ಕೋಲಾರ: ಲೋಕ ಸಮರದ ನಂತರ ಕೋಲಾರದ 3 ಪುರಸಭೆಗೆ ನಡೆದ ಚುನಾವಣೆಯಲ್ಲಿ 2 ಪುರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಒಂದು ಪುರಸಭೆಯಲ್ಲಿ ಸ್ಪಷ್ಟ ಬಹುಮತ ಪಡೆದಿರುವ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ.
ಕೋಲಾರ ಜಿಲ್ಲೆಯ ಮಾಲೂರು, ಬಂಗಾರಪೇಟೆ ಮತ್ತು ಶ್ರೀನಿವಾಸಪುರ ಪುರಸಭೆಗಳ ಪೈಕಿ ಮಾಲೂರು ಮತ್ತು ಶ್ರೀನಿವಾಸಪುರ ಪುರಸಭೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಬಂಗಾರಪೇಟೆ ಕಾಂಗ್ರೆಸ್ ಪಾಲಾಗಿದೆ.
- ಮಾಲೂರು ಪುರಸಭೆಯಲ್ಲಿ ಕಾಂಗ್ರೆಸ್ 11, ಬಿಜೆಪಿ 10, ಜೆಡಿಎಸ್ 1, ಪಕ್ಷೇತರರು 5 ಸ್ಥಾನ ಗೆಲುವು ಸಾಧಿಸಿದ್ದಾರೆ. ಆದರೆ, ಇಲ್ಲಿ ಅತಂತ್ರ ಸ್ಥಿತಿ ನಿರ್ಮಾಣಗೊಂಡಿದೆ.
- ಶ್ರೀನಿವಾಸಪುರದಲ್ಲಿ ಕಾಂಗ್ರೆಸ್ 8, ಜೆಡಿಎಸ್ 11, ಪಕ್ಷೇತರ 4 ಸ್ಥಾನ ಗೆಲುವು ಸಾಧಿಸಿದ್ದು, ಇಲ್ಲಿಯೂ ಸಹ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
- ಬಂಗಾರಪೇಟೆ ಪುರಸಭೆಯಲ್ಲಿ ಕಾಂಗ್ರೆಸ್ 20, ಬಿಜೆಪಿ 1, ಜೆಡಿಎಸ್ 2, ಪಕ್ಷೇತರ 4 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಂಗಾರಪೇಟೆ ಪುರಸಭೆಯನ್ನು ಕಾಂಗ್ರೆಸ್ ತನ್ನ ತಕ್ಕೆಗೆ ತೆಗೆದುಕೊಂಡಿದೆ.
ಮಾಲೂರು ಮತ್ತು ಶ್ರೀನಿವಾಸಪುರ ಪುರಸಭೆಗಳಲ್ಲಿ ಪಕ್ಷೇತರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಅಧಿಕಾರ ಯಾರ ಪಾಲಾಗುತ್ತದೆ ಅನ್ನೋ ಕೂತೂಹಲ ಮೂಡಿಸಿದೆ. ಫಲಿತಾಂಶ ಹೊರ ಬರುತ್ತಿದ್ದಂತೆ ಗೆಲುವು ಸಾಧಿಸಿದ ಅಭ್ಯರ್ಥಿಗಳು ಮತಎಣಿಕೆ ಕೇಂದ್ರದ ಬಳಿ ವಿಜಯೋತ್ಸವ ಆಚರಿಸಿದರು.