ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೂದಿಕೋಟೆ, ಮಾಲೂರು ತಾಲೂಕಿನ ಟೇಕಲ್ ಭಾಗದ ಸುತ್ತಮುತ್ತ ಪ್ರದೇಶಗಳಲ್ಲಿ ಭಯಂಕರವಾದ ಶಬ್ದ ಕೇಳಿ ಬಂದಿದೆ.
ಸುಮಾರು 2.30 ಕ್ಕೆ ಈ ಶಬ್ದ ಕೇಳಿ ಬಂದಿದ್ದು, ಇಲ್ಲಿನ ಜನರಲ್ಲಿ ಒಂದು ರೀತಿಯ ಭಯ, ಆತಂಕ ಸೃಷ್ಟಿಸಿದೆ. ಏನೋ ಆಗಿದೆ ಎನ್ನುವಂತಹ ಭಯದಲ್ಲಿ ಮನೆಯಿಂದ ಹೊರಬಂದಿರುವ ಜನರು, ಶಬ್ದವೇನೆಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಇತ್ತೀಚೆಗಷ್ಟೆ ಬೆಂಗಳೂರು ಭಾಗದಲ್ಲಿ ಇದೇ ರೀತಿಯ ಶಬ್ದ ಕೇಳಿ ಬಂದಿದ್ದು, ಜನರನ್ನು ಚಿಂತೆಗೀಡು ಮಾಡಿತ್ತು.