ETV Bharat / state

ಅಬಕಾರಿ ಸಚಿವ ಹೆಚ್ ನಾಗೇಶ್ ಅವರಿಂದ ಲಾಕ್​ಡೌನ್​ ಉಲ್ಲಂಘನೆ ಆರೋಪ - Excise Minister H. Nagesh news

ಇವತ್ತು ಮುಳಬಾಗಿಲಿನ ಎಸ್‌ಎನ್‌ಎನ್‌ ಕ್ರಾಸ್ ಬಳಿ ನೂತನ ಸರ್ಕಾರಿ ನ್ಯಾಯಬೆಲೆ ಅಂಗಡಿಯ ಪೂಜಾ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು..

xcise Minister H. Nagesh
ಅಬಕಾರಿ ಸಚಿವ ಎಚ್. ನಾಗೇಶ್ ಅವರಿಂದ ಲಾಕ್​ಡೌನ್​ ಉಲ್ಲಂಘನೆ ಆರೋಪ
author img

By

Published : Jul 19, 2020, 5:52 PM IST

ಕೋಲಾರ : ಅಬಕಾರಿ ಸಚಿವ ಹೆಚ್‌ ನಾಗೇಶ್ ಅವರೇ ಕೋಲಾರದಲ್ಲಿ ಲಾಕ್​ಡೌನ್ ಉಲ್ಲಂಘನೆ ಮಾಡುವ ಮೂಲಕ ಜನಸಾಮಾನ್ಯರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಅಬಕಾರಿ ಸಚಿವ ಹೆಚ್ ನಾಗೇಶ್ ಅವರಿಂದ ಲಾಕ್​ಡೌನ್​ ಉಲ್ಲಂಘನೆ ಆರೋಪ

ಇವತ್ತು ಮುಳಬಾಗಿಲಿನ ಎಸ್‌ಎನ್‌ಎನ್‌ ಕ್ರಾಸ್ ಬಳಿ ನೂತನ ಸರ್ಕಾರಿ ನ್ಯಾಯಬೆಲೆ ಅಂಗಡಿಯ ಪೂಜಾ ಕಾರ್ಯಕ್ರಮವನ್ನ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗವಹಿಸಿದ್ದು, ಸಾಮಾಜಿಕ ಅಂತರವೂ ಇಲ್ಲದೆ, ದೈಹಿಕ ಅಂತರವೂ ಇಲ್ಲದೆ, ಮಾಸ್ಕ್ ಕೂಡಾ ಇಲ್ಲದೆ ಇರೋದು ಕಂಡು ಬಂತು.

ಇನ್ನು, ಲಾಕ್​ಡೌ‌ನ್ ದಿನದಂದೆ ಕಾರ್ಯಕ್ರಮವನ್ನ ಆಯೋಜನೆ ಮಾಡಿರುವುದು ಜೊತೆಗೆ ನಿಯಮಗಳನ್ನ ಗಾಳಿಗೆ ತೂರಿ, ನೂರಾರು ಜನರನ್ನೊಳಗೊಂಡಂತೆ ಕಾರ್ಯಕ್ರಮವನ್ನ ಉದ್ಘಾಟನೆ ಮಾಡುವ ಮೂಲಕ ಲಾಕ್​ಡೌನ್ ಉಲ್ಲಂಘನೆ ಮಾಡಿದ್ದಾರೆ.

ದಿನದಿಂದ ದಿನಕ್ಕೆ‌ ಕೊರೊನಾ ಸೋಂಕು ಹೆಚ್ಚುತ್ತಿದ್ರೂ ಸಚಿವರು ಬೇಜವಾಬ್ದಾರಿ ಪ್ರದರ್ಶನ ಮಾಡುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ ಸಚಿವರಿಗೆ ಒಂದು ನಿಯಮ, ಜನ ಸಾಮಾನ್ಯರಿಗೆ ಒಂದು ನಿಯಮಾನಾ ಅಂತಾ ಪ್ರಶ್ನಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.