ ಪತ್ತೆ

Police Dog: ಕೊಲೆ ಪ್ರಕರಣ ದಾಖಲಾಗಿ ಒಂದೇ ದಿನದೊಳಗೆ ರಕ್ಷಾ ಹೆಸರಿನ ಪೊಲೀಸ್ ಶ್ವಾನ ಆರೋಪಿಯನ್ನು ಪತ್ತೆ ಹಚ್ಚಿದ್ದು, ಮೆಚ್ಚುಗೆ ಗಳಿಸಿದೆ.

ಕೋಲಾರ ಜಿಲ್ಲಾ ಅಪರಾಧ ವಿಭಾಗದ ರಕ್ಷಾ ಹೆಸರಿನ ಶ್ವಾನ

author img

By

Published : Aug 13, 2023, 10:20 PM IST

Updated : Aug 14, 2023, 6:45 AM IST

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಮಾಹಿತಿ ನೀಡಿದರು.

ಕೋಲಾರ : ಕೊಲೆ ಪ್ರಕರಣ ನಡೆದು 24 ತಾಸಿನೊಳಗೆ ಪೊಲೀಸ್ ಶ್ವಾನ ಆರೋಪಿಯನ್ನು ಪತ್ತೆ ಹಚ್ಚಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಜಿಲ್ಲಾ ಅಪರಾಧ ವಿಭಾಗದ ರಕ್ಷಾ ಹೆಸರಿನ ಶ್ವಾನ ಆರೋಪಿಯನ್ನು ಪತ್ತೆ ಮಾಡಿದೆ.

ಮುಳಬಾಗಿಲು ತಾಲೂಕಿನ ಬೇವಹಳ್ಳಿ ಬಳಿ ಶುಕ್ರವಾರ (ಆ.11) ಸುರೇಶ್ ಎಂಬುವರ ಕೊಲೆ ನಡೆದಿತ್ತು. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯ ಪತ್ತೆಗಾಗಿ ಶ್ವಾನದಳದೊಂದಿಗೆ ಹುಡುಕಾಟ ಆರಂಭಿಸಿದ್ದರು. ಬೆರಳು ಮುದ್ರೆ ತಜ್ಞರು, ಎಫ್‌ಎಸ್‌ಎಲ್ ತಜ್ಞರನ್ನೂ ಸ್ಥಳಕ್ಕೆ ಕರೆಸಿಕೊಳ್ಳಲಾಗಿತ್ತು. ಆದರೆ, ಯಾವುದೇ ಸುಳಿವು ಸಿಗದ ಪ್ರಕರಣದಲ್ಲಿ ಶ್ವಾನವು ಕೊಲೆಯ ಆರೋಪಿಯನ್ನು ಪತ್ತೆಮಾಡಿ ಸಿಬ್ಬಂದಿಗೆ ನೆರವಾಗಿದೆ.

''ನಮಗೆ ಆರೋಪಿಯ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ. ಕೊಲೆಯಾದ ವ್ಯಕ್ತಿಗೆ ಯಾರೊಂದಿಗೂ ಯಾವುದೇ ಹಳೆ ದ್ವೇಷವೂ ಇರಲಿಲ್ಲ. ರಾತ್ರಿ ಯಾರು ಬಂದು ಸಾಯಿಸಿದ್ದಾರೆ ಎಂಬುದರ ಬಗ್ಗೆ ಗೊತ್ತಾಗಲಿಲ್ಲ. ರಾಡ್​ನಿಂದ ಹೊಡೆದಿರುವಂತೆ ಆತ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಸ್ಥಳಕ್ಕೆ ಎಫ್‌ಎಸ್‌ಎಲ್ ಟೀಂನವರು ಬಂದು ಶ್ವಾನ ರಕ್ಷಾಗೆ ಮೃತನ ರಕ್ತದ ವಾಸನೆ ಹಿಡಿಸುತ್ತಾರೆ. ಅದು ಸುಮಾರು 1.5 ಕಿಲೋ ಮೀಟರ್​ ಕ್ರಮಿಸಿ ಪೊದೆಯಲ್ಲಿ ಅವಿತು ಕುಳಿತಿದ್ದ ವ್ಯಕ್ತಿಯ ಮುಂದೆ ನಿಲ್ಲುತ್ತದೆ. ನಂತರ ನಮ್ಮ ಸಿಬ್ಬಂದಿ ಆತನನ್ನು ಹಿಡಿದರು".

