ETV Bharat / state

ರೈತರಿಂದ ತರಕಾರಿ ಖರೀದಿಸಿದ ಕೋಲಾರ ಸಂಸದ.. - ರೈತರಿಂದ ತರಕಾರಿ ಖರೀದಿಸಿದ ಸಂಸದ ಎಸ್. ಮುನಿಸ್ವಾಮಿ

ಸಂಸದ ಎಸ್. ಮುನಿಸ್ವಾಮಿ ಅವರು ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ತರಕಾರಿಗಳನ್ನ ಖರೀದಿಸಿ, ಬೆಲೆ ಇಲ್ಲದೇ ಕಂಗಾಲಾಗಿದ್ದ ರೈತರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ. ಅಲ್ಲದೇ ಸ್ಥಳದಲ್ಲಿಯೇ ರೈತರಿಗೆ ಹಣ ನೀಡಿದ ಅವರು ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ.

Kolar MP   bought vegetables from farmers
ರೈತರಿಂದ ತರಕಾರಿ ಖರೀದಿಸಿದ ಸಂಸದ ಎಸ್. ಮುನಿಸ್ವಾಮಿ
author img

By

Published : Apr 13, 2020, 6:23 PM IST

ಕೋಲಾರ: ಲಾಕ್​ಡೌನ್​ನಿಂದಾಗಿ, ರೈತರು ತಾವು ಬೆಳೆದ ಬೆಳೆಗೆ ಬೆಲೆ ಇಲ್ಲದೇ, ಸರಿಯಾದ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಸಂಸದ ಎಸ್. ಮುನಿಸ್ವಾಮಿ ಅವರು ಇಂದು ಮಾರುಕಟ್ಟೆಯಲ್ಲಿ ರೈತರ ತರಕಾರಿಯನ್ನು ಖರೀದಿ ಮಾಡಿದ್ದಾರೆ.

ರೈತರಿಂದ ತರಕಾರಿ ಖರೀದಿಸಿದ ಸಂಸದ ಎಸ್. ಮುನಿಸ್ವಾಮಿ

ಕೋಲಾರ ಹೊರವಲಯದಲ್ಲಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ತರಕಾರಿಗಳನ್ನ ಖರೀದಿ ಮಾಡಿದ ಸಂಸದರು, ಬೆಲೆ ಇಲ್ಲದೇ ಕಂಗಾಲಾಗಿದ್ದ ರೈತರಲ್ಲಿ ಧೈರ್ಯ ತುಂಬಿದ್ರು‌. ರೈತರಿಂದ ಟೊಮೇಟೊ, ಕೋಸು, ಎಲೆಕೋಸು, ಬದನೆಕಾಯಿ, ಸೇರಿದಂತೆ ವಿವಿಧ ರೀತಿಯ ತರಕಾರಿಗಳನ್ನ ಖರೀದಿ ಮಾಡಿದ ಅವರು ಸ್ಥಳದಲ್ಲಿಯೇ ರೈತರಿಗೆ ಹಣ ನೀಡಿದ್ರು.

ಇದಲ್ಲದೇ ರೈತರಿಂದ ಸುಮಾರು 6 ಟನ್ ತರಕಾರಿ ಖರೀದಿ ಮಾಡಿ ಕೋಲಾರದ ಜನರಿಗೆ ಉಚಿತವಾಗಿ ಹಂಚಲು ಸಿದ್ದತೆ ಮಾಡಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.