ETV Bharat / state

ಬಂಗಾರಪೇಟೆಯಲ್ಲಿ ಕಾಡಾನೆ ದಾಳಿಗೆ ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶ

ಒಂದೆಡೆ ಕೊರೊನಾ ಲಾಕ್​​ಡೌನ್​ನಿಂದಾಗಿ ಮಾರುಕಟ್ಟೆ ವ್ಯವಸ್ಥೆಯಾಗದೆ ರೈತರು ಪರಿತಪಿಸುವಂತಾಗಿತ್ತು. ರಾಜ್ಯದ ರೈತರು ಬೆಳೆದಿದ್ದ ಬೆಳೆ ನಾಶವಾಗಿತ್ತು. ಕೇವಲ ಕೊರೊನಾದಿಂದ ಮಾತ್ರವಲ್ಲದೆ ಕಾಡು ಪ್ರಾಣಿಗಳ ಹಾವಳಿಯಿಂದಲೂ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

lakhs worth crops destroyed in bangarapete in attack of Elephants
ಬಂಗಾರಪೇಟೆಯಲ್ಲಿ ಕಾಡಾನೆ ದಾಳಿಗೆ ಲಕ್ಷಾಂತರ ಮೌಲ್ಯದ ಬೆಳೆ ನಾಶ
author img

By

Published : May 23, 2020, 4:27 PM IST

ಕೋಲಾರ: ಕೊರೊನಾ ಆತಂಕದ ನಡುವೆಯೂ ಕೋಲಾರ ಜಿಲ್ಲೆಯ ಗಡಿ ಭಾಗದಲ್ಲಿ ಕಾಡಾನೆಗಳ‌ ಹಾವಳಿ ಮುಂದುವರೆದಿದೆ. ಇರುವ ಅಲ್ಪ ಸ್ವಲ್ಪ ನೀರಿನಲ್ಲಿ ಸಾಲ ಮಾಡಿ ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿರುವ ರೈತನಿಗೆ ಕಾಡಾನೆಗಳು ಗಾಯದ ಮೇಲೆ ಬರೆ ಎಳೆದಿವೆ.

ಬಂಗಾರಪೇಟೆಯಲ್ಲಿ ಕಾಡಾನೆ ದಾಳಿಗೆ ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶ

ಜಿಲ್ಲೆಯ ಬಂಗಾರಪೇಟೆ ‌ತಾಲೂಕಿನ ಗಡಿ ಭಾಗದ ಮಾರಾಂಡಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಡಾನೆಗಳು ಲಕ್ಷಾಂತರ ರೂಪಾಯಿ ಬೆಳೆ ನಾಶ ಮಾಡಿವೆ. ಮಾರಾಂಡಹಳ್ಳಿ ಗ್ರಾಮದ ಶಿವಪ್ಪ ಹಾಗೂ ವೆಂಕಟೇಶಪ್ಪ ಎಂಬುವರಿಗೆ ಸೇರಿದ ಟೊಮ್ಯಾಟೊ, ಬಾಳೆ ಗಿಡ, ತೆಂಗಿನಮರಗಳನ್ನು ರಾತ್ರೋರಾತ್ರಿ ಸುಮಾರು 10 ಕಾಡಾನೆಗಳ ಹಿಂಡು ನಾಶ ಮಾಡಿವೆ. ಇಷ್ಟಾದರೂ ಸ್ಥಳಕ್ಕೆ ಬಾರದ ಅರಣ್ಯಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.