ಮೃತ ಸುರೇಶ್ ಅಮ್ಮ ಕಲಾವತಿ

"ವಿಚಾರಣೆ ನಡೆಸಿದಾಗ, ಸುರೇಶ್ ಎಂಬಾತನನ್ನು ಗ್ರಾಮದ ರವಿ ಎಂಬಾತ ರಾಡ್​ನಿಂದ ಹೊಡೆದು ಕೊಲೆ ಮಾಡಿದ್ದು ತಿಳಿಯಿತು. ಕೊಲೆಗೆ ಹಿಂದಿನ ದಿನ ರಾತ್ರಿ ಇಬ್ಬರೂ ಕುಡಿದಿದ್ದರು. ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿದೆ. ನಂತರ ಸುರೇಶ್ ಮನೆಗೆ ಬಂದು ಮಲಗಿದ್ದ. ಈ ವೇಳೆ ಸುರೇಶ್​ನ ಮನೆಗೆ ಬಂದ ರವಿ ರಾಡ್​ನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದನು" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಮಾಹಿತಿ ನೀಡಿದರು.

ಶ್ವಾನ ರಕ್ಷಾ ಸುಮಾರು 8 ವರ್ಷದಿಂದ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದೆ. ಹಲವಾರು ಅಪರಾಧ ಪ್ರಕರಣಗಳ ಪತ್ತೆಯಲ್ಲಿ ಸಿಬ್ಬಂದಿಗೆ ನೆರವಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ದಾವಣಗೆರೆಯಲ್ಲೂ ಇಂಥದ್ದೇ ಘಟನೆ: ಅಪರಾಧ​ ಪ್ರಕರಣಗಳನ್ನು ಭೇದಿಸಲು ಪೊಲೀಸ್ ಇಲಾಖೆಯು ಡಾಗ್ ಸ್ಕ್ವಾಡ್ ಬಳಕೆ ಮಾಡುತ್ತದೆ. ಈ​ ಶ್ವಾನಗಳು ನಿಷ್ಠೆಯಿಂದ ಆರೋಪಿಗಳನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ನಿರ್ವವಹಿಸುತ್ತವೆ. ದಾವಣಗೆರೆ ತಾಲೂಕಿನ ಮಲ್ಲಶೆಟ್ಟಿಹಳ್ಳಿ ಸಮೀಪ ನಡೆದಿದ್ದ ಕೊಲೆ ಪ್ರಕರಣವೊಂದನ್ನು ಭೇದಿಸುವಲ್ಲಿ ಪೊಲೀಸ್ ಶ್ವಾನ ತಾರಾ (ಆಗಸ್ಟ್​ 11-2023) ಯಶಸ್ವಿಯಾಗಿದ್ದಳು. ಘಟನೆ ನಡೆದ ಸ್ಥಳದಿಂದ 8 ಕಿ.ಮೀ ದೂರ ಕ್ರಮಿಸಿದ ತಾರಾ ಅಪರಾಧಿಯ ಹೆಡೆಮುರಿಕಟ್ಟುವಲ್ಲಿ ಪೊಲೀಸರಿಗೆ ಸಾಥ್ ನೀಡಿದ್ದಳು.

ದಾವಣಗೆರೆಯಲ್ಲಿ ಕಳ್ಳರಿಗೆ ಸಿಂಹಸ್ವಪ್ನವಾಗಿದ್ದ ಶ್ವಾನ ತುಂಗಾ ಪೊಲೀಸ್​ ಇಲಾಖೆಯನ್ನು ಅಗಲಿ ಒಂದು ವರ್ಷ ಉರುಳಿದೆ. ಇಲಾಖೆ ಭೇದಿಸಲು ಕಷ್ಟ ಎಂದು ಪರಿಗಣಿಸಿದ್ದ ಪ್ರಕರಣಗಳನ್ನು ಈ ಶ್ವಾನ ಭೇದಿಸಿದೆ. ಇದೀಗ ತುಂಗಾಳ ಸ್ಥಾನವನ್ನು ತಾರಾ ತುಂಬಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: 8 ಕಿಲೋಮೀಟರ್‌ ಓಡಿ ಕೊಲೆ ಪ್ರಕರಣದ ಆರೋಪಿಯ ಸುಳಿವು ಕೊಟ್ಟ ತಾರಾ! ಇದು ಪೊಲೀಸ್​ ಶ್ವಾನದ ಸಾಹಸಗಾಥೆ

Last Updated : Aug 14, 2023, 6:45 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.