ETV Bharat / state

ನಿರಂತರ ಸುರಿಯುತ್ತಿರುವ ಮಳೆ.. ಟ್ರ್ಯಾಕ್ಟರ್, ಟೆಂಪೋ ಮೂಲಕ ಪ್ರಯಾಣಿಸುತ್ತಿರುವ ಜನ - continuous rain in kolar district

ನಿರಂತರ ಸುರಿಯುತ್ತಿರುವ ಮಳೆಯಿಂದ ಕೋಲಾರ ಜಿಲ್ಲೆಯಲ್ಲಿ ಭಾರಿ ಹಾನಿ ಸಂಭವಿಸಿದೆ. ಕಳೆದ 10 ದಿನಗಳಿಂದ ಸುರಿಯುತ್ತಿರುವ ಮಳೆಗೆ ಸೇವಂತಿ ಸೇರಿದಂತೆ ಹಲವು ಬೆಳೆಗಳು ಸಂಪೂರ್ಣ ನೀರುಪಾಲಾಗಿದ್ದು ರೈತರು ಕಂಗಾಲಾಗಿದ್ದಾರೆ.

Massive damage in Kolar district
ಮೊಣಕಾಲುದ್ದ ನೀರಿನಲ್ಲಿ ಬರುತ್ತಿರುವ ಜನ
author img

By

Published : Sep 8, 2022, 3:54 PM IST

Updated : Sep 8, 2022, 4:39 PM IST

ಕೋಲಾರ: ಜಿಲ್ಲೆಯಾದ್ಯಂತ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ನೀರಿನಿಂದ ಬಂದ್ ಆಗಿವೆ. ಈ ಹಿನ್ನೆಲೆ ಟ್ರ್ಯಾಕ್ಟರ್ ಹಾಗೂ ಟೆಂಪೋಗಳಲ್ಲಿ ಜನರು ರಸ್ತೆ ದಾಟುವಂತಹ ಪರಿಸ್ಥಿತಿ ಎದುರಾಗಿದೆ. ಕೋಲಾರ ತಾಲೂಕು ಹೋಳೂರು ಹಾಗೂ ಬೆಳ್ಳಂಬರಿ ಗ್ರಾಮಗಳಿಗೆ ಸಂಪರ್ಕವಿರುವ ರಸ್ತೆಗಳು ಬಂದ್ ಆಗಿದ್ದು, ಜನರು ಪರದಾಡುವಂತಾಗಿದೆ.

Massive damage in Kolar district
ಮೊಣಕಾಲುದ್ದ ನೀರಿನಲ್ಲಿ ತೆರಳುತ್ತಿರುವ ಜನ

ಇನ್ನು, ನಿರಂತರ ಮಳೆಯಿಂದಾಗಿ ಮುದುವಾಡಿ ಕೆರೆ ಕೋಡಿ ಹರಿಯುತ್ತಿರುವ ಪರಿಣಾಮ ಈ ಭಾಗದಲ್ಲಿರುವ ಗ್ರಾಮಗಳ ರಸ್ತೆಗಳು ಜಲಾವೃತವಾಗಿವೆ. ಈ ಮುದುವಾಡಿ ಕೆರೆ ಕೋಲಾರ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮೇಲೆಯೇ ಕೋಡಿ ಹರಿಯುತ್ತಿದ್ದು, ನಗರಕ್ಕೆ ಹೋಗಲು ರಸ್ತೆ ಇಲ್ಲದೆ ಜನರಿಗೆ ಸಂಕಷ್ಟ ಎದುರಾಗಿದೆ. ಅಲ್ಲದೆ ಗಾರ್ಮೆಂಟ್ಸ್ ಸೇರಿದಂತೆ ಬೇರೆ ಕೆಲಸಗಳಿಗೆ ಹೋಗುವ ಜನರು ಹಾಗೂ ವಿದ್ಯಾರ್ಥಿಗಳು ರಸ್ತೆ ದಾಟಲು ಪರದಾಡುತ್ತಿದ್ದು, ಟ್ರ್ಯಾಕ್ಟರ್​ ಹಾಗೂ ಟೆಂಪೋಗಳ ಮೂಲಕ ರಸ್ತೆ ದಾಟುತ್ತಿರುವುದು ಕಂಡುಬಂದಿದೆ.

ಕೋಲಾರ ಜಿಲ್ಲೆಯಲ್ಲಿ ಭಾರಿ ಹಾನಿ

ಇದಲ್ಲದೆ ಸ್ಥಳೀಯರ ಎಚ್ಚರಿಕೆ ಹೊರತಾಗಿಯೂ ಬೈಕ್ ಸವಾರರು ನೀರಿನಲ್ಲಿಯೇ ಹರಸಾಹಸಪಟ್ಟು ದಾಟುತ್ತಿದ್ದ ದೃಶ್ಯ ಕಂಡುಬಂದಿತು. ಇದಲ್ಲದೆ ಮಳೆ ಅವಾಂತರದಿಂದ ರೈತರ ತೋಟಗಳು ಸಂಪೂರ್ಣ ಜಲಾವೃತವಾಗಿದ್ದು, ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆಯಲಾಗಿದ್ದ ಹೂತೋಟ ಜಲಾವೃತವಾಗಿದೆ.

Massive damage in Kolar district
ಕೋಲಾರ ಜಿಲ್ಲೆಯಲ್ಲಿ ಭಾರಿ ಹಾನಿ

ಕೋಲಾರ ತಾಲೂಕಿನ ಅಮ್ಮೇರಹಳ್ಳಿಯ ರೈತ‌ ಚಂದ್ರಶೇಖರ್ ಎಂಬುವರು ಸೇವಂತಿಯನ್ನು ಬೆಳೆಯಲಾಗಿದ್ದು, ಕಳೆದ 10 ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೆಳೆ ಸಂಪೂರ್ಣ ಹಾನಿಯಾಗಿದೆ. ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದ ಸೇವಂತಿ ತೋಟ ನಾಶವಾಗಿದ್ದು, ಸರ್ಕಾರ ರೈತರ ನೆರವಿಗೆ ದಾವಿಸಬೇಕೆಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ನದಿಗೆ ಲಕ್ಷ ಕ್ಯೂಸೆಕ್ ನೀರು: ಶ್ರೀಕೃಷ್ಣದೇವರಾಯ ಸಮಾಧಿ ಸ್ಮಾರಕ ಜಲಾವೃತ, ಸೇತುವೆ ಸಂಚಾರ ಸ್ಥಗಿತ

Last Updated : Sep 8, 2022, 4:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.