ETV Bharat / state

ಗ್ರಾಮ ವಾಸ್ತವ್ಯದಲ್ಲಿ ತಹಶೀಲ್ದಾರ್​ ನೃತ್ಯ: ಅಸಮಾಧಾನಗೊಂಡ ಬಂಗಾರಪೇಟೆ ಶಾಸಕ

ಸರ್ಕಾರದ ಯೋಜನೆಯಾಗಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮದ‌ ವೇಳೆ ಬಂಗಾರಪೇಟೆ ತಾಲೂಕಿನ ನರಿನತ್ತ ಗ್ರಾಮದಲ್ಲಿ ತಹಶೀಲ್ದಾರ್​​ ಹಾಗೂ ಅಧಿಕಾರಿಗಳು ನೃತ್ಯ ಮಾಡಿರುವುದಕ್ಕೆ ಶಾಸಕ ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

MLA Narayanaswamy
ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿಕೆ
author img

By

Published : Feb 23, 2021, 7:53 PM IST

ಕೋಲಾರ: ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಹಾಗೂ ಅಧಿಕಾರಿಗಳು ನೃತ್ಯ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಖಾಸಗಿ ಕಾರ್ಯಕ್ರಮದವೊಂದರಲ್ಲಿ ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜನರ ಸಮಸ್ಯೆ ಆಲಿಸಿ ಅವರಿಗೆ ಸ್ಪಂದಿಸುವುದನ್ನು ಬಿಟ್ಟು‌ ಮೋಜು ಮಸ್ತಿ ಮಾಡಿದ ತಹಶೀಲ್ದಾರ್ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹೇಳಿಕೆ

ಇದನ್ನು ಓದಿ: 'ಗ್ರಾಮ ವಾಸ್ತವ್ಯ' ವೇಳೆ ಕುಣಿದು ಕುಪ್ಪಳಿಸಿದ ಅಧಿಕಾರಿಗಳು

ಕಳೆದ ಶನಿವಾರ ಬಂಗಾರಪೇಟೆ ತಾಲೂಕಿನ ನರಿನತ್ತ ಗ್ರಾಮದಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಹಿಳಾ ಗ್ರಾಮಲೆಕ್ಕಿಗರ ಜೊತೆಗೆ ತಹಶೀಲ್ದಾರ್ ದಯಾನಂದ್ ಗ್ರಾಮಸ್ಥರ ಎದುರೇ ಡ್ಯಾನ್ಸ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.