ಕೋಲಾರ: ಕೃಷ್ಣಮೃಗಗಳ ತಾಣವಾಗಿರುವ ಕೆಜಿಎಫ್ ತಾಲೂಕಿನ ಕೃಷ್ಣಾವರಂ ಬಳಿ ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ಹತ್ತಾರು ಎಕರೆ ಹುಲ್ಲುಗಾವಲು ಬೆಂಕಿಗಾಹುತಿಯಾಗಿದೆ.
ನೂರಾರು ಎಕರೆ ಇರುವ ಈ ಹುಲ್ಲುಗಾವಲು ಪ್ರದೇಶದಲ್ಲಿ ಸಾಕಷ್ಟು ಕೃಷ್ಣಮೃಗಗಳು, ಜಿಂಕೆ, ಮೊಲ ಮುಂತಾದ ಪ್ರಾಣಿಗಳು ವಾಸವಾಗಿವೆ. ಬೇಸಿಗೆ ಆರಂಭವಾಗಿದ್ದು, ವನ್ಯ ಮೃಗಗಳಿಗೆ ಇಲ್ಲಿನ ಹುಲ್ಲು ಆಹಾರವಾಗಿತ್ತು. ಆದರೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಪರಿಣಾಮ ಹುಲ್ಲುಗಾವಲು ಸುಟ್ಟು ಹೋಗಿದೆ.
ಓದಿ : ರಾಯಲ್ ಎನ್ಫೀಲ್ಡ್ ಬೈಕ್ ಮೇಲೆ ಯುವತಿಯರ ಸ್ಟಂಟ್: ವಿಡಿಯೋ ವೈರಲ್
ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಸ್ಥಳೀಯರು ಬೆಂಕಿ ನಂದಿಸಲು ಸಹಾಯ ಮಾಡಿದರು. ಬೇಸಿಗೆ ಆರಂಭವಾಗುತ್ತಿರುವುದರಿಂದ ಪ್ರಾಣಿಗಳಿಗೆ ನೀರು ಮತ್ತು ಆಹಾರಕ್ಕೆ ಕೊರತೆ ಉಂಟಾಗಲಿದ್ದು, ಅರಣ್ಯ ಇಲಾಖೆಯವರು ನೀರು-ಆಹಾರದ ವ್ಯವಸ್ಥೆ ಮಾಡುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.